Bhadra Dam Water Releases Water as Inflow Rise 11 ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ
Malnad news today ಶಿವಮೊಗ್ಗ, ಜುಲೈ 11: ಮಲೆನಾಡಿನಲ್ಲಿ ಇವತ್ತು ಮತ್ತೆ ಮಳೆಯಾಗುತ್ತಿದೆ. ಈ ನಡುವೆ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಡಲಾಗಿದೆ. ಜಲಾಶಯದ ಒಳಹರಿವು ಕಡಿಮೆಯಿದೆ. 12 ಸಾವಿರ ಕ್ಯೂಸೆಕ್ಸ್ ನೀರು ಡ್ಯಾಮ್ಗೆ ಹರಿದು ಬರುತ್ತಿದ್ದು, ಈ ಪೈಕಿ ಇತ್ತೀಚಿನ ಮಾಹಿತಿ ಪ್ರಕಾರ, 2000-5000 ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದೆ. ಡ್ಯಾಮ್ ಭರ್ತಿಯಾಗುವ ಸೂಚನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನದಿಗೆ ನೀರು ಬಿಡಲಾಗುತ್ತಿದೆ. ಈ ನಿಟ್ಟಿನಲ್ಲಿ ನಾಲ್ಕು ಗೇಟ್ಗಳನ್ನು ಓಪನ್ ಮಾಡಿ ನೀರು ಹರಿಬಿಡಲಾಗುತ್ತಿದೆ.

71.53 5 tmc ಸಾಮರ್ಥ್ಯದ ಸಂಗ್ರವುಳ್ಳ ಜಲಾಶಯದಲ್ಲಿ ಈಗಾಗಲೇ 57.631 ಟಿಎಂಸಿ ನೀರು ಸಂಗ್ರಹವಾಗಿದೆ ಕಳೆದ ವರ್ಷ ಇದೇ ಸಮಯದಲ್ಲಿ 136 ಅಡಿ ನೀರು ಸಂಗ್ರಹವಾಗಿತ್ತು 6246 ಕಿಸೆಕ್ ನೀರು ಒಳಹರಿವಿತ್ತು ಈ ವರ್ಷ 12000 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಅತಿ ಶೀಘ್ರದಲ್ಲಿಯೇ ಈ ವರ್ಷ ಭದ್ರಾ ಜಲಾಶಯ ತುಂಬುವ ಹಂತಕ್ಕೆ ತಲಲಿದೆ. ಇನ್ನು ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 174.4 ಅಡಿಗಳಿಗೆ ತಲುಪಿದೆ.
ಬಲದಂಡೆ ಮತ್ತು ಎಡದಂಡೆ ಕಾಲುವೆಗಳ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಸದ್ಯಕ್ಕೆ ಅವುಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಜುಲೈ ತಿಂಗಳಿನಲ್ಲಿ ನಿರಂತರ ಮಳೆಯ ಮುನ್ಸೂಚನೆ ಇರುವುದರಿಂದ, ಜಲಾಶಯವು ಯಾವುದೇ ಕ್ಷಣದಲ್ಲಿ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ, ಸಂಭಾವ್ಯ ಪ್ರವಾಹ ಪರಿಸ್ಥಿತಿಯನ್ನು ತಪ್ಪಿಸಲು ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bhadra Dam Releases Water as Inflow Rises: Flood Alert Issued in Shivamogga
Bhadra Dam in Shivamogga releases 2,000 cusecs of water due to heavy inflow. With the reservoir nearing its maximum capacity and continuous rainfall expected in July, precautionary measures are being taken to prevent potential flooding.
Bhadra Dam, Shivamogga, water release, flood alert, reservoir level, heavy rainfall, Karnataka, water management, flood prevention , Hashtags (Comma-separated): #BhadraDam #Shivamogga #FloodAlert #KarnatakaRains #WaterRelease #DamSafety #Monsoon2025 #FloodPreparedness
Bhadra Dam Water Releases Water as Inflow Rise 11