ಗಣಪತಿ ಹಬ್ಬ ಮತ್ತು ಈದ್ ಮಿಲಾದ್​! ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿ ಕರೆಂಟ್​, ಪರ್ಮಿಟ್​ , ಸ್ಪೀಕರ್​ ಲೈಸೆನ್ಸ್ ಎಲ್ಲಿ ಪಡೆಯಬೇಕು! ಜಿಲ್ಲಾಡಳಿತ ನೀಡಿದ ಮಾಹಿತಿ ಏನು! ವಿವರ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 9, 2023 SHIVAMOGGA NEWS  

ಈ ಸಲವೂ ಗಣಪತಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಶಿವಮೊಗ್ಗ ಸಜ್ಜುಗೊಳ್ಳುತ್ತಿದೆ. ಅದಾಗಲೇ ಗಣಪತಿ ಕಲೆಕ್ಷನ್ ಆರಂಭವಾಗಿದ್ದು, ಹೊಸ ಹೊಸ ಟ್ರೆಂಡಿಂಗ್ ಅಲಂಕಾರದ ಗಣೇಶನಿಗಾಗಿ, ಅಲಂಕಾರ ಸಮಿತಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. 

ಒಂದೆ ಕಡೆಯಲ್ಲಿ ಲೈಸೆನ್ಸ್​!

ಇನ್ನೂ 2023ನೇ ಸಾಲಿನ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗಣಪತಿ ಸಮಿತಿ ಮತ್ತು ಈದ್ ಮಿಲಾದ್ ಸಮಿತಿಯವರು ಪೊಲೀಸ್ ಇಲಾಖೆಯಿಂದ ಧ್ವನಿ ವರ್ಧಕ ಪರವಾನಿಗೆಯನ್ನು ಮೆಸ್ಕಾಂ ಇಲಾಖೆಯಿಂದ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಮತ್ತು ಮಹಾನಗರ ಪಾಲಿಕೆ / ನಗರ ಪಾಲಿಕೆ / ಪುರಸಭೆ / ತಾಲೂಕು ಕಛೇರಿಯಿಂದ ಅನುಮತಿಯನ್ನು ಪಡೆಯಬೇಕಿದೆ. 

ಈ  ಇಲಾಖೆಗಳಿಗೆ ಸಮಿತಿಯವರು ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ  ಮೂರು ಇಲಾಖೆಯ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುವಂತೆ ಏಕಗವಾಕ್ಷಿ (Single Window) ವ್ಯವಸ್ಥೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. ಜನರು ಈ ಕಚೇರಿಗೆ ಹೋಗಿ ಎಲ್ಲಾ ರೀತಿಯ ಅನುಮತಿಗಳನ್ನು ಪಡೆದುಕೊಳ್ಳಬಹುದಾಗಿದೆ.  ಸಂಬಂಧಪಟ್ಟ ಸಮಿತಿಯವರು ಸದರಿ ಸ್ಥಳಗಳಿಗೆ ಭೇಟಿ ನೀಡಿ ಅನುಮತಿ ಪಡೆದುಕೊಳ್ಳುವಂತೆ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೋರಿದೆ. 

 

May be an image of text


   

ಇನ್ನಷ್ಟು ಸುದ್ದಿಗಳು 


 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor