KARNATAKA NEWS/ ONLINE / Malenadu today/ May 16, 2023 GOOGLE NEWS / SHIVAMOGGA NEWS
ರಿಪ್ಪನ್. ಪೇಟೆ ಪೋಲೀಸ್ ಠಾಣೆ/ ಇಲ್ಲಿನ ಹೊಸನಗರ ರಸ್ತೆಯಲ್ಲಿ ನಿನ್ನೆ ಅಪಘಾತವೊಂದು ಸಂಭವಿಸಿದೆ. ಲಗೇಜ್ ಆಟೋ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ಧಾರೆ.
ನಡೆದಿದ್ದೇನು?
ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಬಳಿ ಲಗೇಜ್ ಆಟೋ ಹಾಗೂ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ನಡುವೆ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಗವಟೂರು ನಿವಾಸಿ ಗಣೇಶ್ ಗಂಭೀರವಾಗಿ ಗಾಯಗೊಂಡಿದ್ಧಾರೆ.
ಘಟನೆ ನಡೆದು , ಅರ್ಧ ಗಂಟೆಯಾದರೂ ಗಾಯಾಳುವಿನ ಸಹಾಯಕ್ಕೆ ಯಾರು ಬಂದಿಲ್ಲ. ಇದರಿಂದಾಗಿ ಬೈಕ್ ಸವಾರ ರಕ್ತ ಸ್ತ್ರಾವ ಹಾಗೂ ನೋವಿನಿಂದ ಬಳಲಿದ್ಧಾನೆ. ಬಳಿಕ ವಿಷಯ ತಿಳಿದು ಸ್ಥಳೀಯ ಯುವಕರು ಸ್ಥಳಕ್ಕೆ ತೆರಳಿ ಗಾಯಾಳು ರಮೇಶ್ನ್ನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಒದಗಿಸಿದ್ದಾರೆ. ಇನ್ನೂ ಇದಕ್ಕೂ ಮೊದಲು ಬೈಕ್ ಸವಾರನ್ನ ಆಸ್ಪತ್ರೆಗೆ ರವಾನಿಸಲು, ಆಕ್ಸಿಡೆಂಟ್ ಆದ ಲಗೇಜ್ ಆಟೋ ಚಾಲಕನ ಸಹಾಯವನ್ನು ಕೇಳಿದರೆ, ಆತ ನಿರಾಕಿರಿಸಿದ್ದ ಎನ್ನಲಾಗಿದೆ.
ರಾತ್ರಿ ಬೈಕ್ನಲ್ಲಿ ಹೋಗುವಾಗ ಹುಷಾರ್! ಯಾಮಾರಿದ್ರೆ ಜೀವಕ್ಕೆ ಆಪತ್ತು! ಹೀಗೂ ಆಗುತ್ತೆ ಹುಷಾರ್!
ಹೊಸನಗರ/ ಶಿವಮೊಗ್ಗ/ ರಾತ್ರಿ ಹೊತ್ತು ಡ್ರೈವಿಂಗ್ ಮಾಡುವಾಗ ಎಷ್ಟು ಜಾಗೃತೆ ವಹಿಸಿದರೂ ಸಾಲದು ಎಂಬುದಕ್ಕೆ ಸಾಕ್ಷಿಯಾಗಿ ನಿನ್ನೆ ಒಂದು ಘಟನೆ ಸಂಭವಿಸಿದೆ.
ಶಾಂತಪುರ -ಹೊಸನಗರ ಮಾರ್ಗವಾಗಿ ಶಿವಮೊಗ್ಗದಿಂದ ಹೊಸನಗರ ನಗರ ಕಡೆಗೆ ಬರುತ್ತಿದ ಬೈಕ್ವೊಂದು ಲಾರಿ ಹೆಡ್ಲೈಟ್ನಿಂದಾಗಿ ಸ್ಕಿಡ್ಡಾಗಿ ಬಿದ್ದಿದ್ದಾರೆ..
