Bhadravathi Couple Suicide :ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಗೌಳಿಗಾರ ಕ್ಯಾಂಪ್‌ನ ವಿಠ್ಠಲ್ ರಾವ್ (48) ಮತ್ತು ಗಂಗಮ್ಮ (40) ಎಂಬ ದಂಪತಿಗಳು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಬಳಿ ಭದ್ರಾ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಂಪತಿಗಳು ಲಕ್ಕವಳ್ಳಿ ಬಳಿಯ ಜಗದಾಂಭ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು ಎನ್ನಲಾಗಿದೆ. ದೇವಾಲಯದ ಸಮೀಪವಿರುವ ಭದ್ರಾ ಬಲದಂಡೆ ನಾಲೆಗೆ ಹಾರಿ ಈ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
- Advertisement -
ಘಟನೆ ನಡೆದ ಸ್ಥಳದಲ್ಲಿ ಗಂಗಮ್ಮ ಅವರ ಮೃತದೇಹವು ನಾಲೆ ನೀರಿನಲ್ಲಿ ಪತ್ತೆಯಾಗಿದೆ. ಆದರೆ, ಪತಿ ವಿಠ್ಠಲ್ ರಾವ್ ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ವಿಠ್ಠಲ್ ರಾವ್ ಅವರ ಶವಕ್ಕಾಗಿ ನಾಲೆ ಪ್ರದೇಶದಲ್ಲಿ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.
Bhadravathi Couple Suicide