Career Financial and Family Predictions ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ ಮತ್ತು ಹೇಮಂತ ಋತು, ಮಾರ್ಗಶೀರ ಮಾಸವು ನಡೆಯುತ್ತಿದೆ. ಬಹುಳ ಷಷ್ಠಿ ತಿಥಿ, ಇದು ರಾತ್ರಿ 7.09 ರವರೆಗೆ ಇರಲಿದ್ದು, ಆನಂತರ ಸಪ್ತಮಿ ತಿಥಿ ಆರಂಭವಾಗಲಿದೆ. ಬೆಳಿಗ್ಗೆ 8.07 ರವರೆಗೆ ಆಶ್ಲೇಷಾ ನಕ್ಷತ್ರವಿದ್ದು, ತದನಂತರ ಮಖರ ನಕ್ಷತ್ರವು ಪ್ರವೇಶಿಸಲಿದೆ. ಇಂದು ಮಧ್ಯಾಹ್ನ 12.00 ರಿಂದ 1.30 ರವರೆಗೆ ರಾಹುಕಾಲವಿದೆ. ಯಮಗಂಡ ಕಾಲವು ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ. ಶುಭ ಕಾರ್ಯಗಳನ್ನು ಕೈಗೊಳ್ಳಲು ಸೂಕ್ತವಾದ ಅಮೃತ ಘಳಿಗೆಯು ಬೆಳಿಗ್ಗೆ 6.31 ರಿಂದ 8.06 ರವರೆಗೆ ಇರಲಿದೆ.

ಇವತ್ತಿನ ರಾಶಿಫಲ
ಮೇಷ : ಕೈಗೊಂಡಿರುವ ಪೂರ್ಣ ಕೆಲಸಗಳಲ್ಲಿ ಅಡೆತಡೆ ಎದುರಾಗಲಿವೆ. ಆರ್ಥಿಕ ಇಕ್ಕಟ್ಟು ಕಾಡಲಿದ್ದು, ಅನಿರೀಕ್ಷಿತವಾಗಿ ಪ್ರಯಾಣ ಮಾಡಬೇಕಾಗಬಹುದು. ಕೌಟುಂಬಿಕವಾಗಿ ಗೊಂದಲ, ಸಹೋದರರೊಂದಿಗೆ ವಾಗ್ವಾದ. ವ್ಯಾಪಾರ ಸಾಮಾನ್ಯವಾಗಿರಲಿದೆ, ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿ.
Career Financial and Family Predictions
ವೃಷಭ : ಸ್ನೇಹಿತರೊಂದಿಗೆ ದಿನವನ್ನು ಕಳೆಯಲಿದ್ದೀರಿ. ಪ್ರಮುಖ ಕೆಲಸಗಳಲ್ಲಿ ವಿಜಯ. ಶುಭ ಕಾರ್ಯ, ಸಭೆ-ಸಮಾರಂಭಗಳಲ್ಲಿ ಭಾಗವಹಿಸಲಿದ್ದೀರಿ. ಬಾಕಿ ಹಣ ವಸೂಲಾಗಲಿದ್ದು, ವ್ಯಾಪಾರದಲ್ಲಿ ವೃದ್ಧಿ ಕಂಡುಬರಲಿದೆ. ಉದ್ಯೋಗಸ್ಥರಿಗೆ ಹೊಸ ಭರವಸೆಯ ದಿನ.
ಮಿಥುನ : ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ಆರ್ಥಿಕ ಇಬ್ಬಂದಿ ಎದುರಾಗಲಿವೆ. ಕೈಗೊಂಡ ಕೆಲಸಗಳಲ್ಲಿ ಅಡ್ಡಿ-ಆತಂಕ ಎದುರಾಗಬಹುದು. ಅನಾರೋಗ್ಯದ ಸೂಚನೆ. ವ್ಯಾಪಾರಗಳಲ್ಲಿ ಅನಗತ್ಯ ತೊಂದರೆ, ಉದ್ಯೋಗಗಳಲ್ಲಿ ಬದಲಾವಣೆ.