ದಾರಿಯಲ್ಲಿ ಬರುತಿದ್ದ ವೇಳೆ ಲಾರಿಯ ಲೆಜೀಮ್ ಲೈಟ್(ಹೆಡ್ ಲೈಟ್ )ಕಣ್ಣಿಗೆ ಹೊಡೆದ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆ ಪಕ್ಕಕ್ಕೆ ಬಿದ್ದಿದೆ. ಈ ವೇಳೆ ಬೈಕ್ ಸವಾರನ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಬೈಕ್ ಸವಾರನನ್ನ ವಾರಂಬಳ್ಳಿಯ ಮೋಹನ್ (22) ಎಂದು ಗುರುತಿಸಲಾಗಿದೆ.
ತಕ್ಷಣ ಸ್ಪಂದಿಸಿದ ಆ್ಯಂಬುಲೆನ್ಸ್ ಸಿಬ್ಬಂದಿ
ಇನ್ನೂ ವಿಷಯ ತಿಳಿಯುತ್ತಲೇ ಸ್ಥಳಿಯರು ಆ್ಯಂಬುಲೆನ್ಸ್ಗೆ ಕರೆಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ 108 ಆ್ಯಂಬುಲೆನ್ಸ್ಸ್ ಸಿಬ್ಬಂದಿ ಗಾಯಾಳುವಿಗೆ ಪ್ರಾಥಮಿಕ ಚಿಕೆತ್ಸೆ ನೀಡಿ ,ಹೆಚ್ಜಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….
ಆನಂದಪುರದ ಬಳಿ ಭೀಕರ ಅಪಘಾತ! ಮರಕ್ಕೆ ಕಾರು ಡಿಕ್ಕಿ! ಕಾಂಗ್ರೆಸ್ ಮುಖಂಡನ ಸಾವು ! ಇನ್ನೊಬ್ಬರ ಸ್ಥಿತಿ ಗಂಭೀರ
ಸಾಗರ/ ಶಿವಮೊಗ್ಗ (latest news from shivamogga)/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂಪುದರದ ಡ್ಯಾಂ ಹೊಸೂರು ಬಳಿಯಲ್ಲಿ ನಿನ್ನೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ತುರುಗೋಡ್ ನಾಗರಾಜ್ ಗೌಡರು ನಿಧನರಾಗಿದ್ದಾರೆ.
ಹೇಗಾಯ್ತು ಘಟನೆ
ಆನಂದಪುರಂ ಸಮೀಪದ ಡ್ಯಾಂ ಹೊಸೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ., ಮೃತ ತುರುಗೋಡ ನಾಗರಾಜ್ ಗೌಡ(55) ಹೊಸನಗರದ ಕಾಂಗ್ರೆಸ್ ಮುಖಂಡರಾಗಿದ್ದರು.
ಶಿಕಾರಿಪುರದಿಂದ ತಮ್ಮ ಕಾರಿನಲ್ಲಿ ಹಿಂದಿರುಗುತ್ತಿದ್ದ ನಾಗರಾಜ್ ಗೌಡರ ಕಾರು ಅಂಬ್ಲಿಗೊಳದಲ್ಲಿ ಹೆದ್ದಾರಿ ಸಮೀಪದಲ್ಲಿ ಅಪಘಾತಕ್ಕೀಡಾಗಿದೆ. ಕಾರು ನಿಯಂತ್ರಣ ತಪ್ಪಿ, ಅಲ್ಲಿಯೇ ಇದ್ದ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಇನ್ನೂ ಇಬ್ಬರು ಇದ್ದು, ಒಬ್ಬರಿಗೆ ಗಂಭೀರ ಗಾಯವಾಗಿದೆ. ಆನಂದಪುರಂ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಾಜ್ ಗೌಡ ಹೊಸನಗರ ತಾಲೂಕು ಕೋಡೂರು ಸಮೀಪದ ಮುಂಬಾರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿ ದ್ದರು. ಇವರ ನಿಧನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸಂತಾಪ ಸೂಚಿಸಿದ್ದಾರೆ.
