ರಿಪ್ಪನ್‌ಪೇಟೆ : ನೇಣು ಬಿಗಿದುಕೊಂಡು  ಯುವಕ ಆತ್ಮಹತ್ಯೆ

prathapa thirthahalli
Prathapa thirthahalli - content producer

Riponpete : ರಿಪ್ಪನ್‌ಪೇಟೆ :ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಮೃತ ಯುವಕನನ್ನು 26 ವರ್ಷದ ಕಿರಣ್ ಎಂದು ಗುರುತಿಸಲಾಗಿದೆ. 

Riponpete Youth Ends Life in Kenchanala Due to Severe Abdominal Pain
Riponpete Youth Ends Life in Kenchanala Due to Severe Abdominal Pain

ಕಿರಣ್ ಅವರು ಹಲವು ದಿನಗಳಿಂದಲೂ ತೀವ್ರವಾದ ಹೊಟ್ಟೆನೋವಿನ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದರು. ಈ ಕಾರಣದಿಂದ ಕುಟುಂಬದವರು ವಿವಿಧ ಸ್ಥಳಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹ ನೋವು ನಿಯಂತ್ರಣಕ್ಕೆ ಬಂದಿರಲಿಲ್ಲ.

ಇದರಿಂದ ಮನನೊಂದಿದ್ದ ಅರುಣ್​ ನವೆಂಬರ್ 19 ರಂದು ರಾತ್ರಿ ಊಟವಾದ ನಂತರ ಕಿರಣ್ ಔಷಧಿಯನ್ನು ಸೇವಿಸಿ ಮಲಗಿದ್ದರು. ನವೆಂಬರ್ 20 ರ ಬೆಳಿಗ್ಗೆ, ಮನೆಯ ಸದಸ್ಯರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿದ್ದಾಗ, ಕಿರಣ್ ಇದ್ದ ಕೊಠಡಿಯ ಬಾಗಿಲುಗಳು ಒಳಭಾಗದಿಂದ ಭದ್ರವಾಗಿ ಮುಚ್ಚಿರುವುದು ಅವರ ಗಮನಕ್ಕೆ ಬಂದಿದೆ. 

ಎಷ್ಟೇ ಕರೆದರೂ ಬಾಗಿಲು ತೆರೆಯದ ಕಾರಣ, ಕುಟುಂಬಸ್ಥರು ಅನಿವಾರ್ಯವಾಗಿ ಮನೆಯ ಅಂಚನ್ನು ತೆಗೆದು ಒಳಗೆ ನೋಡಿದಾಗ, ಕಿರಣ್ ಅವರು ಕೋಣೆಯ ಮೇಲ್ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Riponpete Youth Ends Life in Kenchanala Due to Severe Abdominal Pain

Riponpete Youth Ends Life in Kenchanala Due to Severe Abdominal Pain

Share This Article