
ಶಿವಮೊಗ್ಗ : ಜಿಲ್ಲೆಯ ಭದ್ರಾವತಿ ತಾಲೂಕಿನ ಕೂಡ್ಲಿಗೆರೆಯ ಶರತ್ ಎಂಬುವವರ ಮನೆಯ ಬಳಿ ರಾತ್ರಿವೇಳೆ ಏಕಾಎಕಿ 3 ಕರಡಿಗಳು ಪ್ರತ್ಯಕ್ಷವಾಗಿವೆ. ಮೂರು ಕರಡಿಗಳು ಮನೆಯ ಸುತ್ತಾಮುತ್ತಾ ಸಂಚರಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕರಡಿ ಸಂಚಾರದಿಂದ ಗ್ರಾಮಸ್ಥರು ಭಯದಿಂದ ಓಡಾಡುವ ಪರಿಸ್ಥಿಸಿ ನಿರ್ಮಾಣವಾಗಿದೆ.


ಶಿವಮೊಗ್ಗ ಸಿಮ್ಸ್ ಪ್ರವೇಶಾತಿ: ಉಳಿದ ಸೀಟುಗಳಿಗೆ ಜ. 8 ರಂದು ನೇರ ಸಂದರ್ಶನ
ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಶರತ್ ಅವರ ಮನೆಯ ಆವರಣದಲ್ಲಿ ನಾಯಿಗಳು ನಿರಂತರವಾಗಿ ಬೊಗಳತೊಡಗಿವೆ. ಇದರಿಂದ ಅನುಮಾನಗೊಂಡ ಮನೆಯವರು ಹೊರಬರದೆ, ಸಿಸಿ ಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಂಗಳದಲ್ಲಿ ಮೂರು ಕರಡಿಗಳು ಸ್ವೇಚ್ಛೆಯಾಗಿ ಓಡಾಡುತ್ತಿರುವುದು ಪತ್ತೆಯಾಗಿದೆ. ಈ ದೃಶ್ಯಗಳನ್ನು ಕಂಡು ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.

ಕೂಡ್ಲಿಗೆರೆ ಭಾಗದಲ್ಲಿ ಕರಡಿಗಳ ಉಪಟಳ ಹೊಸದೇನಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಸುಮಾರು ಆರು ತಿಂಗಳ ಹಿಂದೆಯಷ್ಟೇ ಇದೇ ಪ್ರದೇಶದಲ್ಲಿ ಕರಡಿಯೊಂದು ಮೋಹನ್ ಎಂಬುವವರ ಮೇಲೆ ಅನಿರೀಕ್ಷಿತವಾಗಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು.
Bears Spotted in Bhadravathi s Kudligere



