Bommanakatte incident ಶಿವಮೊಗ್ಗದಲ್ಲಿ ಎಣ್ಣೆ ಪಾರ್ಟಿ ವೇಳೆ ನಡೆದ ಕಿರಿಕ್ – ಕೊಲೆಯಲ್ಲಿ ಅಂತ್ಯ!
Shivamogga news / ಶಿವಮೊಗ್ಗ ನಗರ ಹೊರವಲಯದ ಬೊಮ್ಮನಕಟ್ಟೆಯಲ್ಲಿ ಸ್ನೇಹಿತರ ನಡುವೆ ನಡೆದ ಎಣ್ಣೆ ಪಾರ್ಟಿ ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಜಗಳದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದಾನೆ.
ಘಟನೆ ವಿವರ Bommanakatte incident
ಶಿವಮೊಗ್ಗದ ಬೊಮ್ಮನಕಟ್ಟೆಯ ಇ-ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. ಬೊಮ್ಮನಕಟ್ಟೆ ಎ-ಬ್ಲಾಕ್ ನಿವಾಸಿ ಪವನ್ (28) ಕೊಲೆಯಾದ ಯುವಕ. ಪವನ್ ತನ್ನ ಸ್ನೇಹಿತ ಶಿವಕುಮಾರ್ ಅವರ ಮನೆಗೆ ರಾತ್ರಿ ಪಾರ್ಟಿ ನಿಮಿತ್ತ ಹೋಗಿದ್ದ. ಪಾರ್ಟಿ ವೇಳೆ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಈ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪವನ್ ಶಿವಕುಮಾರ್ ಮನೆಯಲ್ಲಿಯೇ ಸಾವನ್ನಪ್ಪಿದ್ದಾನೆ.
ಪೊಲೀಸ್ ಕಾರ್ಯಾಚರಣೆ
ಘಟನೆ ನಡೆದ ಬೆನ್ನಲ್ಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶಿವಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Shivamogga murder, Drunken brawl, Party violence, Pawan murder, Shivakumar arrest, Bommanakatte incident, Vinobanagar Police, Crime news Karnataka, Shivamogga crime, Friend murder #Shivamogga #Murder #CrimeNews #DrunkenBrawl #Karnataka #BreakingNews #PoliceArrest #PartyGoneWrong #JusticeForPawan