bhadravathi : ಇಂದಿನಿಂದ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

prathapa thirthahalli
Prathapa thirthahalli - content producer

Bhadravathi :  ಶಿವಮೊಗ್ಗ ಭದ್ರಾವತಿ ಹೆದ್ದಾರಿಯ ಕಡದಕಟ್ಟೆಯಲ್ಲಿ ನಿರ್ಮಾಣವಾಗಿರುವ  ರೈಲ್ವೆ ಮೇಲ್ಸೇತುವೆಯನ್ನು ಇಂದು ಮಧ್ಯಾಹ್ನ 12 ಗಂಟೆಗೆ ಸಂಸದ ಬಿವೈ ರಾಘವೇಂದ್ರ ಉದ್ಘಾಟನೆ ಮಾಡಲಿದ್ದಾರೆ.

bhadravathi :  23 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ

ಕಳೆದ ಮೂರು ವರ್ಷಗಳ ಹಿಂದೆ 2022 ನೇ ಇಸವಿಯಲ್ಲಿ ಸುಮಾರು 23 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಕಾರ್ಯವನ್ನ ಆರಂಭಿಸಲಾಗಿತ್ತು.  ಹೈದರಾಬಾದ್​ನ ಎಸ್ ಆರ್ ಸಿ ಇನ್ ಪ್ರಾ ಪ್ರೈವೆಟ್ ಲಿಮಿಟೆಡ್ ಕಂಪನಿ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ಪಡೆದಿತ್ತು. ಸೇತುವೆ ಕಾಮಗಾರಿ ತಡವಾಗುತ್ತಿದ್ದರಿಂದ ಶಿವಮೊಗ್ಗ ಹಾಗೂ ಭದ್ರಾವತಿ ನಡುವೆ ಸಂಚರಿಸುವ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂದು ಆ ಸೇತುವೆ ಇಂದು ಉದ್ಘಾಟನೆಯಾಗಲಿದ್ದು, ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.

bhdravati bhadravati railway flyover
bhdravati bhadravati railway flyover

 

TAGGED:
Share This Article