ಜೆ.ಎಸ್.ಎಸ್. ವಿಶೇಷಚೇತನರ ಪಾಲಿಟೆಕ್ನಿಕ್ನಿಂದ ಡಿಪ್ಲೊಮಾ ಸೇರಲು ಅರ್ಜಿ ಆಹ್ವಾನ
ಮೈಸೂರು ಜೆ.ಎಸ್.ಎಸ್. ಮಹಾವಿದ್ಯಾಪೀಠ, ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿಗೆ ಮೂರು ವರ್ಷಗಳ ವಿವಿಧ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಕ್ಕೆ ವಿಶೇಷಚೇತನ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅನುದಾನಿತ ಕೋರ್ಸುಗಳಾದ ಆರ್ಕಿಟೆಕ್ಜರ್ ಅಸಿಸ್ಟೆಂಟ್ಷಿಪ್, ಕಮರ್ಷಿಯಲ್ ಪ್ರಾಕ್ಟೀಸ್ ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಅನುದಾನ ರಹಿತ ಕೋರ್ಸುಗಳಾದ ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಕಂಪ್ಯೂಟರ್ ಅಪ್ಲಿಕೇಷನ್ಸ್ ಹಾಗೂ ಅಪಾರೇಲ್ ಡಿಸೈನ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಿಜಿ ಕೋರ್ಸುಗಳಿಗೆ ಕರ್ನಾಟಕ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕಗಳೊಂದಿಗೆ ತೇರ್ಗಡೆ ಹಾಗೂ 40% ಮತ್ತು ಮೇಲ್ಪಟ್ಟು ಮೂಳೆ ಮತ್ತು ಕೀಲು ಅಂಗವಿಕಲತೆ , 60ಡಿಬಿ ಮತ್ತು ಮೇಲ್ಪಟ್ಟು ಕಿವುಡು ಮತ್ತು ಮೂಗು ಅಂಗವಿಕಲತೆ ಹಾಗೂ ಭಾಗಶಃ ಮತ್ತು ಪೂರ್ಣ ಅಂಧತ್ವ ಅಂಗವೈಕಲ್ಯತೆಯ ಲಕ್ಷಣಗಳನ್ನು ಹೊಂದಿರಬೇಕು.
ಕ್ರೈಸ್ತ ಸನ್ಯಾಸಿನಿಯಾಗಲು ಕಿಡ್ನ್ಯಾಪ್ ಕಥೆ ಹಣೆದ ಯುವತಿಯನ್ನ ಶಿವಮೊಗ್ಗ ಪೊಲೀಸರು ಪತ್ತೆ ಮಾಡಿದ್ದು ಹೇಗೆ ಗೊತ್ತಾ
ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿದ್ಯಾರ್ಥಿವೇತನದ ಆರ್ಥಿಕ ಸಹಾಯ ದೊರೆಯುತ್ತದೆ. ಪಾಲಿಟೆಕ್ನಿಕ್ನ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರುಗಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯದ ಸೌಲಭ್ಯ ಕಲ್ಪಿಸಲಾಗಿದೆ.
ಇದನ್ನ ಓದಿ : whatsapp / ಶ್ರೀಘ್ರದಲ್ಲಿ ವಾಟ್ಸ್ಯಾಪ್ನಲ್ಲಿ ಬರಲಿದೆ ಈ ಆಪ್ಶನ್! ತಲೆಬಿಸಿ ಕಮ್ಮಿ ಮಾಡಿದ ಮೆಟಾ ಸಂಸ್ಥೆ
ಪ್ರವೇಶಕ್ಕೆ ಅರ್ಜಿಗಳನ್ನು ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಛಯ, ಮೈಸೂರು-570006 ಇಲ್ಲಿಗೆ (ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ. 100/- ಹಾಗೂ ಎಸ್ಸಿ/ಎಸ್ಟಿ/ಸಿ-1 ವರ್ಗದವರಿಗೆ ರೂ. 50/-) ನಗದು ಅಥವಾ ಡಿಡಿ ಮೂಲಕ ಮೈಸೂರಿನಲ್ಲಿ ಸಂದಾಯವಾಗುವಂತೆ ಕಳುಹಿಸಿ ಅಥವಾ ವೆಬ್ಸೈಟ್ www.jsspda.org ಮೂಲಕ ಡೌನ್ಲೋಡು ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ದಿ:17/06/2023ರೊಳಗಾಗಿ ಕಚೇರಿಗೆ ತಲುಪಿಸುವಂತೆ ಪಾಲಿಟೆಕ್ನಿಕ್ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಹಾಗು ಮೊ.ಸಂ.: 9844644937 ನ್ನು ಸಂಪರ್ಕಿಸುವುದು.
