BIG NEWS | ಮಂಗನ ಕಾಯಿಲೆಗೆ ಮುಂದಿನ ವರುಷ ಹೊಸ ವ್ಯಾಕ್ಸಿನ್‌! | ಸರ್ಕಾರದಿಂದ ಗುಡ್‌ ನ್ಯೂಸ್‌

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌

ಮಲೆನಾಡು ಜಿಲ್ಲೆಗಳನ್ನು ಬೇಸಿಗೆಯಲ್ಲಿ ಕಾಡುವುದರ ಜೊತೆಗೆ ಆತಂಕದಲ್ಲಿರಿಸುವ ಕಾಯಿಲೆ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ Kyasanur Forest Disease ಅಥವಾ ಕೆಎಫ್‌ಡಿ ಅಥವಾ ಮಂಗನ ಕಾಯಿಲೆ. ಸದ್ಯ ಈ ಕಾಯಿಲೆಗೆ ಮುಂದಿನ ವರುಷ ಹೊಸ ಲಸಿಕೆ ಸಿಗಲಿದೆ. 

ಹೌದು, 2026 ರ ವೇಳೆಗೆ ಹೊಸ ಲಸಿಕೆ ದೊರೆಯುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ರವರು ವಿಧಾನಸಭೆಯಲ್ಲಿ ತಿಳಿಸಿದರು. ಕಲಾಪದಲ್ಲಿ ತೀರ್ಥಹಳ್ಳಿ ಶಾಸಕ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಸಚಿವ ಗುಂಡೂರಾವ್‌ ಈಗಿರುವ ಲಸಿಕೆಯನ್ನು 1979 ರಲ್ಲಿ ಕಂಡುಹಿಡಿಯಲಾಗಿತ್ತು. ಅದು ಕಾಯಿಲೆ ವಾಸಿ ಮಾಡುವ ದಕ್ಷತೆಯನ್ನು ಕಳೆದುಕೊಂಡಿದೆ. 

ಹೀಗಾಗಿ ರಾಜ್ಯಸರ್ಕಾರದ ಕೋರಿಕೆ ಹಿನ್ನೆಲೆಯಲ್ಲಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council For Medical Research ಐಸಿಎಂಆರ್) ಲಸಿಕೆ ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೈದರಾಬಾದ್ ಮೂಲದ ಭಾರತೀಯ ರೋಗನಿರೋಧಕ ಸಂಸ್ಥೆಗೆ ವಹಿಸಿದೆ. ಅಲ್ಲಿ ನಡೆಯುತ್ತಿರುವ ಸಂಶೋಧನೆ ಯಶಸ್ವಿಯಾದರೆ ಮುಂದಿನ ವರುಷ ಲಸಿಕೆ ಸಿಗಲಿದೆ ಎಂದು ತಿಳಿಸಿದರು. 

Share This Article