ಸೀದಾ ಕೆರೆಗೆ ಉರುಳಿದ ಕಾರು! ಬೆಂಗಳೂರಿನಿಂದ ಹೊಸನಗರಕ್ಕೆ ಬರುತ್ತಿದ್ದ ವೇಳೆ ಘಟನೆ

car fell into the lake! The incident took place when he was on his way to Hosanagara from Bengaluru.

ಸೀದಾ ಕೆರೆಗೆ ಉರುಳಿದ ಕಾರು! ಬೆಂಗಳೂರಿನಿಂದ ಹೊಸನಗರಕ್ಕೆ ಬರುತ್ತಿದ್ದ ವೇಳೆ  ಘಟನೆ

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

ripponpete | Malnenadutoday.com |   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು  ರಿಪ್ಪನ್​ಪೇಟೆ ಸಮೀಪ ಕಾರೊಂದು ಸೀದಾ ಕೆರೆಗೆ ಉರುಳಿದ ಘಟನೆ ಸಂಭವಿಸಿದೆ. 

ಹೇಗಾಯ್ತು ವಿವರ

ಇಲ್ಲಿನ ಹೊಸನಗರ ರಸ್ತೆಯಲ್ಲಿ ತಾವರೆಕರೆ ಎಂಬ ಕೆರೆಯೊಂದಿದೆ. ಅದರ ಏರಿ ಮೇಲಿರುವ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದು ಡ್ರೈವರ್​ ಕಂಟ್ರೋಲ್ ತಪ್ಪಿ ಸೀದಾ ಕೆರೆಗೆ ಇಳಿದಿದೆ. ರಸ್ತೆಯಿಂದ ಸುಮಾರು ಐವತ್ತು ಅಡಿಗೂ ದೂರ ಇಳಿದ ಕಾರು ಕೆರೆಯಲ್ಲಿ ಅರ್ದದಷ್ಟು ಮುಳುಗಿತ್ತು. 

READ : ಚಿಕ್ಕಮಗಳೂರು ಆನೆ ಸಕ್ರೆಬೈಲ್ ಆನೆ ಬಿಡಾರಕ್ಕೆ ಬಂದಾಗ ನಡೀತು ಮನಕಲಕುವ ಈ ಘಟನೆ!

ಅದೃಷ್ಟಕ್ಕೆ ಯಾರಿಗೂ ಎಂತದ್ದು ಆಗಲಿಲ್ಲ. ಬೆಂಗಳೂರು ನಿಂದ ಬಂದವರು ಕಾರಿನಲ್ಲಿ ರಿಪ್ಪನ್​ಪೇಟೆ ಮೂಲಕ ಸೊನೆಲೆ ಹೋಗುತ್ತಿದ್ದರು. ಈ ವೇಳೆ ತಾವರೆಕರೆ ಬಳಿ ಹೀಗಾಗಿದೆ. 

ಕಾರಿನಲ್ಲಿ ಗಂಡ ಹೆಂಡತಿ ಹಾಗೂ ಮಗಳು ಪ್ರಯಾಣಿಸ್ತಿದ್ದರು. ಘಟನೆಯಾದ ಬೆನ್ನಲ್ಲೆ ಕಾರಿನಿಂದ ಎಲ್ಲರು ಕೆಳಕ್ಕೆ ಇಳಿದಿದ್ದಾರೆ. ಕೊನೆಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಕಾರಿಗೆ ಹಗ್ಗ ಕಟ್ಟಿ, ಲಾರಿಯ ಮೂಲಕ ಎಳೆದು ರಸ್ತೆಗೆ ತಂದಿದ್ದಾರೆ.