ಕರ್ಕಾಟಕ : ಹೊಸ ಪರಿಚಯ. ಆಶ್ಚರ್ಯಕರವಾದ ವಿಷಯ ತಿಳಿದುಕೊಳ್ಳುವ ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳ ಪ್ರತಿಭೆ ಬೆಳಕಿಗೆ ಬರಲಿದೆ, ಧನಲಾಭ. ವ್ಯಾಪಾರ ಸುಗಮವಾಗಿ ಮುಂದುವರಿಯಲಿವೆ. ಉದ್ಯೋಗ ಕ್ಷೇತ್ರದಲ್ಲಿನ ಪರಿಸ್ಥಿತಿ ಸಂಪೂರ್ಣವಾಗಿ ಅನುಕೂಲಕರವಾಗಿವೆ.
ಸಿಂಹ : ಪ್ರಮುಖ ಕೆಲಸ-ಕಾರ್ಯಗಳಲ್ಲಿ ಅಡೆತಡೆ ಎದುರಾಗುವ ಸಾಧ್ಯತೆ ಇದೆ. ಅನಾರೋಗ್ಯ ಕಾಡುವ ಸಾಧ್ಯತೆ ಇದ್ದು, ದೂರ ಪ್ರಯಾಣ ಮಾಡಬೇಕಾಗಬಹುದು. ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ, ಶ್ರಮಕ್ಕೆ ತಕ್ಕ ಫಲಿತಾಂಶ ಗೋಚರಿಸುವುದಿಲ್ಲ. ಆಲೋಚನೆ ಫಲಕಾರಿಯಾಗದಿರಬಹುದು. ವ್ಯಾಪಾರ ಹಾಗೂ ಉದ್ಯೋಗಗಳಲ್ಲಿ ಸಣ್ಣಪುಟ್ಟ ಸಮಸ್ಯೆ ಎದುರಾಗಬಹುದು.
ಕನ್ಯಾ : ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಆಕಸ್ಮಿಕವಾಗಿ ಧನಲಾಭ, ವಾಹನ ಖರೀದಿ ಯೋಗವಿದ್ದು, ದೇವಾಲಯಗಳಗೆ ತೆರಳುವಿರಿ. ವ್ಯಾಪಾರ ಹಾಗೂ ಉದ್ಯೋಗಗಳಲ್ಲಿನ ಒತ್ತಡ ನಿವಾರಣೆಯಾಗಲಿವೆ.
ತುಲಾ : ವ್ಯವಹಾರಗಳಲ್ಲಿ ವಿಜಯ. ಆಪ್ತರ ಸಲಹೆಗಳನ್ನು ಸ್ವೀಕರಿಸಲಿದ್ದೀರಿ. ಆಸ್ತಿ ಲಾಭ. ಬಾಲ್ಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ವ್ಯಾಪಾ ಸರಾಗವಾಗಿ ಸಾಗಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ.
ವೃಶ್ಚಿಕ: ಅನಿರೀಕ್ಷಿತ ಧನ ವ್ಯಯ, ಆಕಸ್ಮಿಕ ಪ್ರಯಾಣ. ಕುಟುಂಬದಲ್ಲಿ ಹೊಸ ಸಮಸ್ಯೆ ಸೃಷ್ಟಿಯಾಗುವ ಸೂಚನೆ ಅನಾರೋಗ್ಯ. ಕೆಲಸದ ಒತ್ತಡ ಹೆಚ್ಚಲಿದೆ. ವ್ಯಾಪಾರದಲ್ಲಿ ಸಾಮಾನ್ಯದಿನ, ಉದ್ಯೋಗದಲ್ಲಿ ಒತ್ತಡ ಹೆಚ್ಚಲಿವೆ.
ಧನುಸ್ಸು : ಖರ್ಚು ಮತ್ತು ಪ್ರಯಾಸದ ದಿನ. ಬಂಧುಗಳೊಂದಿಗೆ ಕಲಹ. ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಅನುಕೂಲಕರವಾಗಿಲ್ಲ. ಅನಾರೋಗ್ಯದ ಸೂಚನೆ, ದೈವ ದರ್ಶನ. ವ್ಯಾಪಾರ ಮಂದಗತಿಯಲ್ಲಿ ಸಾಗಲಿದೆ., ಉದ್ಯೋಗದಲ್ಲಿ ಸಾಮಾನ್ಯದಿನ
ಮಕರ : ಸಾಲ ಕ್ಲೀಯರ್ ಆಗುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಲಿದೆ. ಆಸ್ತಿ ವಿವಾದ ಪರಿಹಾರವಾಗಲಿವೆ. ಶುಭ ಕಾರ್ಯಕ್ರಮ. ಕೈಗೊಂಡ ಕೆಲಸಗಳಲ್ಲಿ ವಿಜಯ. ಹೊಸ ಉದ್ಯೋಗಾವಕಾಶ ವ್ಯಾಪಾರ ಸುಗಮವಾಗಿ ಸಾಗಲಿವೆ. ಉದ್ಯೋಗದಲ್ಲಿ ವಿಶೇಷ ಹುದ್ದೆ

ನಾಯಕನಹಟ್ಟಿ ದೇಗುಲದಲ್ಲಿ ಕಳೆದಿದ್ದನ್ನ ಭಕ್ತರೇ ಹುಡುಕಿದರು! ಸಾಗರ ನಿವಾಸಿಯ 40 ಗ್ರಾಮ್ ಚಿನ್ನದ ಕಥೆಯಿದು!
ಕುಂಭ : ಕೆಲವು ಹೊಸ ವಿಷಯಗಳನ್ನು ತಿಳಿದುಕೊಳ್ಳಲಿದ್ದೀರಿ. ಸಮಾಜದಲ್ಲಿ ಗೌರವ ಹೆಚ್ಚಲಿದ್ದು, ಆಸ್ತಿ ವಿವಾದ ಪರಿಹಾರವಾಗಲಿವೆ. ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ವ್ಯಾಪಾರ ಮತ್ತಷ್ಟು ವಿಸ್ತರಿಸುವ ಅವಕಾಶವಿದೆ. ಉದ್ಯೋಗ ಕ್ಷೇತ್ರದಲ್ಲಿನ ಪರಿಸ್ಥಿತಿ ಸಂಪೂರ್ಣವಾಗಿ ಅನುಕೂಲಕರವಾಗಿವೆ.
ಮೀನ : ಕೌಟುಂಬಿಕವಾಗಿ ಕೊಂಚ ಸಮಸ್ಯೆ ಎದುರಾಗಬಹುದು. ಅನಾರೋಗ್ಯದ ಸೂಚನೆ, ಕೆಲಸದಲ್ಲಿ ಆತಂಕ. ಬಂಧುಗಳೊಂದಿಗೆ ವಿರೋಧ, ಆಕಸ್ಮಿಕ ಪ್ರಯಾಣ. ವ್ಯಾಪಾರ ಸಾಮಾನ್ಯವಾಗಿರಲಿದ್ದು, ಉದ್ಯೋಗದಲ್ಲಿ ಕೆಲವು ಚಿಕ್ಕ ಸಮಸ್ಯೆ ಎದುರಾಗಬಹುದು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

