bhadravathi story ತುಮಕೂರಿನಲ್ಲಿ ಭದ್ರಾವತಿಯ ಇಬ್ಬರು ಅರೆಸ್ಟ್​

prathapa thirthahalli
Prathapa thirthahalli - content producer

bhadravathi story ತುಮಕೂರಿನಲ್ಲಿ ಭದ್ರಾವತಿಯ ಇಬ್ಬರು ಅರೆಸ್ಟ್​

bhadravathi story : ತುಮಕೂರಿನ ಸಿಆರ್​ ಪುರ ಪೊಲೀಸ್​ ಠಾಣೆ ವ್ಯಾಪ್ತಿಯ ದೇವಸ್ಥಾನದಲ್ಲಿ ಕಳ್ಳತನ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ನರಸಿಂಹಮೂರ್ತಿ (21) ಮತ್ತು ನಾಗರಾಜು (18) ಬಂಧಿತ ಆರೋಪಿಗಳು

ಆರೋಪಿಗಳು ಜೂನ್ 4ರಂದು ಸಿ.ಎಸ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಕೆಂಪಮ್ಮ ದೇವಸ್ಥಾನದ ಬಾಗಿಲು ಬೀಗ ಮುರಿದು ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಯಾರೋ ಕೂಗಿದ ಶಬ್ದ ಕೇಳಿದಂತಾಗಿ ಅಲ್ಲಿಂದ ತಪ್ಪಿಸಿಕೊಡಿದ್ದಾರೆ. ಆಗ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಗಳು ಕಳ್ಳತನ ಮಾಡುವಾಗ ಗೂಗಲ್​ ಮ್ಯಾಪ್​ನಲ್ಲಿ ನಮ್ಮ ಹತ್ತಿರ ಯಾವುದಾದರು ದೇವಸ್ಥಾನವಿದೆಯೇ ಎಂದು ಪರಿಶೀಲಿಸಿ ಭದ್ರತೆ ಇಲ್ಲದ ದೇವಸ್ಥಾಗಳಲ್ಲಿ ಕಳ್ಳತನ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.

Share This Article