ಹೊಳೆಹೊನ್ನೂರು ಸರ್ಕಲ್​ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣ ಸಂಬಂಧ ಎಸ್​ಪಿ ಮಿಥುನ್​ ಕುಮಾರ್ ಮತ್ತೊಂದು ಹೆಜ್ಜೆ

ಹಂಚಿಕೊಳ್ಳಿ
WhatsApp Facebook X Telegram
ಹೊಳೆಹೊನ್ನೂರು ಸರ್ಕಲ್​ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣ ಸಂಬಂಧ ಎಸ್​ಪಿ ಮಿಥುನ್​ ಕುಮಾರ್ ಮತ್ತೊಂದು ಹೆಜ್ಜೆ

KARNATAKA NEWS/ ONLINE / Malenadu today/ Sep 9, 2023 SHIVAMOGGA NEWS  

ಹೊಳೆಹೊನ್ನೂರು ಮಹಾತ್ಮ ಗಾಂಧಿ ಸರ್ಕಲ್​ನಲ್ಲಿದ್ದ ರಾಷ್ಟ್ರಪಿತ ಗಾಂಧೀಜಿಯವರ ಪುತ್ತಳಿಯನ್ನು ದ್ವಂಸಗೊಳಿಸಿದ್ದ ಪ್ರಕರಣ ಶಿವಮೊಗ್ಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಘಟನೆ ನಡೆದ ಮೂರು ದಿನಗಳ ಅಂತರದಲ್ಲಿ ಭೇದಿಸಿದ್ದರು. ಈ ಪ್ರಕರಣದ  ತನಿಖೆಯಲ್ಲಿ ಯಶಸ್ಸು ಸಾಧಿಸಿದ ಅಧಿಕಾರಿಗಳಿಗೆ ಶಿವಮೊಗ್ಗ ಎಸ್​ಪಿ ಸನ್ಮಾನ ಮಾಡಿದ್ದಾರೆ. 

ನಿನ್ನೆ  08-09-2023 ರಂದು ಬೆಳಗ್ಗೆ ಶಿವಮೊಗ್ಗ ನಗರದ ಡಿಎಆರ್  ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ವಾರದ ಕವಾಯತ್ತಿನಲ್ಲಿ ಪಾಲ್ಗೊಂಡ  ಎಸ್​ಪಿ ಮಿಥುನ್ ಕುಮಾರ್​,  ಪ್ರಶಾಂತ್,  ಪೊಲೀಸ್ ನಿರೀಕ್ಷಕರು (ಸಶಸ್ತ್ರ), ಡಿಎಆರ್ ಶಿವಮೊಗ್ಗ  ರವರು ವಹಿಸಿದ್ದ ಕವಾಯಿತಿನ ಗೌರವ ವಂದನೆ ಸ್ವೀಕರಿಸಿದ್ರು. 

ನಂತರ ಹೊಳೆಹೊನ್ನೂರಿನಲ್ಲಿ ಮಹಾತ್ಮ ಗಾಂಧಿಜಿ ಪ್ರತಿಮೆಯನ್ನು ಬೀಳಿಸಿದ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ  ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದರು.  

ಈ ಸಂದರ್ಭದಲ್ಲಿ   ಪ್ರಭು, ಡಿ.ಟಿ, ಡಿವೈಎಸ್.ಪಿ ಡಿಸಿಆರ್.ಬಿ, ಶಿವಮೊಗ್ಗ,   ಕೃಷ್ಣಮೂರ್ತಿ, ಡಿವೈಎಸ್.ಪಿ ಡಿಎಆರ್, ಶಿವಮೊಗ್ಗ,   ಶಿವಾನಂದ ಮದರಕಂಡಿ, ಡಿವೈಎಸ್.ಪಿ ಶಿಕಾರಿಪುರ ಉಪ ವಿಭಾಗ,   ಗೋಪಾಲಕೃಷ್ಣ ಟಿ ನಾಯ್ಕ, ಡಿವೈಎಸ್.ಪಿ  ಸಾಗರ ಉಪ ವಿಭಾಗ,   ನಾಗರಾಜ್, ಡಿವೈಎಸ್.ಪಿ  ಭದ್ರಾವತಿ ಉಪ ವಿಭಾಗ, ಕು. ಬಿಂದುಮಣಿ ಆರ್ ಐಪಿಎಸ್ (ಪ್ರೊ), ಪೊಲೀಸ್ ಉಪ ನಿರೀಕ್ಷಕರು ಮತ್ತು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.


   

ಇನ್ನಷ್ಟು ಸುದ್ದಿಗಳು 


 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor