BREAKING : ಚೋರಡಿಯಲ್ಲಿ ಸರಣಿ ಅಪಘಾತ! ನಾಲ್ಕು ವಾಹನಗಳ ನಡುವೆ ಡಿಕ್ಕಿ! ನಡೆದಿದ್ದೇನು!?

MALENADUTODAY | SHIVAMOGGA NEWS 

ಶಿವಮೊಗ್ಗ ಜಿಲ್ಲೆ ಚೋರಡಿ  (choradi)ಬಳಿಯಲ್ಲಿ ನಿನ್ನೆ ರಾತ್ರಿ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ.   ರಾತ್ರಿ ನಡೆದ ಈ ಸರಣಿ ಅಪಘಾತದಲ್ಲಿ (Series Accident)  . ನಾಲ್ಕು ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ.  ಬಸ್, ಗೂಡ್ಸ್ ವಾಹನ, ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟಕ್ಕೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ದೊಡ್ಡಮಟ್ಟದ ಗಾಯಗಳಿಲ್ಲದೆ ವಾಹನ ಸವಾರರು ಹಾಗೂ ವಾಹನದಲ್ಲಿರುವವರು ಪಾರಾಗಿದ್ದಾರೆ. 

ಮಾಧ್ಯಮ ಅಕಾಡೆಮಿ ಪ್ರಶಸ್ತಿಯಲ್ಲಿ ಶಿವಮೊಗ್ಗಕ್ಕೆ ಸಿಂಹಪಾಲು! ಪ್ರೆಸ್​ಟ್ರಸ್ಟ್​ನ ನಾಲ್ವರಿಗೆ ಪ್ರಶಸ್ತಿ! ಪೂರ್ತಿ ವಿವರ ಓದಿ

ನಡೆದಿದ್ದೇನು? 

ಸಾಗರ ಕಡೆಯಿಂದ ಬಂದ ಖಾಸಗಿ ಬಸ್ ವೊಂದು, ಚೋರಡಿಯಲ್ಲಿ ಪ್ರಯಾಣಿಕರು ಇಳಿಸಲು ನಿಂತಿತ್ತು. ಈ ವೇಳೆ  ಹಿಂಬದಿಯಿಂದ ಗೂಡ್ಸ್ ಆಟೋ ಬಂದಿದೆ. ಅದರ ಹಿಂದೆ ಬಂದ ಕೆಂಪು ಇಟ್ಟಿಗೆ ತುಂಬಿದ್ದ ಲಾರಿ ಚಾಲಕ ಗೂಡ್ಸ್ ಆಟೋವನ್ನು ಓವರ್ ಟೇಕ್ ಮಾಡಲು ಮುಂದಾಗಿದ್ಧಾನೆ. ಈ ವೇಳೆ ಗೂಡ್ಸ್ ಆಟೋಕ್ಕೆ ಡಿಕ್ಕಿ ಹೊಡೆದಿದ್ದಾನೆ.  ನಿಯಂತ್ರಣ ಕಳೆದುಕೊಂಡ ಗೂಡ್ಸ್ ಆಟೋ ಬಸ್ ಗೆ ಡಿಕ್ಕಿ ಹೊಡೆದಿದೆ.  ಇದೇ ಸಮಯದಲ್ಲಿ ಸಾಗರ ಕಡೆಗೆ ತೆರಳುತ್ತಿದ್ದ ಕಾರ್ ಗೆ ಲಾರಿ ತಗುಲಿದೆ.

ಘಟನೆಯಿಂದಾಗಿ ಚೋರಡಿಯಲ್ಲಿ ಅರ್ಧ ಗಂಟೆಗು ಹೆಚ್ಚು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment