BREAKING NEWS : ಶಿಕಾರಿಪುರದಲ್ಲಿ ಕರಡಿ ಕಾಟ/ ಡ್ರೋನ್​ ಬಳಸಿ ಹುಡುಕಾಟ

Malenadu Today

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿ ಕರಡಿಯೊಂದು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಪಟ್ಟಣದ ಸಮೀಪವೇ ಬರುವ ಕೊಪ್ಪಲು ಮಂಜಣ್ಣ ಎಂಬವರ ತೋಟದಲ್ಲಿ ಕರಡಿ ಕಾಣಿಸಿರುವ ಬಗ್ಗೆ ವರದಿಯಾಗಿದೆ. 

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲು ಭೂ ಸ್ಪರ್ಷ ಮಾಡಿ ದಾಖಲೆ ಬರೆಯುವವರು ಯಾರು ಗೊತ್ತಾ? ಇಲ್ಲಿದೆ ನಿಮ್ಮ ಕುತುಹಲಕ್ಕೆ ನಮ್ಮ ಉತ್ತರ

ಮಂಗಳವಾರ ಕರಡಿ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದ್ದು, ಅರಣ್ಯ ಇಲಾಖೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದೆ. ಸದ್ಯದ ಮಾಹಿತಿ ಪ್ರಕಾರ, ಖಾಜಿ ಕೊಪ್ಪಲು ಸಮೀಪದಲ್ಲಿ ಸಿಗುವ ಮೆಕ್ಕೆಜೋಳದ ಗದ್ದೆಗಳಲ್ಲಿ ಕರಡಿ ಓಡಾಡಿಕೊಂಡಿರುವ ಸಾದ್ಯತೆ ಇದೆ ಎನ್ನಲಾಗುತ್ತಿದೆ.ಸ್ಥಳಕ್ಕೆ ತೆರಳಿರುವ  ಡಿಎಫ್ ಒ ರಾಮಕೃಷ್ಣ ಹಾಗೂ ಎಸಿಎಫ್ ಗೋಪ್ಯಾನಾಯ್ಕ ಹಾಗೂ  ಶಿವಮೊಗ್ಗದ ವನ್ಯಜೀವಿ ವಿಭಾಗದ ಡಾ.ವಿನಯ್ ಡ್ರೋನ್​ ಬಳಸಿ ಕರಡಿಯನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ ನಿಗದಿತ ಮೆಕ್ಕೆಜೋಳದ ಹೊಲಗಳಿಗೆ ಬಲೆ ಕಟ್ಟಿ ಕರಡಿ ಹಿಡಿಯಲು ಕಾರ್ಯಚರಣೆ ಆರಂಭಿಸಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article