Daily Vedic Astrology June 26 2025 / ದಿನಭವಿಷ್ಯ / ದಿನದ ವ್ಯವಹಾರ, ಉದ್ಯೋಗದಲ್ಲಿ ಇಂದು ಅಚ್ಚರಿಯ ದಿನ

ajjimane ganesh

ದಿನದ ರಾಶಿ ಭವಿಷ್ಯ: ಜೂನ್ 26, 2025 – ನಿಮ್ಮ ಅದೃಷ್ಟ ಇಂದು ಹೇಗಿದೆ? Daily Vedic Astrology June 26 2025 Horoscope Insights

Shivamogga news / ಶಿವಮೊಗ್ಗ, ಕರ್ನಾಟಕ: 2025ರ ಜೂನ್ 26, ಗುರುವಾರವು ವಿವಿಧ ರಾಶಿಗಳವರಿಗೆ ವಿಭಿನ್ನ ಫಲಗಳನ್ನು ಹೊತ್ತು ತಂದಿದೆ. ನಿಮ್ಮ ಈ ದಿನವು ಧನ ಕನಕದಿಂದ ತುಂಬಿ, ಶುಭಕರವಾಗಿರಲಿ ಎಂದು ಆಶಿಸುತ್ತಾ ಇವತ್ತಿನ ರಾಶಿ ಭವಿಷ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ:

ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಅನಿರೀಕ್ಷಿತ ಉದ್ಯೋಗಾವಕಾಶ  ಒದಗಿ ಬರಲಿವೆ. ಆರ್ಥಿಕವಾಗಿ ಪ್ರಗತಿ ಸಾಧಿಸುವಿರಿ ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದ್ದು, ವ್ಯವಹಾರ ಲಾಭದಾಯಕವಾಗಿರುತ್ತವೆ. ಉದ್ಯೋಗದಲ್ಲಿರುವವರಿಗೆ ಹೊಸ ಸ್ಥಾನಮಾನ ದೊರೆಯುವ ಸಾಧ್ಯತೆಯಿದೆ.

- Advertisement -

ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಕೆಲಸದಲ್ಲಿ ವಿಳಂಬ ಉಂಟಾಗಬಹುದು. ಆರ್ಥಿಕವಾಗಿ ಕೆಲವು ತೊಂದರೆಗ ಎದುರಿಸಬೇಕಾಗಬಹುದು. ದೂರ ಪ್ರಯಾಣ ಸಾಧ್ಯತೆ ಇದೆ. ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಳ್ಳಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸ್ವಲ್ಪ ಗೊಂದಲದ ವಾತಾವರಣ ಇರಲಿದೆ.

Daily Vedic Astrology June 26 2025 Horoscope Insights

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಇಂದು ಹೊಸ ಉದ್ಯೋಗಾವಕಾಶ ಒದಗಿ ಬರಲಿವೆ. ಸಭೆ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಲು ಅವಕಾಶ ಸಿಗಲಿದ್ದು, ನಿಮ್ಮ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ಆರ್ಥಿಕ ಲಾಭದ ನಿರೀಕ್ಷೆಯಿದ್ದು, ಉದ್ಯೋಗ ಮತ್ತು ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ.

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಇಂದು ಸ್ನೇಹಿತರಿಂದ ಮಾತು  ಕೇಳಬೇಕಾದ ಸನ್ನಿವೇಶ ಬರಬಹುದು, ಅನಿರೀಕ್ಷಿತ ಖರ್ಚು, ವಿನಾಕಾರಣದ ಸಮಸ್ಯೆ  ಸಾಧ್ಯತೆಯಿದೆ. ಸಂಬಂಧಿಕರ ಭೇಟಿ, ಕಠಿಣ ಪರಿಶ್ರಮ ಅನಿವಾರ್ಯವಾಗುತ್ತದೆ. ಕೆಲಸದಲ್ಲಿ ಕೆಲವು ಅಡೆತಡೆಗಳು ಇರಲಿದ್ದು,  ಉದ್ಯೋಗ ಮತ್ತು ವ್ಯವಹಾರದಲ್ಲಿ ಒತ್ತಡವನ್ನು ಅನುಭವಿಸುವಿರಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಸಾಲ ತೀರಿಸುವ ಯೋಗವಿದೆ. ನಿಮ್ಮ ಸ್ನೇಹಿತರು ನಿಮ್ಮ ಹತ್ತಿರವಾಗಲಿದ್ದು, ವಾಹನ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯವಿದು. ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ ಮತ್ತು ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಅವಕಾಶ ಸಿಗಲಿದೆ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳು ಕಂಡುಬರಲಿವೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಹೊಸ ಕೆಲಸ ಪ್ರಾರಂಭಿಸಲು ಶುಭ ದಿನ. ಶುಭ ಸುದ್ದಿಗಳನ್ನು ಕೇಳುವ ಅವಕಾಶ ಸಿಗಲಿದ್ದು, ದೂರದ ಬಂಧುಗಳನ್ನು ಭೇಟಿ ಮಾಡುವ ಸಾಧ್ಯತೆಯಿದೆ. ನಿಮ್ಮ ವ್ಯವಹಾರ ವಿಸ್ತರಿಸಬಹುದು. ಉದ್ಯೋಗದಲ್ಲಿರುವವರಿಗೆ ಸ್ಥಾನಮಾನ ದೊರೆಯುವ ನಿರೀಕ್ಷೆಯಿದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಖರ್ಚುಗಳು ಹೆಚ್ಚಾಗಲಿವೆ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಜಗಳ ಉಂಟಾಗಬಹುದು. ನಿಮ್ಮ ಆಲೋಚನೆಗಳಲ್ಲಿ ಅಸ್ಥಿರತೆ ಇರಲಿದೆ. ಕೆಲಸ ಮುಂದೂಡಲ್ಪಡುವ ಸಾಧ್ಯತೆಯಿದ್ದು, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು.

