Shimoga | Bhadra Canal Tragedy | ಹೊಳೆಹೊನ್ನೂರು ಹತ್ರ ಕೂಡ್ಲಿಗೆರೆ ಸಮೀಪ ಅರಬಿಳಚಿ ಗ್ರಾಮದಲ್ಲಿ ನಿನ್ನೆ ಭಾನುವಾರ ದುಃಖಕರ ಘಟನೆ ನಡೆದಿದೆ. ಬಟ್ಟೆ ಒಗೆಯುವ ಸಲುವಾಗಿ ಭದ್ರಾ ನಾಲೆಗೆ ಇಳಿದಿದ್ದ ಒಂದೇ ಕುಟುಂಬದ ನಾಲ್ವರು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.
ಬ್ಯಾಂಕ್ ಲೋನ್ ಹೆಸರಲ್ಲಿ ರಾಬ್ರಿ ಕೇಸ್! ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಪೊಲೀಸರಿಂದ ಭದ್ರಾವತಿಯ ಇಬ್ಬರು ಅರೆಸ್ಟ್!
ಘಟನೆಯಲ್ಲಿ ಅರಬಿಳಚಿ ಗ್ರಾಮದ ನಿವಾಸಿ 50 ವರ್ಷದ ನೀಲಾಬಾಯಿ, ಅವರ ಪುತ್ರ 23 ವರ್ಷದ ರವಿಕುಮಾರ್, ಪುತ್ರಿ 24 ವರ್ಷದ ಶ್ವೇತಾ ಹಾಗೂ ಅಳಿಯ 28 ವರ್ಷದ ಪರಶುರಾಮ್ ನೀರು ಪಾಲಾಗಿದ್ದಾರೆ ಎಂದು ಶಂಕಿಸಲಾಗಿದ್ದು, ಇದುವರೆಗೂ ನಾಲ್ವರು ಸಹ ಪತ್ತೆಯಾಗಿಲ್ಲ. ಅರಬಿಳಚಿ ಗ್ರಾಮದಲ್ಲಿ ಜನವರಿ 12 ರಿಂದ 16 ರವರೆಗೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ನಡೆದಿತ್ತು. ಈ ಜಾತ್ರೆಗೆ ನೀಲಾಬಾಯಿ ಅವರ ಮಗಳು ಶ್ವೇತಾ, ತಮ್ಮ ಪತಿ ಪರಶುರಾಮ್ ಮತ್ತು ಇಬ್ಬರು ಮಕ್ಕಳೊಂದಿಗೆ ತವರಿಗೆ ಬಂದಿದ್ದರು. ಶ್ವೇತಾ ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಪರಶುರಾಮ್ರೊಂದಿಗೆ ವಿವಾಹವಾಗಿದ್ದು.

ಹೊಳೆಹೊನ್ನೂರು ಸಮೀಪ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್!
ಜಾತ್ರೆ ಗಡಿಬಿಡಿಯಲ್ಲಿ ಬಟ್ಟೆ ತೊಳೆಯುವ ಸಲುವಾಗಿ ನಿನ್ನೆ ಭಾನುವಾರ 12 ಗಂಟೆ ಹೊತ್ತಿಗೆ ನಾಲ್ವರು ಎರಡು ಬೈಕ್ಗಳಲ್ಲಿ ಭದ್ರಾ ನಾಲೆಯ ಬಳಿಗೆ ತೆರಳಿದ್ದರು. ನಾಲೆಯ ಬಳಿ ತಾಯಿ ನೀಲಾಬಾಯಿ ಮತ್ತು ಮಗಳು ಶ್ವೇತಾ ಬಟ್ಟೆ ಒಗೆಯಲು ಮುಂದಾದಾಗ ಇಬ್ಬರೂ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ತಾಯಿ ಮತ್ತು ಸಹೋದರಿಯನ್ನು ರಕ್ಷಿಸುವ ಭರದಲ್ಲಿ ರವಿಕುಮಾರ್ ಹಾಗೂ ಅಳಿಯ ಪರಶುರಾಮ್ ಅವರು ಕೂಡಲೇ ನಾಲೆಗೆ ಧುಮುಕಿದ್ದಾರೆ. ಆದರೆ ನಾಲೆಯಲ್ಲಿ ನೀರಿನ ಹರಿವು ಹೆಚ್ಚಿದ್ದ ಕಾರಣ ನಾಲ್ವರು ಸಹ ದಡ ಸೇರಲಾಗದೆ ನೀರು ಪಾಲಾಗಿದ್ದಾರೆ. ಘಟನೆ ನಡೆದ ಸಮಯದಲ್ಲಿ ಸ್ಥಳದಲ್ಲಿ ಬೇರೆ ಯಾರೂ ಇರಲಿಲ್ಲವಾದ್ದರಿಂದ ತಕ್ಷಣಕ್ಕೆ ಸಹಾಯ ದೊರಕಿಲ್ಲ ಎನ್ನಲಾಗಿದೆ.
ಹೈವೇ ರೋಡಿಂದ ನೇರ ದೇವಸ್ಥಾನದ ಕಟ್ಟೆಗೆ ಕಾರು ಡಿಕ್ಕಿ! ಹೊಳೆಹೊನ್ನೂರು ಪಿಳ್ಳಂಗೇರಿ ಬಳಿ ಘಟನೆ
ಬಹಳ ಹೊತ್ತಿನ ನಂತರ ನಾಲೆಯ ದಡದ ಮೇಲೆ ಕೇವಲ ಬಟ್ಟೆಗಳು ಹಾಗೂ ಎರಡು ಬೈಕ್ಗಳು ಇರುವುದನ್ನು ಗಮನಿಸಿದ ಸ್ಥಳೀಯರು, ಅಲ್ಲಿ ಮನುಷ್ಯರು ಯಾರೂ ಕಾಣದಿದ್ದಾಗ ಅನುಮಾನಗೊಂಡು ತಕ್ಷಣವೇ ಪಟ್ಟಣದ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೈಕ್ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ನಾಲೆಗೆ ಬಂದವರು ಯಾರೆಂಬ ವಿಷಯ ದೃಢಪಟ್ಟಿದೆ. ಅಗ್ನಿಶಾಮಕ ಸಿಬ್ಬಂದಿ ನಿನ್ನೆಯಿಂದಲೇ ಕಾರ್ಯಾಚರಣೆ ನಡೆಸ್ತಿದ್ದು, ಇವತ್ತು ಕೂಡ ಕಾರ್ಯಾಚರಣೆ ಮುಂದುವರಿಯಲಿದೆ.

ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಕುರಿಗೂಟ ಕಡಿದಿದ್ದಕ್ಕೆ ಹಲ್ಲೆ ಕೇಸ್ ! ಎಸ್ಪಿ ಮಿಥುನ್ಕುಮಾರ್ ಸ್ಟೇಟ್ಮೆಂಟ್!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
