MALENADUTODAY.COM | SHIVAMOGGANEWS
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಶಿವಮೊಗ್ಗ ಜಿಲ್ಲೆಯ ಪೊಲೀಸ್ ವಿಭಾಗಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಹೊಸ ಹೊಸ ಪ್ರಯತ್ನಗಳ ಮೂಲಕ ಕ್ರೈಂ ಕಂಟ್ರೋಲ್ಗೆ ಮುಂದಾಗ್ತಿದ್ದಾರೆ. ಇದೀಗ ಏರಿಯಾಗಳಲ್ಲಿ ಬೀಟ್ ಸಮಿತಿ ಸಭೆ ನಡೆಸ್ತಿದ್ದು, ಈ ಪ್ರಯತ್ನ ಲೋಕಲ್ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
*ಸೊರಬದಲ್ಲಿ ಭೀಕರ ಅಪಘಾತ! ಇಬ್ಬರು ಬೈಕ್ ಸವಾರರ ಸಾವು!*
ಭದ್ರಾವತಿ ಓಲ್ಡ್ ಟೌನ್ ನಲ್ಲಿ ಬೀಟ್ ಮೀಟಿಂಗ್
ಇನ್ನೂ ಈ ಸಂಬಂಧ ಭದ್ರಾವತಿಯಲ್ಲಿ ಹಳೇನಗರ ಪೊಲೀಸ್ ಸ್ಟೇಷನ್ ಲಿಮಿಟ್ನಲ್ಲಿ (bhadravathi old town police station) ಪೊಲೀಸರು ಬೀಟ್ ಮೀಟಿಂಗ್ ನಡೆಸಿದ್ದಾರೆ. ಇಲ್ಲಿನ ಅನ್ವರ್ ಕಾಲೋನಿಯಲ್ಲಿ ಸಿಪಿಐ ಶಾಂತಿನಾಥ್ ಬೀಟ್ ಸಮಿತಿ ಸಭೆ ನಡೆಸಿ, ಕೆಲವೊಂದು ಮಾರ್ಗ ದರ್ಶನ ನೀಡಿದರು.
ಮನೆಗಳನ್ನು ಬಾಡಿಗೆಗೆ ಕೊಡುವ ಸಂದರ್ಭದಲ್ಲಿ, ಬಾಡಿಗೆದಾರರ ಪೂರ್ವಾಪರ ಮತ್ತು ದಾಖಲೆಗಳಾದ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಬೇಕು ಹಾಗೂ ಅದರ ಜೆರಾಕ್ಸ್ ಇಟ್ಟುಕೊಂಡಿರಬೇಕು ಎಂದು ತಿಳಿಸಿದರು.
ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಣ್ಣ ಪುಟ್ಟ ಘಟನೆಗಳು ಜರುಗಿದ ಸಂದರ್ಭದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದರಿಂದ, ಸಮಸ್ಯೆಯು ಚಿಕ್ಕದಿರುವಾಗಲೇ ಬಗೆಹರಿಸಬಹುದು. ಸಮಸ್ಯೆ ದೊಡ್ಡದಾಗುವುದು ತಡೆಯಬಹುದು ಎಂದರು.
ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ /ಪೊಲೀಸ್ ಕಂಟ್ರೋಲ್ ರೂಂ/೧೧೨ ತುರ್ತು ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದರು.

Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
