by raghavendra : ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕಲು ರಾಜ್ಯ ಸರ್ಕಾರ ಮೀನಾಮೇಶ | ಸಂಸದ ರಾಘವೇಂದ್ರ ಆರೋಪ.

by raghavendra : ಕರ್ನಾಟಕದಲ್ಲಿ ಹಲವು ಜನ  ಪಾಕಿಸ್ತಾನ ದೇಶದ ಪ್ರಜೆಗಳು ಅನಾಧಿಕೃತವಾಗಿ ನೆಲೆಸಿರುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರ ಗಡುವು ನೀಡಿದ್ದರು ಅವರನ್ನು ವಾಪಾಸ್ ಕಳುಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸಂಸದ ಬಿ. ವೈ ರಾಘವೇಂದ್ರ  ಆರೋಪಿಸಿದ್ದಾರೆ.

ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದ ರಾಘವೇಂದ್ರ  ಕರ್ನಾಟಕ ಸರ್ಕಾರ  ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸುವಲ್ಲಿ ಉದಾಸೀನ ತೋರಿದಂತಿದೆ ಎಂದು ಆಪಾದಿಸಿದ್ದಾರೆ. ಇತ್ತೀಚೆಗೆ ಪಹಲ್ಗಾಮ್​ ನಲ್ಲಿ ನಡೆದ ಉಗ್ರರ ದಾಳಿಯಿಂದ ದೇಶದ ಅಮಾಯಕ ನಾಗರೀಕರು ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು  ವಿಶ್ವದ ನಾಯಕರು ಕೂಡ ಖಂಡಿಸಿದ್ದಾರೆ ಎಂದು ಹೇಳಿದರು. ಪ್ರದಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಗೆ ಉತ್ತರ ಕೊಡಲು ರೆಡಿ ಆಗಿದ್ದಾರೆ. ರಾಜತಾಂತ್ರಿಕ ಕ್ರಮಗಳ ಬಗ್ಗೆ ಎಲ್ಲರೂ ಕೂಡಾ ಶಕ್ತಿ ತುಂಬಿದ್ದಾರೆ. ಪಾಕಿಸ್ತಾನದ ವಿಚಾರದಲ್ಲಿ  ಮೋದಿಯಾವರು ವಿಶೇಷವಾಗಿ 5 ಪ್ರಮುಖ ನಿಲುವುಗಳನ್ನು ತೆಗೆದುಕೊಂಡಿದ್ದಾರೆ. ಅದರಲ್ಲಿ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಗಳ ಒಳಗೆ ಭಾರತ  ಬಿಟ್ಟು ತೊಲಗಬೇಕೆಂದಿದ್ದು ಅತ್ಯಂತ ಗಮನಾರ್ಹ ವಿಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ. 

by raghavendra : ಪಾಕಿಸ್ತಾನ ದೇಶದ ಪ್ರಜೆಗಳು ನಮ್ಮ ಭಾರತದಲ್ಲಿ ಅನಾದೀಕೃತವಾಗಿ ನೆಲೆಸಿದ್ದಾರೆ. ಬೇರೆ ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಗೌರವ ಪೂರ್ವಕವಾಗಿ ಅವರ ದೇಶಕ್ಕೆ ಕಳುಹಿಸಿ ಕೊಡಲಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳು ಯಶಸ್ವಿಯಾಗಿ ಪಾಕಿಸ್ತಾನ ಪ್ರಜೆಗಳನ್ನು ವಾಪಸ್ ಕಳುಹಿಸುವ  ಕೆಲಸ ಮಾಡುತ್ತಿದ್ದಾರೆ. ಆದರೆ  ಕರ್ನಾಟಕ ಸರ್ಕಾರ  ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸುವಲ್ಲಿ ಉದಾಸೀನ ತೋರಿದಂತಿದೆ ಕಾಣುತ್ತಿದೆ. ಇನ್ನೂ ಸಹ ಕೆಲವು ಪಾಕಿಸ್ತಾನಿ ಪ್ರಜೆಗಳು  ರಾಜ್ಯದಲ್ಲಿ ಇದ್ದಾರೆ. ಇದರ ಮಾಹಿತಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಇದೆ. ವಿಶೇಷವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತವು ಪಾಕಿಸ್ತಾನಿ ನಿವಾಸಿಗಳನ್ನು ಗುರುತಿಸಿ ಅವರ ದೇಶಕ್ಕೆ ಕಳುಹಿಸುವ ಕಾರ್ಯ ಮಾಡಬೇಕು ಎಂದರು.

by raghavendra : ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು

ರಾಜ್ಯಪಾಲರು  ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ನೀಡಬೇಕು. 24 ಗಂಟೆಗಳ  ಒಳಗೆ ಪಾಕಿಸ್ತಾನ ಪ್ರಜೆಗಳನ್ನು ಹೊರ ಕಳುಹಿಸಲು ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಎಲ್ಲಾ ಬಿಜೆಪಿಯ ಪ್ರಕೋಷ್ಟಕದ ಪದಾಧಿಕಾರಿಗಳು ಸಹಿ ಸಂಗ್ರಹ ಮಾಡಿ ಮೇ  07 ರಂದು  ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.

Leave a Comment