ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಇಲ್ಲಿನ ಭದ್ರಾ ಕಾಲುವೆಯಲ್ಲಿ ಸುಮಾರು ನಲವತ್ತು ವರ್ಷ ಇರಬಹುದಾದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಮೃತದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿರುವ ಪೊಲೀಸರು, ಆಕೆಯ ವಾರಸುದಾರರು ತಿಳಿಯದೆ, ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಪ್ರತಿಭೆಯಿದ್ದರೆ ಸಾಕು! ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ಶೋಗೆ ಶಿವಮೊಗ್ಗದಲ್ಲಿಯೇ ನಡೆಯಲಿದೆ ಆಡಿಷನ್!
ನಡೆದ ಘಟನೆಯ ವಿವರ
ದಿನಾಂಕ ಡಿಸೆಂಬರ್ 8 ರಂದು ಅಮರಾವತಿ ಕ್ಯಾಂಪ್ ಮತ್ತು ನವಿಲೆ ಬಸಾಪುರದ ಮಧ್ಯದಲ್ಲಿರುವ ಚೌಡಮ್ಮ ದೇವಸ್ಥಾನದ ಬಳಿಯ ಭದ್ರಾ ಚಾನೆಲ್‌ನಲ್ಲಿ ಮಹಿಳೆಯ ಮೃತದೇಹ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ.
ಶಿವಮೊಗ್ಗ: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಸಾವು
ಗುರುತು ಮತ್ತು ಚಹರೆಗಳ ವಿವರ
ಮೃತಪಟ್ಟ ಮಹಿಳೆಗೆ ಸರಿಸುಮಾರು 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು, ಸ್ಪಷ್ಟವಾದ ಗುರುತುಗಳು ಲಭ್ಯವಾಗಿಲ್ಲ.ಉಳಿದಂತೆ ಮಹಿಳೆ ಸುಮಾರು 5 ಅಡಿ ಎತ್ತರವಿದ್ದಾಳೆ. ದುಂಡು ಮುಖ ಹೊಂದಿದ್ದಾಳೆ. ಮತ್ತು ಕೈಗಳಲ್ಲಿ ಹಸಿರು ಗಾಜಿನ ಬಳೆಗಳು ಇರುವುದು ಪತ್ತೆಯಾಗಿದೆ.
ಮಾಹಿತಿ ಇದ್ದರೆ ಕೂಡಲೇ ಸಂಪರ್ಕಿಸಿ
ಈ ಮೃತ ಮಹಿಳೆಯ ಕುರಿತು ಯಾವುದೇ ರೀತಿಯ ಮಾಹಿತಿ ಲಭ್ಯವಾದರೆ, ಸಾರ್ವಜನಿಕರು ಕೆಳಕಂಡ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳನ್ನು ಅಥವಾ ಪೊಲೀಸ್ ಕಂಟ್ರೋಲ್ ರೂಂ ಅನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಮೂಲಕ ಕೋರಲಾಗಿದೆ.

ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ: 100
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
