today Horoscope Dec 22 2025 Daily Astrology and Panchang for All Zodiac Signs ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷದ ಬಿದಿಗೆ ತಿಥಿಯು ಇಂದು ಬೆಳಿಗ್ಗೆ 9.34 ರವರೆಗೆ ಇರಲಿದ್ದು, ಆ ನಂತರ ತದಿಗೆ ಆರಂಭವಾಗಲಿದೆ. ಉತ್ತರಾಷಾಢ ನಕ್ಷತ್ರವು ಇಂದು ಪೂರ್ತಿ ಇದ್ದು ಮಂಗಳವಾರ ಬೆಳಗಿನ ಜಾವ 4.47 ಕ್ಕೆ ಮುಕ್ತಾಯವಾಗಿ ಶ್ರವಣ ನಕ್ಷತ್ರ ಆರಂಭವಾಗಲಿದೆ. ಅಮೃತ ಘಳಿಗೆಯು ರಾತ್ರಿ 9.50 ರಿಂದ 11.32 ರವರೆಗೆ ಇರಲಿದೆ. ರಾಹುಕಾಲವು ಬೆಳಿಗ್ಗೆ 7.30 ರಿಂದ 9.00 ರವರೆಗೆ ಹಾಗೂ ಯಮಗಂಡ ಕಾಲವು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ನಡೆಯಲಿದೆ.

ಮೇಷ : ಉದ್ಯೋಗ ಕ್ಷೇತ್ರದಲ್ಲಿ ಹೊಸ ಬದಲಾವಣೆ. ಶುಭ ಸಮಾಚಾರ, ಆಕಸ್ಮಿಕವಾಗಿ ಧನಲಾಭವಾಗುವ ಸಾಧ್ಯತೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅತ್ಯಂತ ಅನುಕೂಲಕರವಾದ ವಾತಾವರಣವಿರಲಿದ್ದು, ಹೊಸ ಮನೆ ಅಥವಾ ಆಸ್ತಿ ಮಾಡುವ ಯೋಗವಿದೆ
today Horoscope Dec 22 2025 Daily Astrology and Panchang for All Zodiac Signs
ವೃಷಭ : ಆರ್ಥಿಕ ವಿಷಯದಲ್ಲಿ ಸಂಕಷ್ಟ. ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದ್ದು, ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಮಾನಸಿಕವಾಗಿ ಆತಂಕ, ಆಸ್ತಿ ವಿಚಾರದಲ್ಲಿ ವಿವಾದ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಿ, ವ್ಯಾಪಾರ ಮತ್ತು ಉದ್ಯೋಗದಲ್ಲಿಂದು ಸಾಮಾನ್ಯ ದಿನ.
ಮಿಥುನ : ಅಂದುಕೊಂಡಿದ್ದು ಕೈಕೊಡುವ ಸಾಧ್ಯತೆ ಇದೆ. ಕಠಿಣ ಶ್ರಮವಹಿಸಿದರೂ ನಿರೀಕ್ಷಿತ ಪ್ರತಿಫಲ ಸಿಗದೆ ಇರಬಹದು, ಪ್ರಮುಖ ಕೆಲಸ ಕಾರಣಾಂತರಗಳಿಂದ ಮುಂದೂಡಲ್ಪಡಬಹುದು. ಬಂಧು-ಮಿತ್ರರೊಂದಿಗೆ ಅನಗತ್ಯ ಜಗಳ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಬದಲಾವಣೆ ಇರದು.

ಕರ್ಕಾಟಕ: ಆರ್ಥಿಕವಾಗಿ ಲಾಭದಾಯಕ ದಿನ. ಆದಾಯದ ಮೂಲ ಹೆಚ್ಚಾಗಲಿದ್ದು, ಹಿತೈಷಿಗಳೊಂದಿಗೆ ಸಂತೋಷದ ಸಮಯವನ್ನು ಕಳೆಯಲಿದ್ದೀರಿ. ಸಮಾಜಮುಖಿ ಸೇವೆಗಳಿಗೆ ಸೂಕ್ತ ಗೌರವ ಮತ್ತು ಮಾನ್ಯತೆ ದೊರೆಯಲಿದೆ. ಸಹೋದರರ ನಡುವಿನ ಹಳೆಯ ಕಿರಿಕಿರಿ ಅಂತ್ಯಗೊಳ್ಳಲಿದೆ. ವೃತ್ತಿಜೀವನವು ಆಶಾದಾಯಕವಾಗಿರಲಿದೆ, ಉದ್ಯೋಗದಲ್ಲಿ ಸಹಜ ವಾತಾವರಣ,.
today Horoscope Dec 22 2025 Daily Astrology and Panchang for All Zodiac Signs
ಸಿಂಹ : ಹೊಸ ಉದ್ಯೋಗ ದೊರೆಯುವ ಉತ್ತಮ ಅವಕಾಶ . ಹಳೆಯ ಗೆಳೆಯರನ್ನು ಭೇಟಿ ಮಾಡುವಿರಿ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ದಿನವಿಡಿ ಇಂದು ಉತ್ತಮ ಸಮಯವಾಗಿದೆ. ಲೆಕ್ಕಾಚಾರ ಸತ್ಯವಾಗಲಿದ್ದು, ವ್ಯಾಪಾರದಲ್ಲಿ ಪ್ರಗತಿ ಕಾಣಲಿದ್ದೀರಿ. ವಾಹನ ಖರೀದಿ, ಉದ್ಯೋಗದಲ್ಲಿ ಖುಷಿಯ ಸಂಗತಿ ಕೇಳುವಿರಿ.
ಕನ್ಯಾ : ಅನಿರೀಕ್ಷಿತ ಪ್ರಯಾಣ. ಕೈಗೆತ್ತಿಕೊಂಡ ಕೆಲವು ಕೆಲಸ ಅರ್ಧಕ್ಕೆ ನಿಂತು ಅಡೆತಡೆ ಉಂಟಾಗಬಹುದು. ಮನಸ್ಸಿನಲ್ಲಿ ಗೊಂದಲ, ಉಂಟಾಗಿ ಸ್ಥಿರವಾದ ಆಲೋಚನೆಗಳು ಬರುವುದಿಲ್ಲ. ಸಂಬಂಧಿಕರೊಂದಿಗೆ ವೈಮನಸ್ಸು, ಆರೋಗ್ಯದಲ್ಲಿ ಏರುಪೇರಾಗಬಹುದು. ಕೆಲಸದಲ್ಲಿ ವರ್ಗಾವಣೆಯ ಸೂಚನೆಗಳಿವೆ.
ತುಲಾ : ಆರ್ಥಿಕವಾಗಿ ಜಾಗರೂಕರಾಗಿರಬೇಕು. ಹೊಸದಾಗಿ ಸಾಲ ಮಾಡುವ ಪರಿಸ್ಥಿತಿ , ಮನಸ್ಸಿನಲ್ಲಿ ಅಶಾಂತಿ ಕಾಡಲಿದೆ. ಪ್ರತಿಯೊಂದು ಕೆಲಸದಲ್ಲೂ ವಿಘ್ನ ಎದುರಾಗಲಿದೆ. ಜವಾಬ್ದಾರಿಗಳ ಹೊರೆ. ದೂರ ಪ್ರಯಾಣ, ಹಣಕಾಸಿನ ನಷ್ಟ .ವ್ಯಾಪಾರ, ಉದ್ಯೋದಲ್ಲಿ ಶಾಂತಿ ಕಾಯುವಿರಿ.
ವೃಶ್ಚಿಕ : ಯಶಸ್ಸು ಕಾಣಲಿದ್ದಾರೆ. ಸ್ನೇಹಿತರು ಮತ್ತು ಆಪ್ತರ ನಡುವಿನ ಹಳೆಯ ಬಿಕ್ಕಟ್ಟು ಸುಸೂತ್ರವಾಗಿ ಬಗೆಹರಿಯಲಿವೆ. ನಿರೀಕ್ಷಿಸದ ಮೂಲದಿಂದ ಹಣದ ಹರಿವು, ಉದ್ಯೋಗ ಮತ್ತು ವ್ಯವಹಾರದಲ್ಲಿ ಪೂರ್ಣ ಪ್ರಮಾಣದ ಉತ್ಸಾಹ.

today Horoscope Dec 22 2025 Daily Astrology and Panchang for All Zodiac Signs
ಧನು : ಕೆಲಸ ಕಾರ್ಯಗಳಲ್ಲಿ ವಿಳಂಬ. ಅನಗತ್ಯ ವಿಷಯಗಳಿಗಾಗಿ ಹಣ ವ್ಯಯ. ಮನೆಯವರೊಂದಿಗೆ ಅಥವಾ ಬಂಧುಗಳೊಂದಿಗೆ ಸಣ್ಣ ವಿಷಯಕ್ಕೆ ತಕರಾರು. ಆಲೋಚನೆಗಳಲ್ಲಿ ಸ್ಪಷ್ಟತೆ ಇರದು. ಆಸ್ತಿ ವಿಚಾರದಲ್ಲಿ ಜಾಗರೂಕರಾಗಿರುವುದು ಅವಶ್ಯಕ (Patience Advised).
ಮಕರ : ಆರ್ಥಿಕ ಪರಿಸ್ಥಿತಿ ತೃಪ್ತಿದಾಯಕವಾಗಿರಲಿದೆ. ಹಿತೈಷಿಗಳೊಂದಿಗೆ ಉತ್ತಮ ಬಾಂಧವ್ಯ, ವಾಹನ ಸೌಕರ್ಯ ದೊರೆಯಲಿದೆ. ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಸಕಾಲ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಏರಿಳಿತ ದೂರವಾಗಲಿದ್ದು, ಔತಣಕೂಟಗಳಲ್ಲಿ ಭಾಗವಹಿಸುವ ಅವಕಾಶ
ಕುಂಭ : ವ್ಯವಹಾರದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ವ್ಯರ್ಥ ಖರ್ಚು. ಕಷ್ಟಕ್ಕೆ ತಕ್ಕ ಫಲ ಸಿಗದೆ ಮನಸ್ಸಿಗೆ ನೋವಾಗುವ ಸಾಧ್ಯತೆ ಇದೆ. ಜವಾಬ್ದಾರಿ ದೈಹಿಕ ಮತ್ತು ಮಾನಸಿಕ ಸುಸ್ತಾಗಿ ಕಾಡಬಹುದು. ಆರೋಗ್ಯದ ಸಮಸ್ಯೆ

ಮೀನ : ಹೊಸ ಚೈತನ್ಯದೊಂದಿಗೆ ಮುನ್ನಡೆಯಲಿದ್ದಾರೆ. ಆರ್ಥಿಕ ಲಾಭ ಮನಸ್ಸಿಗೆ ಸಮಾಧಾನ ತರಲಿದೆ. ಮನಸ್ಸು ಆಧ್ಯಾತ್ಮದತ್ತ ವಾಲಿ ಶಾಂತಿ ಸಿಗಲಿದೆ. ವ್ಯಾಪಾರ ವಹಿವಾಟು, ಒಟ್ಟಾರೆಯಾಗಿ ದಿನ ಶುಭಪ್ರದವಾಗಿರಲಿದೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,