ಮಧ್ಯರಾತ್ರಿ ಬೊಗಳಿದ ನಾಯಿ! ಬಚ್ಚಲು ಮನೆಯಲ್ಲಿದ್ದ ಕಳ್ಳ! ತಾಮ್ರದ ಹಂಡೆಯ ಕಳ್ಳತನದ ಕಥೆ

prathapa thirthahalli
Prathapa thirthahalli - content producer

Copper Utensils Theft ಹಿತ್ತಲಿನ ಬಾಗಿಲಿನಿಂದ ಮನೆಯೊಳಗೆ ಬಂದು ತಾಮ್ರಮ ಹಂಡೆ ಸೇರಿಸಿದಂತೆ ವಿವಿಧ ಸಾಮಗ್ರಿಗಳನ್ನ ಕದ್ದೊಯ್ದ ಪ್ರಕರಣ ಸೊರಬ ತಾಲ್ಲೂಕಿನಲ್ಲಿ ವರದಿಯಾಗಿದೆ.

Copper Utensils Theft ನಡೆದಿದ್ದೇನು?

ದಾಖಲಾಗಿರುವ ಎಪ್​ಐಆರ್ ಪ್ರಕಾರ, ಇಲ್ಲಿನ ನಿವಾಸಿಯೊಬ್ಬರು ಅಕ್ಟೋಬರ್ 29 ರಂದು ರಾತ್ರಿ ಮಲಗಿದ್ದ ವೇಳೆ, ಮನೆಯ ಹಿತ್ತಲಿನಲ್ಲಿ ಶಬ್ಧವಾಗಿದ್ದನ್ನ ಕೇಳಿ ಎಚ್ಚರಗೊಂಡಿದ್ದರು. ಅದೇ ಹೊತ್ತಿಗೆ ನಾಯಿ ಬೊಗಳಿದ್ದನ್ನ ಕೇಳಿ, ಸಂಶಯಗೊಂಡ ನಿವಾಸಿಯು ಲೈಟ್ ಆನ್ ಮಾಡಿ ಪರಿಶೀಲಿಸಿದ್ದಾರೆ. ಈ ವೇಳೆ ಬಚ್ಚಲು ಮನೆಯಲ್ಲಿ ಕಳ್ಳನೊಬ್ಬ ಕದಿಯುತ್ತಿರುವುದು ಕಾಣಿಸಿದೆ. ಆತನನ್ನು ಹಿಡಿದು ಪ್ರಶ್ನಿಸಿದಾಗ ತಾಮ್ರದ ವಸ್ತುಗಳನ್ನು ಕದ್ದಿರುವುದಾಗಿ ಹೇಳಿದ್ದ. ಅಲ್ಲದೆ ನಾಳೆ ಕದ್ದ ವಸ್ತುಗಳನ್ನು ತಂದುಕೊಂಡುವುದಾಗಿ ಹೇಳಿದ ಆರೋಪಿಯು ದೂರುದಾರರನ್ನು ತಳ್ಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ವಸ್ತುಗಳನ್ನ ಕಳೆದುಕೊಂಡವರು, ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

Share This Article