ರಂಗಾಯಣದಿಂದ ಇಲ್ಲೊಂದು ಉತ್ತಮ ಅವಕಾಶ! ಈಗಲೇ ಅರ್ಜಿ ಸಲ್ಲಿಸಬಹುದು!
ಶಿವಮೊಗ್ಗ/ ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿಯು ಪ್ರತಿವರ್ಷ ರಂಗಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲೊಮೊ ಕೋರ್ಸ್ನ್ನು ನಡೆಸುತ್ತಿದ್ದು, 2023-24ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಏನಿದು ಅವಕಾಶ!
ಕಳೆದ 14 ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರ ಪೂರ್ಣ ಪ್ರಮಾಣದ ರಂಗ ಶಿಕ್ಷಣವನ್ನು ನೀಡುವ ಸಂಸ್ಥೆ ಇದಾಗಿದ್ದು, ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ಚವಿದ್ಯಾಲಯದ ಮಾನ್ಯತೆ ಪಡೆದಿದೆ.
READ : ಬಸ್ನಲ್ಲಿಯೇ ಹೆರಿಗೆ ಮಾಡಿಸಿದ ಲೇಡಿ ಕಂಡಕ್ಟರ್! ಸೈ ಎನ್ನುತ್ತಿದೆ ಕರ್ನಾಟಕ
2023-24ನೇ ಸಾಲಿನ ಈ ರಂಗತರಬೇತಿ ಕೋರ್ಸ್ಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ ಕಡೆಯ ದಿನಾಂಕಕ್ಕೆ 18 ವರ್ಷಗಳು ತುಂಬಿದ ಮತ್ತು 28 ವರ್ಷಗಳು ತುಂಬಿರದ ಅಭ್ಯರ್ಥಿಗಳಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಮಾಹೆಯಾನ ರೂ.5,000/-ಗಳ ವಿದ್ಯಾರ್ಥಿ ವೇತನ ಪಾವತಿಸಲಾಗುವುದು.
ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಸೇರಬಯಸುವ ವಿದ್ಯಾರ್ಥಿಗಳು ದಿನಾಂಕ:15-05-2023ರಿಂದ ರಂಗಾಯಣದ ವೆಬ್ಸೈಟ್ http://rangayanamysore.karnataka.gov.in ನಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿಯಲ್ಲಿ ಕೆಲಸದ ದಿನಗಳ ಕಚೇರಿ ಅವಧಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಪಡೆಯಬಹುದು.
ಅರ್ಜಿ ಶುಲ್ಕ ಸಾಮಾನ್ಯ ವರ್ಗ ರೂ.230/-, ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.180/-ಗಳು (ರಂಗಕೈಪಿಡಿ ಶುಲ್ಕ ರೂ.30/- ಒಳಗೊಂಡಂತೆ) ಡಿ.ಡಿ.ಯನ್ನು ಉಪ ನಿರ್ದೇಶಕರು, ರಂಗಾಯಣ, ಮೈಸೂರು (Deputy Director, Rangayana, Mysore) ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ದಿನಾಂಕ:05-06-2023 ರೊಳಗೆ ತಲುಪುವಂತೆ ಅಂಚೆಯ ಮೂಲಕ ಕಳುಹಿಸಬಹುದು.
ಸಂದರ್ಶನದ ದಿನಾಂಕವನ್ನು ಅಭ್ಯರ್ಥಿಗಳಿಗೆ ಪತ್ರ ಮುಖೇನ ತಿಳಿಸಲಾಗುವುದು. ಗರಿಷ್ಠ 15 ರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಹೆಚ್ಚಿನ ವಿವರಕ್ಕಾಗಿ ದೂರವಾಣಿ ಸಂಖ್ಯೆ:0821-2512639, 9448938661 / 9148827720 / 8867514311 ಅನ್ನು ಸಂಪರ್ಕಿಸುವುದು.
.
Malenadutoday.com Social media
