ಶಿವಮೂರ್ತಿ ಸರ್ಕಲ್​ನಲ್ಲಿನ ಘಟನೆ| ಬೈಕ್ ಸವಾರನ ವಿರುದ್ಧ ಕೇಸ್| ಹರ್ಷಫರ್ನ್​ ಬಳಿ ನಡೀತು ಈ ಘಟನೆ, ಅಡಿಕೆ ಕಳ್ಳರಿದ್ದಾರೆ ಎಚ್ಚರ!

Shivamogga | Feb 1, 2024 |  ಶಿವಮೊಗ್ಗದ  ಹಾಡೋನಹಳ್ಳಿ ಗ್ರಾಮದಲ್ಲಿ ಸಂಗ್ರಹಿಸಿದ್ದ ಒಣ ಅಡಿಕೆಯನ್ನು ಕದ್ದೊಯ್ದ ಸಂಬಂಧ ಪ್ರಕರಣ ದಾಖಲಾಗಿದೆ   05 ಎಕರೆ ಅಡಿಕೆ ತೋಟ ಇರುವ ಮಾಲೀಕರಿಗೆ ಸೇರಿದ ಸ್ಥಳದಲ್ಲಿ ಒಣಗಿಸಿದ ಅಡಿಕೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಅದರ ಮೊತ್ತವೇ 60 ಸಾವಿರ ರೂಪಾಯಿ ಆಗಬಹುದು ಎನ್ನಲಾಗಿದ್ದು, ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ದೂರು ನೀಡಲಾಗಿದೆ.  

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ 

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್  ವ್ಯಾಪ್ತಿಯಲ್ಲಿರುವ  ದುರ್ಗಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ದೇವಾಲಯದ   ಸ್ಟೀಲಿನ ಕಾಣಿಕೆ ಹುಂಡಿಯ ಬೀಗ ತೆರೆದು ಅದರಲ್ಲಿದ್ದ ಸುಮಾರು 3500/ರೂ ಕಾಣಿಕೆ ಹಣವನ್ನು ಹಾಗೂ ಸುಮಾರು 38 ಗ್ರಾಂ ತೂಕದ ಬಂಗಾರದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಇದರ ಮೌಲ್ಯ ಸುಮಾರು 1,25,000/ರೂ ಗಳಾಗಬಹುದಾಗಿದ್ದು, ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಿಸಲಾಗಿದೆ

ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಸ್ಟೇಷನ್​ 

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಅಪಘಾತವಾಗಿದ್ದು ಈ ಸಂಬಂಧ ಬೈಕ್ ಸವಾರನೊಬ್ಬನ ಮೇಲೆ ಕೇಸ್ ದಾಖಲಾಗಿದೆ. ಶಿವಮೂರ್ತಿ ಸರ್ಕಲ್​ನ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಯೋ ಬೈಕ್​ವೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಡೋರ್​ ಜಖಂಗೊಂಡಿತ್ತು. ಈ ಸಂಬಂಧ ತಡವಾಗಿ ದೂರುದಾಖಲಾಗಿದ್ದು, ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಹರ್ಷಾ ಫರ್ನ್​ ಸಮೀಪ ಅಪಘಾತ

ಇತ್ತ ,ಸಾಗರ ರಸ್ತೆಯಲ್ಲಿ ಹರ್ಷ ಫರ್ನ್ ಹೋಟೆಲ್ ಕ್ರಾಸ್ ಡಿವೈಡರ್ ಬಳಿ ಹೋಗುತ್ತಿದ್ದ ಬೈಕ್​ವೊಂದಕ್ಕೆ ಸಾಗರ ಕಡೆಯಿಂದ ಬರುತ್ತಿದ್ದ ಕಾರೊಂದು ಡಿಕ್ಕಿಯಾಗಿದೆ. ಪರಿಣಾಮ ಬೈಕ್​ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ. ಅವರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಈ ಸಂಬಂಧ ಕಾರು ಚಾಲಕನ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಸ್ಟೇಷನ್​ನಲ್ಲಿ ದೂರುದಾಖಲಿಸಲಾಗಿದೆ.  


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು