car accident : ಸಕ್ರೆಬೈಲ್​ನಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕಾರು | ಚಾಲಕ ಸಾವು

car accident :  ಶಿವಮೊಗ್ಗ ತಾಲೂಕು ಸಮೀಪ ಸಕ್ರೆಬೈಲ್​ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಶ್ರೀಧರ್​ (55) ಮೃತಪಟ್ಟ ದುರ್ದೈವಿ. 

ಶ್ರೀಧರ್​ ಬೆಳಿಗ್ಗೆ ಕಾರನ್ನು ಚಲಾಯಿಸುತ್ತಿದ್ದಾಗ ಅವರ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿದೆ. ಗುದ್ದಿದ ರಬಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜುಗುಜ್ಜಾಗಿದೆ. ಇದರಿಂದಾಗಿ ಶ್ರೀಧರ್​ ಗಂಭೀರ ಗಾಯಗೊಂಡಿದ್ದು ಅವರನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಸಹ ಅದಕ್ಕೂ  ಮೊದಲೇ ಶ್ರೀಧರ್​ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ

 

Leave a Comment