Bhadravathi Elderly Man Dies After Clash ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದು, ಅವರ ಸಾವಿನ ಸಂಬಂಧ ಅನುಮಾನಗಳು ವ್ಯಕ್ತವಾಗಿದ್ದು ದೂರು ಸಹ ದಾಖಲಾಗಿದೆ. ನಡೆದ ಘಟನೆ ಏನಂದರೆ, ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಕ್ಕುಂದದಲ್ಲಿ ಜಮೀನು ವಿಷಯವಾಗಿ ಅಕ್ಕ, ತಮ್ಮನ ಕುಟುಂಬದ ನಡುವೆ ಮಂಗಳವಾರ ನಡೆದ ಜಗಳದಲ್ಲಿ ತಮ್ಮನ ಸಾವು ಸಂಭವಿಸಿದೆ.
ಸುಬ್ರಹ್ಮಣ್ಯ(70) ಮೃತಪಟ್ಟವರು. ಸುಬ್ರಹ್ಮಣ್ಯ ಮತ್ತು ಅವರ ಹಿರಿಯ ಸಹೋದರಿ ಪೂವಮ್ಮ ಅವರ ಕುಟುಂಬದ ನಡುವೆ ಜಮೀನು ವಿಷಯವಾಗಿ ಹಲವು ಬಾರಿ ಜಗಳವಾಗಿತ್ತು. ಮಂಗಳವಾರ ಮಧ್ಯಾಹ್ನ ಸುಬ್ರಹ್ಮಣ್ಯ ಅವರೊಂದಿಗೆ ಪೂವಮ್ಮ ಅವರ ಮಕ್ಕಳಾದ ಪ್ರದೀಪ, ಅಣ್ಣಾದೊರೈ ಮತ್ತು ಮೊಮ್ಮಗ ಕಿರಣ ಜಗಳಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ಈ ಮೂವರು ಸುಬ್ರಹ್ಮಣ್ಯ ಅವರನ್ನು ಥಳಿಸಿ ದೂಡಿದಾಗ ಕೆಳಗೆ ಬಿದ್ದ ಅವರು ಪ್ರಜ್ಞಾಶೂನ್ಯರಾಗಿದ್ದರು.
ಸಂಬಂಧಿಗಳು ಅವರನ್ನು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟೊತ್ತಿಗೆ ಮೃತಪಟ್ಟಿದ್ದರು. ಜಗಳದ ನಡುವೆ ಕೆಳಗೆ ಬಿದ್ದ ಸುಬ್ರಹ್ಮಣ್ಯ ಅವರಿಗೆ ಹೃದಯಾಘಾತವಾಗಿರುವ ಸಂಭವವಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಈ ಸಂಬಂಧವಾಗಿ ಸುಬ್ರಹ್ಮಣ್ಯ ಕುಟುಂಬದವರು ಪ್ರದೀಪ, ಅಣ್ಣಾದೊರೈ, ಕಿರಣ ಸೇರಿದಂತೆ ನಾಲ್ವರ ವಿರುದ್ದ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಮಾಚೇನಹಳ್ಳಿ ಸೇರಿದಂತೆ ಶಿವಮೊಗ್ಗದ ವಿವಿಧ ಕ್ಯಾಂಪ್‌ಗಳಲ್ಲಿ ಡಿಸೆಂಬರ್ 24 ಕ್ಕೆ ವಿದ್ಯುತ್ ಸ್ಥಗಿತ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಭದ್ರಾವತಿ ಆಸ್ತಿಗಾಗಿ ಅಕ್ಕ-ತಮ್ಮನ ಕುಟುಂಬಗಳ ನಡುವೆ ಜಗಳ; ವೃದ್ಧನ ಸಾವು Bhadravathi Elderly Man Dies After Clash Over Land Dispute in Ukkunda