ಭದ್ರಾವತಿ: ಗೃಹಿಣಿಯೋರ್ವರಿಗೆ ಚಾಕು ತೋರಿಸಿ ಬೆದರಿಸಿ ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದವನನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಒಂದೇ ದಿನದಲ್ಲಿ ಬಂಧಿಸಿದ್ದಾರೆ. ನಗರದ ನ್ಯೂಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Bhadravathi harihara Gold Chain Snatcher Arrested
ಇಲ್ಲಿನ ಜೇಡಿಕಟ್ಟೆಯಲ್ಲಿ ಗೃಹಿಣಿಯೋರ್ವರು ಜ.5ರಂದು ಬೆಳಗಿನ ಜಾವ ಮನೆ ಮುಂದೆ ಅಂಗಳ ಸಾರಿಸಲು ಮನೆಯ ಪಕ್ಕದಲ್ಲಿದ್ದ ಡ್ರಮ್ಮಿನಿಂದ ನೀರನ್ನು ತರಲು ಹೋಗಿದ್ದರು. ಈ ವೇಳೇ ಅಲ್ಲಿಗೆ ಒಬ್ಬವ್ಯಕ್ತಿ ಬಂದು ಚಾಕು ತೋರಿಸಿ, ಆಕೆಗೆ ಬೆದರಿಸಿ ಆಕೆಯ ಕೊರಳಲ್ಲಿದ್ದ 50 ಸಾವಿರ ರೂ. ಮೌಲ್ಯದ ಬಂಗಾರದ ಎರಡು ತಾಳಿ, ಒಂದು ಲಕ್ಷ್ಮೀ ತಾಳಿ ಹಾಗೂ 4 ಗುಂಡುಗಳಿರುವ ತಾಳಿ ಕರಿಮಣಿ ಸರವನ್ನು ಆಕೆಯಿಂದ ಬಿಚ್ಚಿಸಿ ತೆಗೆದುಕೊಂಡು ಪರಾರಿಯಾಗಿದ್ದ
ಈ ಕುರಿತಂತೆ ಮಹಿಳೆ ನ್ಯೂಟೌನ್ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದರು. ಘಟನೆ ಕುರಿತಂತೆ ಎಸ್ಪಿ ನಿರ್ದೇಶನದಂತೆ ನಗರದ ಡಿವೈಎಸ್ ಪಿ ಪ್ರಕಾಶ್ ರಾಠೋಡ್ ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕಿ ನಾಗಮ್ಮ ಹಾಗೂ ನ್ಯೂಟೌನ್ ಠಾಣೆಯ ಪಿಎಸ್ ಐ ರಮೆಶ್ ಹಾಗೂ ಪೋಲಿಸ್ ಸಿಬ್ಬಂದಿಗಳ ತಂಡ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದೆ.

ಈ ಕಾರ್ಯಾಚರಣೆಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಸಪಾಳ್ಯದ ಕೂಲಿಕೆಲಸಗಾರ ಪ್ರತಾಪ (25) ಎಂಬಾತನನ್ನು ಬಂಧಿಸಿ, ಆತ ಕಳವು ಮಾಡಲು ಬಳಸಿದ ಒಂದು ಸಣ್ಣ ಚಾಕು, 75 ಸಾವಿರ ರೂ. ಮೌಲ್ಯದ ಒಂದು ಬೈಕ್, 75 ಸಾವಿರ ರೂ. ಬೆಲೆಯ ಬಂಗಾರದ ಎರಡು ತಾಳಿ, ಒಂದು ಲಕ್ಷ್ಮಿತಾಳಿ ಮತ್ತು 4 ಬಂಗಾರದ ಗುಂಡುಗಳಿರುವ ಕರಿಮಣಿ ಮಾಂಗಲ್ಯದ ಸರ ಸೇರಿ ಆತನಿಂದ ಒಟ್ಟು ಅಂದಾಜು 1ಲಕ್ಷದ 50 ಸಾವಿರ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಟಿಯಿಂದ ಹಳ್ಳಿಗಳವರೆಗೂ ನಾಳೆ ಶಿವಮೊಗ್ಗದಲ್ಲಿ ಬಹುತೇಕ ಕಡೆಗಳಲ್ಲಿ ಕರೆಟ್ ಇರಲ್ಲ! ವಿವರ ತಿಳ್ಕೊಂಡುಬಿಡಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
