ಲಾಲ್ ಕೃಷ್ಣ ಆಡ್ವಾಣಿಯವರಿಗೆ ಭಾರತ ರತ್ನ! ಶಿವಮೊಗ್ಗದಲ್ಲಿ ಆರಗ ಜ್ಞಾನೇಂದ್ರರವರ ಮೇಜರ್ ಸ್ಟೇಟ್ಮೆಂಟ್​

Malenadu Today

Shivamogga | Feb 3, 2024 |   ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಆಡ್ವಾಣಿಯವರಿಗೆ ಭಾರತ ರತ್ನ (Bharat Ratna for Lal Krishna Advani) ಘೋಷಣೆಯಾದ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ  96 ವರ್ಷದ ಬಿಜೆಪಿಯ ಭೀಷ್ಮ ಎಲ್‌ ಕೆ.ಆಡ್ವಾಣಿ 

ಅವರು ಇಡೀ ದೇಶದ ಮೂಲೆ ಮೂಲೆಗಳಲ್ಲಿ ರಥಯಾತ್ರೆ ಮೂಲಕ ದೇಶವನ್ನು ಜೋಡಿಸಿದ್ದರು. ದೇಶದಲ್ಲಿ ಸಾಂಸ್ಕೃತಿಕ ಸಂಚಲನವನ್ನು ನಿರ್ಮಾಣ ಮಾಡಿದಂತಹ ಆಡ್ವಾಣಿ ಅವರಿಗೆ ಭಾರತದ ಸರ್ಕಾರ ಭಾರತ ರತ್ನ ನೀಡಿ ಪುರಸ್ಕರಿಸಿದೆ 

ಆಡ್ವಾಣಿ ಅವರಿಗೆ ಈ ಗೌರವ ನೀಡಿರುವುದರಿಂದ ಭಾರತ ರತ್ನ ಪುರಸ್ಕಾರಕ್ಕೂ ಸಹ ಮೆರಗೂ ಬಂದಂತಾಗಿದೆ. ಎಲ್​.ಕೆ.ಆಡ್ವಾಣಿಯವರಿಗೆ ಇನ್ನಷ್ಟು ಆರೋಗ್ಯ ನೀಡಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ಅಲ್ಲದೆ ಈ ಮೊದಲೇ ಅವರಿಗೆ ಭಾರತ ರತ್ನ ನೀಡಬೇಕಾಗಿತ್ತು ಎಂದಿದ್ದಾರೆ. 

ಇನ್ನೂ ಇದೇ ವೇಳೆ  ಪ್ರತ್ಯೇಕ ರಾಷ್ಟ್ರದ  ಡಿ.ಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರವರು ಅವರ ಸಂಸತ್ ಸದಸ್ಯತ್ವ ಅನರ್ಹ ಗೊಳಿಸಬೇಕು. ಪ್ರಚಾರದ ಚಪಲಕ್ಕೆ ದೇಶ ವಿಭಜನೆಯ ಮಾತಾನಾಡಿದ್ದಾರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬದ್ಧತೆ ಇದ್ರೆ ಇವರ ಮೇ‌ಲೆ‌ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 


Share This Article