CHIKMAGALUR | Jan 14, 2024 | Chikkamagalur crime news ಚಿಕ್ಕಮಗಳೂರು: ಕೊಟ್ಟಿರುವ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಮಹಿಳೆಯೊಬ್ಬರು ಹಲ್ಲೆ ಮಾಡಿದ ಪರಿಣಾಮ ಸಂಬಂಧಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ..
ತರೀಕೆರೆ ತಾಲ್ಲೂಕು
ಇನ್ನೂ ಮೃತರ ಅಂಗಾಂಗಗಳನ್ನು ದಾನ ಮಾಡಲಾಗಿದ್ದು ಈ ಬಗ್ಗೆ ಮೃತರ ಕುಟುಂಬಸ್ಥರು ತೀರ್ಮಾನ ಕೈಗೊಂಡಿದ್ದರು.
ಶಿವಮೊಗ್ಗ ಖಾಸಗಿ ಆಸ್ಪತ್ರೆ
ತರೀಕೆರೆ ತಾಲೂಕು ಗ್ರಾಮವೊಂದರಲ್ಲಿ ನಡೆದಿದ್ದ ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ನವೀನ್ ಎಂಬವರನ್ನ ಶಿವಮೊಗ್ಗ ದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಲಕ್ಕವಳ್ಳಿ ಪೊಲೀಸ್ /Chikkamagalur crime news
ಇನ್ನೂ ಪ್ರಕರಣ ಸಂಬಂಧ ಲಕ್ಕವಳ್ಳಿ ಪೊಲೀಸರು ಜ್ಯೋತಿಬಾಯಿ ಮತ್ತು ನಾಗ್ಯನಾಯ್ಕ ಎಂಬವವರನ್ನು ಪ್ರಕರಣ ಸಂಬಂಧ ಅರೆಸ್ಟ್ ಮಾಡಿದ್ದಾರೆ.
ಸಾಲ ವಾಪಸ್ ಕೇಳಿದ್ದಕ್ಕೆ ಹಲ್ಲೆ
ಮೃತ ನವೀನ್ ಹಾಗೂ ಆರೋಪಿಗಳು ಸಂಬಂಧಿಕರು. ಐದು ವರ್ಷಗಳ ಹಿಂದೆ ಜ್ಯೋತಿಬಾಯಿ ಮನೆಕಟ್ಟಲು ಐದು ಲಕ್ಷ ರೂ. ಸಾಲ ಪಡೆದುಕೊಂಡಿದ್ದಳಂತೆ. ಈ ವಿಚಾರದಲ್ಲಿ ಸಾಲದ ಹಣ ಮರುಪಾವತಿಸುವಂತೆ ನವೀನ್ ಪದೇ ಪದೇ ಜ್ಯೋತಿಬಾಯಿ ಮನೆಗೆ ಹೋಗಿ ಬರುತ್ತಿದ್ದರಂತೆ. ಈ ಬಗ್ಗೆ ಇಲ್ಲದ ಮಾತು ಕೇಳಿ ಬಂದ ಕಾರಣಕ್ಕೆ ನವೀನ್ ಮನೆಗೆ ಹೋಗುವುದನ್ನ ನಿಲ್ಲಿಸಿದ್ದಾರೆ.
ಮನೆಗೆ ಕರೆಯಿಸಿ ಹಲ್ಲೆ
ಇದರ ನಡುವೆ ಜ.2ರಂದು ಗ್ರಾಮದ ನಾಗನಾಯ್ಕ ಎಂಬುವರು ಜ್ಯೋತಿಬಾಯಿ ಸಾಲದ ಹಣ ನೀಡುವುದಾಗಿ
ತಿಳಿಸಿದ್ದಾರೆಂದು ನವೀನ್ರನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಜ್ಯೋತಿಬಾಯಿ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ. ಅವರಿಂದ ತಪ್ಪಿಸಿಕೊಂಡು ಹೊರಬಿದ್ದ ನವೀನ್ರನ್ನ ಗ್ರಾಮಸ್ಥರು ಆಸ್ಪತ್ರೆಗೆ ರವಾನಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ‘