ಚುನಾವಣೆ ಸಮೀಪಿಸುತ್ತಿದ್ದಂತೆ ಅಧಿಕಾರಿಗಳ ವರ್ಗಾವಣೆಯು ಸಹ ಹೆಚ್ಚಾಗುತ್ತಿದೆ. ಇದರಿಂದ ಚುನಾವಣೆ ಕೆಲಸಕ್ಕೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಹೊಸ ಸುತ್ತೋಲೆ ಹೊರಡಿಸಿದೆ. ಸುತ್ತೊಲೆಯಲ್ಲಿರುವ ವಿಷಯ ಯಥಾವತ್ತಾಗಿ ಈ ಕಳೆಗೆ ಇದೆ
*ಯುವತಿ ಮೇಲೆ ಲೈಂಗಿಕ ದೌರ್ಜನ್ಯ! ತೀರ್ಥಹಳ್ಳಿ ಯುವಕನಿಗೆ 10 ವರ್ಷ ಶಿಕ್ಷೆ ,57 ಸಾವಿರ ದಂಡ*
ಕರ್ನಾಟಕ ವಿಧಾನಸಭಾ ಚುನಾವಣೆ 2023 ಯು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ನೋಂದಣಿ ಪರಿಷ್ಕರಣಾ ಕಾರ್ಯ ಹಾಗೂ ಇತರೆ ಚುನಾವಣೆಗೆ ಸಂಬಂಧಿಸಿದ ಕಾರ್ಯಗಳು ಪ್ರಗತಿಯಲ್ಲಿರುವುದು ಸರಿಯಷ್ಟೆ. ಅದರಂತೆ ತಹಶೀಲ್ದಾರ್, ಉಪ ತಹಶೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಕರು/ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ನಿಯೋಜನೆ/ಓಓಡಿ ಮತ್ತು ವರ್ಗಾವಣೆ ಮಾಡುವುದರಿಂದ ಚುನಾವಣೆ ಕೆಲಸಕ್ಕೆ ಅಡಚಣೆ ಉಂಟಾಗುತ್ತದೆ.
ಅದರನ್ವಯ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಕಂದಾಯ ಸಚಿವರಿಂದ ಅನುಮೋದನೆಗೊಂಡಿರುವ ವರ್ಗಾವಣೆ ಅಥವಾ ನಿಯೋಜನೆ/ಓಓಡಿ ಪಸ್ತಾವನೆಗಳನ್ನು ಮಾತ್ರ ಸರ್ಕಾರದ ಕಾರ್ಯದರ್ಶಿಯವರಿಗೆ ಕಡತ ಮಂಡಿಸುವುದು. ಬಾಕಿ ವರ್ಗಾವಣೆ ಅಥವಾ ನಿಯೋಜನೆ/ಓಓಡಿ ಪ್ರಸ್ತಾವನೆಗಳನ್ನು ಚುನಾವಣಾ ಕಾರ್ಯ ಮುಗಿಯುವವರೆಗೆ ಅಂದರೆ ಮೇ-2023 ರ ಮಾಹೆಯ ವರೆಗೆ ವಿಲೇ ಇಡುವುದು ಎಂದು ಸರ್ಕಾರದ ಕಂದಾಯ ಇಲಾಖೆ ಕಾರ್ಯದರ್ಶಿ ಸುತ್ತೋಲೆ ಹೊಡೆಸಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com