ಯುವನಿಧಿ ಯೋಜನೆ ಲಾಭ ? ಶಿವಮೊಗ್ಗ, ದಾವಣಗೆರೆ ವಿಚಾರದಲ್ಲಿ ಏನಿದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣರ ಆರೋಪ

Bjp Yuva Morcha district president Harikrishna alleged that the yuvanidhi scheme will not benefit the graduates of Shivamogga and Davanagere

ಯುವನಿಧಿ ಯೋಜನೆ ಲಾಭ ? ಶಿವಮೊಗ್ಗ, ದಾವಣಗೆರೆ ವಿಚಾರದಲ್ಲಿ  ಏನಿದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣರ ಆರೋಪ
Bjp Yuva Morcha district president Harikrishna alleged that the yuvanidhi scheme will not benefit the graduates of Shivamogga and Davanagere

SHIVAMOGGA |  Jan 11, 2024  |ರಾಜ್ಯ ಸರ್ಕಾರದ ಯುವನಿಧಿ ಯೋಜನೆ ನಿಯಮದ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಸದ್ಯಕ್ಕೆ ಯಾರು ಫಲಾನುವಿಗಳಾಗಲು ಸಾಧ್ಯವಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣ /Bjp Yuva Morcha district president Harikrishna

ನಿನ್ನೆ ಈ ಸಂಬಂಧ  ಪತ್ರಿ,ಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಎಲ್ಲ ನಿರುದ್ಯೋಗಿ ಫಲಾನುಭವಿಗಳಿಗೆ ಯುವನಿಧಿ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ಈಗ 2023 ರಲ್ಲಿ ಉತ್ತೀರ್ಣವಾಗಿ 6 ತಿಂಗಳು ಕಳೆದಿರಬೇಕು ಎಂಬ ಮಾನದಂಡ ರೂಪಿಸಿದ್ದಾರೆ. ಆದರೆ, ಕುವೆಂಪು ವಿಶ್ವವಿದ್ಯಾಲಯದ ಅಂತಿಮ ಪದವಿ ಪರೀಕ್ಷೆಗಳ ಫಲಿತಾಂಶ ಕಳೆದ ಅಕ್ಟೋಬರ್‌ನಲ್ಲಿ ಪ್ರಕಟವಾಗಿದೆ. ಅಂದರೆ, ಫಲಿತಾಂಶ ಪ್ರಕಟವಾಗಿ ಕೇವಲ 3 ತಿಂಗಳು ಮಾತ್ರ ಆಗಿದೆ. ಹಾಗಾಗಿ, ಅವರು ಫಲಾನುಭವಿ ಆಗಲು ಬರುವುದೇ ಇಲ್ಲ ಎಂದು ಆರೋಪಿಸಿದ್ದಾರೆ. 

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕೂಡ ಬಹುತೇಕ ಅದೇ ಸಮಯಕ್ಕೆ ಫಲಿತಾಂಶ ಪ್ರಕಟವಾಗಿದೆ. ಆ ವಿದ್ಯಾರ್ಥಿಗಳು ಕೂಡ ಯೋಜನೆ ಫಲಾನುಭವಿ ಆಗಲು ಬರುವುದಿಲ್ಲ. ಅರ್ಜಿ ಸಲ್ಲಿಸಬಹುದು ಅಷ್ಟೇ. ಆದರೆ, ಹಣ ಪಡೆಯಲು ಇನ್ನೂ 3 ತಿಂಗಳು ಕಾಯಬೇಕಾಗುತ್ತದೆ. ಫಲಾನುಭವಿಗಳೇ ಇಲ್ಲದೇ ಶಿವಮೊಗ್ಗದಲ್ಲಿ ಕಾರ್ಯಕ್ರಮ ಮಾಡಿ, ಯಾರಿಗೆ ಹಣ ಹಾಕುತ್ತಾರೆ ಎಂದು ಪ್ರಶ್ನಿಸಿದರು.

ಚುನಾವಣೆ ಪೂರ್ವದಲ್ಲಿ ಒಂದು ನಿರ್ಧಾರ, ಅಧಿಕಾರ ಸಿಕ್ಕಾಗ ಒಂದು ನಿರ್ಧಾರದಿಂದ ಬಹುತೇಕ ನಿರುದ್ಯೋಗಿಗಳು ಯುವನಿಧಿಯಿಂದ ದೂರ ಉಳಿದಿದ್ದಾರೆ. ಈಗ ಅವರೆಲ್ಲ ಏನೂ ಮಾಡಬೇಕು? ಕಾಂಗ್ರೆಸ್ ಗ್ಯಾರಂಟಿ ಮಾನದಂಡಗಳೊಂದಿಗೆ ಹೊರಟಿದೆ. ಚುನಾವಣಾ ಪೂರ್ವದಲ್ಲಿ ಎಲ್ಲರಿಗೂ ಗ್ಯಾರಂಟಿ ಎಂದು ಹೇಳಿ ನಂತರ ನಿಯಮಗಳನ್ನು ಹೇರುತ್ತಿದ್ದಾರೆ ಎಂದು ದೂರಿದ್ದಾರೆ.