Bhadravathi Murder Case ಶಿವಮೊಗ್ಗ : ಹಳೆಯ ವೈಷಮ್ಯ ಮತ್ತು ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಭದ್ರಾವತಿಯಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣದಲ್ಲಿ, ಒಟ್ಟು ಎಂಟು ಮಂದಿ ಆರೋಪಿಗಳಿಗೆ ಶಿವಮೊಗ್ಗದ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಜೀವ ಸೆರೆವಾಸದ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Bhadravathi Murder Case ಏನಿದು ಘಟನೆ
ಭದ್ರಾವತಿಯ ಹನುಮಂತನಗರದ ನಿವಾಸಿ, ಶಾರುಖ್ ಖಾನ್ (26) ಅವರನ್ನು ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿತ್ತು. ಈ ಹಿನ್ನೆಲೆ ಮೃತನ ತಂದೆ ದೂರುನೀಡಿದ್ದು, ಅದೇ ಪ್ರದೇಶದ ನಿವಾಸಿಯಾದ ರಮೇಶ @ ಹಂದಿ ರಮೇಶ ಹಾಗೂ ಆತನ ಸಹಚರರು ಸೇರಿ ಈ ಕೃತ್ಯ ಎಸಗಿರುವುದು ದೃಢಪಟ್ಟಿತ್ತು.
30-09-2020 ರಂದು ರಾತ್ರಿ, ಹಂದಿ ರಮೇಶ ಮತ್ತು ಆತನ ಸಹಚರರು ಶಾರುಖ್‌ನ ಮನೆ ಬಳಿ ಬಂದು ಕೊಲೆ ಬೆದರಿಕೆ ಹಾಕಿದ್ದರು. ನಂತರ ಹಳೆಯ ದ್ವೇಷದಿಂದ ಶಾರುಖ್‌ನನ್ನು ಕೊಲೆ ಮಾಡಿದ್ದರು. ಈ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0100/2020 ಕಲಂ 302, 201,120(b), 143,147, 144, 148 ಸಹಿತ 149 ಐಪಿಸಿ ಸೇರಿದಂತೆ ಐಪಿಸಿಯ ವಿವಿಧ ಕಲಂಗಳ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖಾಧಿಕಾರಿಗಳಾಗಿದ್ದ ಆಗಿನ ಭದ್ರಾವತಿ ನಗರ ವೃತ್ತದ ಸಿಪಿಐ ರಾಘವೇಂದ್ರ ಕಾಂಡಿಕೆ ಅವರು ತನಿಖೆ ನಡೆಸಿ, ಒಟ್ಟು 08 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
Bhadravathi Murder Case ಶಿಕ್ಷೆಗೊಳಗಾದ ಆರೋಪಿಗಳು
1.ರಮೇಶ @ ಹಂದಿ ರಮೇಶ 44 ವರ್ಷ, ಹೊಸಮನೆ ಭದ್ರಾವತಿ, 2.ವೆಂಕಟರಾಮ 35 ವರ್ಷ ಹನುಮಂತನಗರ ಭದ್ರಾವತಿ, 3. ಚಂದ್ರ 37 ವರ್ಷ, ಹನುಮಂತನಗರ ಭದ್ರಾವತಿ, 4. ಕಾರ್ತಿಕ 24 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, 5. ಮಧುಸೂದನ್ 28 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, 6. ರಮೇಶ 37 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, 7. ನಾಗರಾಜ 25 ವರ್ಷ, ಹೊಸಮನೆ ಭದ್ರಾವತಿ, 8. ಸಿದ್ದಪ್ಪ 48 ವರ್ಷ ಸತ್ಯ ಸಾಯಿ ನಗರ ಭದ್ರಾವತಿ,
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು. ಸುದೀರ್ಘ ವಿಚಾರಣೆ ನಂತರ, ಎಲ್ಲಾ ಎಂಟು ಜನ ಆರೋಪಿಗಳ ವಿರುದ್ಧ ಆರೋಪವು ದೃಢಪಟ್ಟ ಕಾರಣ, ನ್ಯಾಯಾಲಯವು ಅಜೀವ ಸೆರೆವಾಸದ ಕಠಿಣ ಶಿಕ್ಷೆ ವಿಧಿಸಿದೆ.


