KARNATAKA NEWS/ ONLINE / Malenadu today/ Sep 9, 2023 SHIVAMOGGA NEWS
ಶಿವಮೊಗ್ಗ ಪೊಲೀಸರು ಬಹುಮುಖ್ಯವಾದ ಪ್ರಕರಣವೊಂದನ್ನ ಭೇದಿಸಿದ್ದಾರೆ. ಇಲ್ಲಿನ ಅಕ್ಕಿ ಮಾರಾಟ ಮಳಿಗೆಯಲ್ಲಿ ಅಕ್ಕಿ ಪ್ಯಾಕೆಟ್ಗಳನ್ನು ಕದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು. ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ
ಶಿವಮೊಗ್ಗ ನಗರದ ಸಾಗರ ರಸ್ತೆ ಎಪಿಎಂಸಿ ಮಾರ್ಕೇಟ್ ನಲ್ಲಿನ ಎನ್.ಬಿ.ಎಂ ಎಂಟರ್ ಪ್ರೈಸಸ್ ನಲ್ಲಿನ ಮಳಿಗೆಯಲ್ಲಿ ದಿನಾಂಕ 04/09/2023 ರಂದು ಅಕ್ಕಿ ಪಾಕೇಟ್ ಗಳು ಕಳ್ಳತನವಾಗಿತ್ತು. ಈ ಬಗ್ಗೆ ದಿನಾಂಕ 06/09/2023 ರಂದು ವಿನೋಬನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0172/2023 ಕಲಂ 380 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಆರೋಪಿಗಳ ಪತ್ತೆ ವಿಶೇಷ ತಂಡ
ಈ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ.ಕೆ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಯವರು ವಿಶೇಷ ತಂಡ ರಚಿಸಿದ್ದರು. ಬಿಂದುಮಣಿ ಆರ್.ಎನ್ ಐ.ಪಿ.ಎಸ್ (ಪ್ರೋ) ಪ್ರಭಾರ ವಿನೋಬನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸುನಿಲ್ ಬಿ.ಸಿ ಪಿಎಸ್ಐ ವಿನೋಬನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ಸಿಪಿಸಿ ರಾಜು, ಚಂದ್ರಾನಾಯ್ಕ್, ಮಲ್ಲಪ್ಪ ಮತ್ತು ಅರುಣಕುಮಾರ್ ರವರುಗಳನ್ನೊಳಗೊಂಡ ತಂಡ ಇದೀಗ ಪ್ರಕರಣವನ್ನು ಭೇದಿಸಿದ್ದಾರೆ.
ಆರೋಪಿಗಳ ಬಂಧನ
ದಿನಾಂಕಃ 07-09-2023 ರಂದು ಪ್ರಕರಣದ ಆರೋಪಿ 1) ಕುಮಾರ್ ಕೆ, 36 ವರ್ಷ, ಮೇಲಿನ ತುಂಗಾನಗರ ಶಿವಮೊಗ್ಗ ಟೌನ್ ಮತ್ತು 2) ಜಯಣ್ಣ, 40 ವರ್ಷ, ಅಣ್ಣಾನಗರ ಶಿವಮೊಗ್ಗ ಟೌನ್ ರವರನ್ನ ಪೊಲೀಸರು ಬಂಧಿಸಿದ್ದಾರೆ.
ಆರೋಪಿತರಿಂದ ಅಂದಾಜು ಮೌಲ್ಯ 1,07,800/- ರೂಗಳ ತಲಾ 26 ಕೆ.ಜಿ. ತೂಕದ 77 ಚೀಲಗಳಲ್ಲಿದ್ದ 20 ಕ್ವಿಂಟಾಲ್ ತೂಕದ ಅಕ್ಕಿ ಮತ್ತು ಅಂದಾಜು ಮೌಲ್ಯ 1,50,000/- ರೂಗಳ ಕೃತ್ಯಕ್ಕೆ ಉಪಯೋಗಿಸಿದ ಪ್ಯಾಸೆಂಜರ್ ಆಟೋವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಇನ್ನಷ್ಟು ಸುದ್ದಿಗಳು
ಬಾರ್ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್ ರೋಡ್ನಲ್ಲಿ ನಿನ್ನೆ ನಡೆದಿದ್ದೇನು?
ಸಚಿವರ ಶಾಕ್/ 48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT ನಲ್ಲಿದ್ದ ಈ ವ್ಯವಸ್ಥೆ!