Congress ಹಾಸ್ಟೆಲ್​ನಲ್ಲಿಯು ಸದಸ್ಯತ್ವ ನೋಂದಣಿಗೆ ಕಾಂಗ್ರೆಸ್​ ಆಕ್ರೋಶ! ರಿಪ್ಪನ್​ ಪೇಟೆಯಲ್ಲಿ ಪ್ರತಿಭಟನೆ

Malenadu Today

Congress  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ  ಪಟ್ಟಣದ ಬಿಸಿಎಂ ವಿದ್ಯಾರ್ಥಿನಿಯರ ವಸತಿಗೃಹದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನದಡಿಯಲ್ಲಿ ಸದಸ್ಯತ್ವ ನೋಂದಣಿ ಮಾಡಿದ್ದಾರೆ ಎಂದು ಆರೋಪಿಸಿ ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ವತಿಯಿಂದ ಹಾಸ್ಟೆಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದೆ. 

“ಭಾರತೀಯ ಜನತಾ ಪಕ್ಷ ಹೊಸನಗರ ಮಂಡಲ ಮಹಿಳಾ ಮೋರ್ಚ ವಿಜಯ ಸಂಕಲ್ಪ ಅಭಿಯಾನ ದಿನಾಂಕ 27 ರ ಶುಕ್ರವಾರ ರಿಪ್ಪನ್‌ಪೇಟೆಯ ಬಿಸಿಎಂ ಹಾಸ್ಟೆಲ್ ನಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಸುಮಾರು 32ಕ್ಕೂ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿದೆ ಎಂಬ ಫೋಸ್ಟರ್​ವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಇದನ್ನ ಆಧರಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಸ್ಟೆಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಾಗೂ ಹಾಸ್ಟೆಲ್ ವಾರ್ಡನ್ ವಿರುದ್ದ ಧಿಕ್ಕಾರ ಕೂಗಿದರು.  ಬಿಜೆಪಿ ಪಕ್ಷ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಮಕ್ಕಳ ಮನಸ್ಸಲ್ಲಿ ರಾಜಕೀಯ ದ್ವೇಷ ಬಿತ್ತುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

JP Flashback : ಬಿಎಸ್​ವೈ ತೋಟದ ಮನೆಯಲ್ಲಿ ದುಡ್ಡಿದೆ ಎಂಬ ಪುಕಾರು ಹಬ್ಬಿದ್ದ ಸಂದರ್ಭದಲ್ಲಿ ಏನಾಗಿತ್ತು ಗೊತ್ತಾ? 2011 ರ ಆ ದಿನ ನಡೆದ ಘಟನೆಯ ಪ್ಲ್ಯಾಶ್​ಬ್ಯಾಕ್

Shimoga: ಮಹಿಳೆ ನೇಣಿಗೆ ಶರಣಾದ ಪ್ರಕರಣದಲ್ಲಿ ಆರೋಪಿ ಪ್ರಿಯಕರ ಬಂಧನ! ಡೆತ್​ನೋಟ್​ನಲ್ಲಿತ್ತು ಸತ್ಯ!

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article