hosanagara highway ಹೊಸನಗರ ಹೆದ್ದಾರಿಯಲ್ಲಿ ಕಾರು-ಬಸ್​ ಡಿಕ್ಕಿ / ಸಾಗರದ 3 ಮಂದಿಗೆ ಗಾಯ/ ನಡೆದಿದ್ದೇನು?

ajjimane ganesh

hosanagara highway  Car-bus collision/ 3 people from Sagara injured

ಹೊಸನಗರ, (ಮಲೆನಾಡು ಟುಡೆ ವರದಿ): ತಾಲ್ಲೂಕಿನ ಹಿಲ್ಕುಂಜಿ ಬಳಿಯಲ್ಲಿ ನಿನ್ನೆ ದಿನ ಅಪಘಾತವೊಂದು ಸಂಭವಿಸಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ದಿನ  ಸೋಮವಾರ ಮಧ್ಯಾಹ್ನ ಬಸ್​ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶಿವಮೊಗ್ಗದಿಂದ ಉಡುಪಿಯತ್ತ ಧಾವಿಸುತ್ತಿದ್ದ ಖಾಸಗಿ ಬಸ್‌ಗೆ, ಮಾರಣಕಟ್ಟೆ ದೇವಸ್ಥಾನದ ಕಡೆಯಿಂದ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪ್ರಭಾವ ಎಷ್ಟಿತ್ತೆಂದರೆ, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿ ರಸ್ತೆ ಪಕ್ಕದ ಆಳಕ್ಕೆ ಬಿದ್ದಿದೆ. 

- Advertisement -
hosanagara highway
hosanagara highway

ಕಾರಿನಲ್ಲಿದ್ದ ಸಾಗರ ತಾಲ್ಲೂಕಿನ ನಂದಿತಳೆ ಗ್ರಾಮದವರಾದ ಮುರುಳಿ, ಶಶಿ ಹಾಗೂ ನಾಗರಾಜ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.  ಸದ್ಯ ಅವರ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಘಟನೆ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವನ್ನು ಇನ್ನಷ್ಟೆ ಗೊತ್ತಾಗಬೇಕಿದೆ. 

 

 

Share This Article
1 Comment

Leave a Reply

Your email address will not be published. Required fields are marked *