Daily Vedic Astrology June 26 2025 Horoscope Insights

Daily Vedic Astrology June 26 2025 Horoscope Insights
Daily Vedic Astrology June 26 2025 Horoscope Insights

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ಆದಾಯ ಮೀರಿದ ಖರ್ಚುಗಳು ಎದುರಾಗಲಿವೆ. ಹೆಚ್ಚುವರಿ ಜವಾಬ್ದಾರಿ ನಿಮ್ಮ ಮೇಲೆ ಬೀಳಬಹುದು. ಕುಟುಂಬ ಸದಸ್ಯರೊಂದಿಗೆ ವಾದ ಸಂಭವಿಸಬಹುದು. ಆಧ್ಯಾತ್ಮಿಕ ಚಿಂತನೆಗಳಲ್ಲಿ ನಿರತರಾಗುವಿರಿ. ವ್ಯವಹಾರ ಸಾಮಾನ್ಯವಾಗಿರಲಿದ್ದು, ಉದ್ಯೋಗದಲ್ಲಿರುವವರಿಗೆ ಒತ್ತಡ ಹೆಚ್ಚಾಗಲಿದೆ.

ಧನು ರಾಶಿ: ಧನು ರಾಶಿಯವರಿಗೆ ಇಂದು ಸಂಬಂಧಿಕರ ಸಲಹೆಯನ್ನು ಸ್ವೀಕರಿಸುವುದು ಉತ್ತಮ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಆಸ್ತಿ ವಿವಾದ ಪರಿಹಾರವಾಗುವ ಸಾಧ್ಯತೆಯಿದೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಒಂದು ಹೆಜ್ಜೆ ಮುಂದಿಡಲಿದ್ದೀರಿ.

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಸಾಲ ಆಗಬಹುದು. ಪ್ರೀತಿಪಾತ್ರರಿಂದ ಶುಭ ಸುದ್ದಿಗಳನ್ನು ಕೇಳುವಿರಿ. ವಾಹನ ಬಳಕೆ ಮಾಡುವಾಗ ಜಾಗರೂಕರಾಗಿರಿ. ಭೂ ವಿವಾದ ಪರಿಹಾರವಾಗುವ ಸಾಧ್ಯತೆಯಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಉತ್ಸಾಹ ಕಂಡುಬರಲಿದೆ.

Daily Vedic Astrology June 26 2025 Horoscope Insights your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ?
your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ?

Daily Vedic Astrology June 26 2025 Horoscope Insights

ಕುಂಭ ರಾಶಿ: ಕುಂಭ ರಾಶಿಯವರಿಗೆ ಇಂದು ಕೆಲಸದಲ್ಲಿ ಅಡೆತಡೆ ಉಂಟಾಗಬಹುದು. ಆದಾಯಕ್ಕಿಂತ ಹೆಚ್ಚಿನ ಖರ್ಚುಗಳು ಎದುರಾಗಲಿವೆ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಜಗಳ ಸಂಭವಿಸಬಹುದು. ದೇವರ ದರ್ಶನ ಪಡೆಯುವ ಯೋಗವಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ವಾತಾವರಣವಿರುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಇಂದು ಆರೋಗ್ಯ ಸಮಸ್ಯೆಗಳು ಕಾಡಬಹುದು. ಕೆಲಸದಲ್ಲಿ ಅಡೆತಡೆ ಎದುರಾಗಲಿದ್ದು, ಆದಾಯವು ನಿರೀಕ್ಷಿತ ಮಟ್ಟದಲ್ಲಿ ಗೋಚರಿಸುವುದಿಲ್ಲ. ಆಸ್ತಿ ವಿವಾದ ತಲೆದೋರಬಹುದು. ದೇವಾಲಯಗಳಿಗೆ ಭೇಟಿ ನೀಡುವಿರಿ. ಉದ್ಯೋಗ ಮತ್ತು ವ್ಯವಹಾರಗಳು ನಿಧಾನಗತಿಯಲ್ಲಿ ಸಾಗಲಿವೆ.

ಇನ್ನಷ್ಟು ಸುದ್ದಿಗಳಿಗಾಗಿ  : malendutoday.com  ಕ್ಲಿಕ್ ಮಾಡಿ 

ರಾಶಿಭವಿಷ್ಯ :  https://www.wikihow.com/Capricorn-Colors

Explore today’s Rashi Bhavishya for June 26, 2025. Find out what the stars have in store for Aries, Taurus, Gemini, and all other signs, including insights on job, business, and personal life.

June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today
niithya bhavishya dina karnataka horoscope today important decisions ಜಾತಕ ಫಲ  Today rashi bhavishya ಈ ದಿನದ ಭವಿಷ್ಯTDaily horoscope astrosage oday rashi bhavishya

Daily Vedic Astrology

Share This Article
Leave a Comment

Leave a Reply

Your email address will not be published. Required fields are marked *