bhadra left canal ಭದ್ರಾ ಎಡದಂಡೆಯಲ್ಲಿ ಸ್ಲೋಸ್​ ಗೇಟ್ ಕಾಮಗಾರಿ! ಡಾ.ಕೆ.ಪಿ.ಅಂಶುಮಂತ್ ಪರಿಶೀಲನೆ ! ಏನೆಲ್ಲಾ ನಡೆಯುತ್ತಿದೆ

Malenadu Today

bhadra left canal ಭದ್ರಾ ಡ್ಯಾಂ ಕಾಮಗಾರಿಗಳ ಪರಿಶೀಲಿಸಿದ ಕಾಡಾ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್

ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ),  ಅಧ್ಯಕ್ಷರಾದ ಡಾ|| ಕೆ.ಪಿ. ಅಂಶುಮಂತ್ ಅವರು ಬಿ.ಆರ್. ಪ್ರಾಜೆಕ್ಟ್‌ನಲ್ಲಿರುವ ಭದ್ರಾ ಡ್ಯಾಂಗೆ ಭೇಟಿ ನೀಡಿ, ನಡೆಯುತ್ತಿರುವ ಸ್ಲೂಸ್​ ಗೇಟ್​ ಕಾಮಗಾರಿಯನ್ನು ಪರಿಶೀಲಿಸಿದರು.

ಭದ್ರಾ ಡ್ಯಾಂನಲ್ಲಿ ಪ್ರಗತಿಯಲ್ಲಿರುವ ಎಡದಂಡೆ ನಾಲೆಯ ಸ್ಲೂಸ್ ಗೇಟ್ ಕಾಮಗಾರಿಯನ್ನು ಅವರು ಕೂಲಂಕುಷವಾಗಿ ಪರಿವೀಕ್ಷಿಸಿದರು. ಕಾಮಗಾರಿಯ ಗುಣಮಟ್ಟ ಮತ್ತು ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರ, ಅವರು ಭದ್ರಾ ಬಲದಂಡೆಯಲ್ಲಿ ಕೈಗೊಳ್ಳಲಾಗುತ್ತಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಸಹ ಪರಿಶೀಲಿಸಿದರು. 

bhadra left canal
bhadra left canal

ಈ ಸಂದರ್ಭದಲ್ಲಿ, ಡಾ. ಅಂಶುಮಂತ್ ಅವರು ಸ್ಥಳೀಯ ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಯೋಜನೆಗಳ ಕುರಿತು ಅವರ ಅಭಿಪ್ರಾಯಗಳನ್ನು ಆಲಿಸಿದರು ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸಿದರು.

ಪರಿವೀಕ್ಷಣೆಯ ವೇಳೆ, ಭದ್ರಾ ಕಾಡಾ ಆಡಳಿತಾಧಿಕಾರಿ ಸತೀಶ್ ಆರ್, ಅಧೀಕ್ಷಕ ಇಂಜಿನಿಯರ್ ರವಿ ಚಂದ್ರ, ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದು, ಕಾಡಾ ಅಧ್ಯಕ್ಷರಿಗೆ ಮಾಹಿತಿ ಒದಗಿಸಿದರು.  

Share This Article