BREAKING NEWS ರಾಜ್ಯ ಸರ್ಕಾರದ ಆಡಳಿತಾಂಗ ಚುನಾವಣೆಗೆ ಸಿದ್ದವಾಗುತ್ತಿದೆ ಚುನಾವಣಾ ಆಯೋಗದ ಸೂಚನೆಯಂತೆ ಕಳೆದ ವಾರ ಜನವರಿ 25 ರಂದು ಒಂದೇ ದಿನ 23 ಡಿವೈಎಸ್‌ಪಿಗಳ ವರ್ಗಾವಣೆ ಆದೇಶ ಹೊರಬಂದಿತ್ತು. ಅದರ ಬೆನ್ನಲ್ಲೆ 40 ಡಿಎಸ್‌ಪಿಗಳು ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಏಳು ಮಂದಿ ಎಸ್‌ಪಿ (ಸಿಎಎಲ್) (ನಾನ್ ಐಪಿಎಸ್)ಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.ಮತ್ತು ಇದೀಗ 148 ಪೊಲೀಸ್ ಇನ್ಸಪಕ್ಷರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ. ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಈ ಕೆಳಕಂಡ ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) ರವರುಗಳನ್ನು ಉಲ್ಲೇಖಿತ (2) ಪೊಲೀಸ್ ಸಿಬ್ಬಂದಿ ಮಂಡಳಿಯ ನಡವಳಿ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.ಈ ಪೈಕಿ ಶಿವಮೊಗ್ಗದಲ್ಲಿ ಮೂರು ಸರ್ಕಲ್ ಹಾಗೂ 8 ಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾ್ಗಿದೆ. ಅದರ ಪಟ್ಟಿ ಇಲ್ಲಿದೆ ನೋಡಿ
ಹೆಸರು | ಎಲ್ಲಿಂದ | ಎಲ್ಲಿಗೆ |
| ಕಿರಣ್ ಕುಮಾರ್ ಇ.ವೈ | ಡಿ.ಎಸ್.ಬಿ., ಚಿತ್ರದುರ್ಗ ಜಿಲ್ಲೆ | ಡಿ.ಎಸ್.ಬಿ., ಶಿವಮೊಗ್ಗ ಜಿಲ್ಲೆ |
| ರಾಜಶೇಖರಯ್ಯ ಎಲ್. | ಸೊರಬ ವೃತ್ತ, ಶಿವಮೊಗ್ಗ ಜಿಲ್ಲೆ | ಮಹಿಳಾ ಪೊಲೀಸ್ ಠಾಣೆ ಹಾವೇರಿ ಜಿಲ್ಲೆ |
| ದೀಪಕ್ ಎಂ.ಎಸ್ | ಸಿ.ಇ.ಎನ್. ಪ್ರೊ.ಠಾ., ಶಿವಮೊಗ್ಗ ಜಿಲ್ಲೆ | ಹೊಳಲ್ಕರೆ ವೃತ್ತ ಚಿತ್ರದುರ್ಗ ಜಿಲ್ಲೆ |
| ಗುರುರಾಜ್ ಎಂ.ಮೈಲಾರ್ | ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಶಿವಮೊಗ್ಗ ಜಿಲ್ಲೆ | ಡಿಎಸ್ಬಿ ದಾವಣಗೆರೆ ಜಿಲ್ಲೆ |
| ಸಂತೋಷ್ ಕುಮಾರ್ | ಶಿವಮೊಗ್ಗ ಸಂಚಾರ ವೃತ್ತ, ಶಿವಮೊಗ್ಗ ಜಿಲ್ಲೆ | ಚಿತ್ರದುರ್ಗ ನಗರ ಪೊಲೀಸ್ ಠಾಣೆ ಚಿತ್ರದುರ್ಗ ಜಿಲ್ಲೆ |
| ಗುರುಬಸವರಾಜ್ ಹೆಚ್ | ಬಸವನಗರ ಪೊ.ಠಾ., ದಾವಣಗೆರೆ | ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ |
| ಹರೀಶ್ ಕೆ.ಪಾಟೀಲ್ | ಕುಂಸಿ ಪೊ.ಠಾ., ಶಿವಮೊಗ್ಗ ಜಿಲ್ಲೆ | ಅಜಾದ್ ನಗರ ವೃತ್ತ ದಾವಣಗೆರೆ ಜಿಲ್ಲೆ |
| ಅಭಯ್ ಪಿ.ಸೋಮ್ಮಾಳ್ | ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ | ಹಿರಿಯೂರು ನಗರ ಪೊಲೀಸ್ ಠಾಣೆ ಚಿತ್ರದುರ್ಗ |
| ತಿಪ್ಪೇಸ್ವಾಮಿ ಜೆ.ಎಸ್ : | ಚಿತ್ರದುರ್ಗ ನಗರ ಪೊಲೀಸ್ ಠಾಣೆ ಚಿತ್ರದುರ್ಗ ಜಿಲ್ಲೆ | ಕುಂಸಿ ಪೊಲೀಸ್ ಠಾಣೆ ಶಿವಮೊಗ್ಗ ಜಿಲ್ಲೆ |
| ಗಜೇಂದ್ರಪ್ಪ ಕೆ.ಎನ್ : | ಅಜಾದ್ ನಗರ ವೃತ್ತ ದಾವಣೆಗೆರೆ ಜಿಲ್ಲೆ | ಜಯನಗರ ಪೊಲೀಸ್ ಠಾಣೆ ಶಿವಮೊಗ್ಗ ಜಿಲ್ಲೆ |
| ರವಿ ಎನ್.ಎಸ್ | ವಿನೋಬ ನಗರ ಪೊಲೀಸ್ ಠಾಣೆ | ಬಡಾವಣೆ ವೃತ್ತ ಚಿತ್ರದುರ್ಗ ಜಿಲ್ಲೆ |
| ರಾಘವೇಂದ್ರ ಕಾಂಡಿಕೆ : | ಭದ್ರಾವತಿ ನಗರ ವೃತ್ತ ಶಿವಮೊಗ್ಗ ಜಿಲ್ಲೆ | ನ್ಯಾಮತಿ ಪೊಲೀಸ್ ಠಾಣೆ ದಾವಣಗೆರೆ ಜಿಲ್ಲೆ |
| ಮಹಾಂತೇಶ್ ಕೆ. ಬಸಪೂರ್ | ಮಾರಿಹಾಳ ಪೊಲೀಸ್ ಠಾಣೆ ಬೆಳಗಾವಿ ಜಿಲ್ಲೆ | ಕೋಟೆ ಪೊಲೀಸ್ ಠಾಣೆ ಶಿವಮೊಗ್ಗ ಜಿಲ್ಲೆ |
| ಸಂತೋಷ್ ಎಂ ಪಾಟೀಲ್ | ಸಿಇಎನ್ ಪೊಲೀಸ್ ಠಾಣೆ ಹಾವೇರಿ ಜಿಲ್ಲೆ: | ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ |
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
