ಜೈಭೀಮ್ ನಗರದಲ್ಲಿ ಕೊ*ಲೆಯ ಬೆನ್ನಿಗೆ ಕೊ*ಲೆ! ಎಲ್ಲಾ 5 ಆರೋಪಿಗಳು ಅರೆಸ್ಟ್​! ಬ್ರದರ್ ಗ್ಯಾಂಗ್​ನಲ್ಲಿದ್ದವರು ಇವರೇ

ajjimane ganesh

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿಭದ್ರಾವತಿ ಓಲ್ಡ್​ ಟೌನ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದ್ದ ಇಬ್ಬರ ಸಾವಿನ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳು ಇಲ್ಲಿನ ಜೈಭೀಮ್ ನಗರದಲ್ಲಿ ಇಬ್ಬರು ವ್ಯಕ್ತಿಗಳನ್ನು ಮಾರಣಾಂತಿಕವಾಗಿ ಇರಿದು ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Bhadravathi Double M case 5 Arrested Accused Details Background of the Killing
Bhadravathi Double M case 5 Arrested Accused Details Background of the Killing

ಘಟನೆಯ ಹಿನ್ನೆಲೆ/Bhadravathi

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಂದೀಶ್ ಮತ್ತು ಸೃಷ್ಟಿ ಎಂಬ ಯುವಕ-ಯುವತಿ ಸಂಜೆ ವೇಳೆ ಹಳೇ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದ್ದಾಗ, ಯುವತಿ ಸೃಷ್ಟಿ ತಾನು ನಂದೀಶ್ ಜೊತೆಯಲ್ಲೇ ಹೋಗುವುದಾಗಿ ಕುಟುಂಬ ಸದಸ್ಯರ ಮುಂದೆ ತಿಳಿಸಿದ್ದಳು. ಇದೇ ವಿಚಾರಕ್ಕೆ ಕೋಪಗೊಂಡ ಸೃಷ್ಟಿಯ ಸಹೋದರ ಮತ್ತು ಆತನ ಸ್ನೇಹಿತರು, ಈ ಪ್ರೇಮಿಗಳಿಬ್ಬರನ್ನು ಬೆಂಬಲಿಸುತ್ತಿದ್ದವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.  

Bhadravathi Double M case 5 Arrested Accused Details Background of the Killing
Bhadravathi Double M case 5 Arrested Accused Details Background of the Killing

ಓಲ್ಡ್​ ಟೌನ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೇಮ ಕದನ! ಪ್ರೀತಿಸಿದ ಯುವತಿಯ ಬ್ರದರ್​​ ಗ್ಯಾಂಗ್​ನಿಂದ ಇಬ್ಬರಿಗೆ ಇರಿತ, ಸಾವು! ಎಸ್​ಪಿ ಹೇಳಿದ್ದೇನು?

ಸೃಷ್ಟಿಯ ಸಹೋದರ ಸೇರಿ ಆತನ ಗುಂಪು, ಜೈಭೀಮ್ ನಗರದ ಬಳಿ 25 ವರ್ಷದ ಕಿರಣ್‌ ಮತ್ತು 65 ವರ್ಷದ ಮಂಜುನಾಥ್ ಎಂಬಿಬ್ಬರನ್ನು ಇರಿದು ಹತ್ಯೆ ಮಾಡಿತ್ತು. ಈ ಬಗ್ಗೆ ಮಲೆನಾಡು ಟುಡೆಯ ವರದಿ ಇಲ್ಲಿದೆ  ಜಗಳ ಬಿಡಿಸಲು ಹೋದವರ ಜೀವ ಹೋದ ಕಥೆ, ಭದ್ರಾವತಿಯಲ್ಲಿ ನಿಜಕ್ಕೂ ನಡೆದಿದ್ದೇನು, ಜೆಪಿ ಬರೆಯುತ್ತಾರೆ

ಪ್ರಕರಣದ ಗಂಭೀರತೆ ಅರಿತ ಪೊಲೀಸರು ಕಾರ್ಯಾಚರಣೆ ಕೈಗೊಂಡು, ಕೊಲೆಗೆ ಕಾರಣರಾದ ಐವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಜೈಭೀಮ್ ನಗರದ ನಿವಾಸಿಗಳಾಗಿದ್ದು, ಇವರಲ್ಲಿ ನಗರಸಭೆಯ ಪೌರಕಾರ್ಮಿಕರು ಮತ್ತು ಟಾಟಾ ಎಸ್ ವಾಹನ ಚಾಲಕರೂ ಸೇರಿದ್ದಾರೆ.

Bhadravathi Double M case 5 Arrested Accused Details Background of the Killing
Bhadravathi Double M case 5 Arrested Accused Details Background of the Killing

ಬಂಧಿತ ಆರೋಪಿಗಳು

  • ಮಂಜುನಾಥ್ @ ಸೈಲೆಂಟ್ ಶಶಿ: 29 ವರ್ಷ, ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಜೈಭೀಮ್ ನಗರದ 4 ನೇ ತಿರುವಿನ ನಿವಾಸಿಯಾಗಿದ್ದಾರೆ.
  • ಭರತ್ @ ಸುಂಡು: 32 ವರ್ಷ, ನಗರಸಭೆಯಲ್ಲಿ ಟಾಟಾ ಎಸ್​ ವಾಹನ ಚಾಲಕರಾಗಿದ್ದು, ಜೈಭೀಮ್ ನಗರದ 1 ನೇ ತಿರುವಿನಲ್ಲಿ ವಾಸವಿದ್ದಾರೆ.
  • ಸಂಜಯ್ @ ಕುಳ್ಳಿ: 24 ವರ್ಷ, ನಗರಸಭೆಯಲ್ಲಿ ಕೂಲಿ ಮತ್ತು ಡ್ರೈವರ್ ಕೆಲಸವನ್ನು ಮಾಡುತ್ತಿದ್ದು, ಜೈಭೀಮ್ ನಗರದ 1 ನೇ ತಿರುವಿನ ನಿವಾಸಿಯಾಗಿದ್ದಾರೆ.
  • ಸುರೇಶ್ @ ಸೂರಿ: 27 ವರ್ಷ, ಕೂಲಿ ಕೆಲಸ ಮಾಡುತ್ತಿದ್ದು, ಜೈಭೀಮ್ ನಗರದ 2 ನೇ ತಿರುವಿನ 1 ಬಿ ಬ್ಲಾಕ್ ನಿವಾಸಿಯಾಗಿದ್ದಾರೆ.
  • ವೆಂಕಟೇಶ್ @ ಕೆಂಚ: 28 ವರ್ಷ, ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಜೈಭೀಮ್ ನಗರದ 1 ನೇ ತಿರುವಿನಲ್ಲಿ ವಾಸವಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Bhadravathi Double M case 5 Arrested Accused Details Background of the Killing
Bhadravathi Double M case 5 Arrested Accused Details Background of the Killing
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಭದ್ರಾವತಿ ಜೋಡಿ ಕೊಲೆ 5 ಆರೋಪಿಗಳ ಬಂಧನ; ಆರೋಪಿಗಳ ವಿವರ, ಕೊಲೆಯ ಹಿನ್ನೆಲೆ Bhadravathi Double M case 5 Arrested Accused Details Background of the Killing
Share This Article