basavanna vachana french / ಫ್ರೆಂಚ್​ ಭಾಷೆಯಲ್ಲಿ ಸಿಗಲಿದೆ ಬಸವಣ್ಣರ ವಚನ!

ಹಂಚಿಕೊಳ್ಳಿ
WhatsApp Facebook X Telegram
basavanna vachana french
basavanna vachana french

basavanna vachana french ಶರಣ ಚಳವಳಿಯ ಕನ್ನಡ ಕಾವ್ಯದ ಒಂದು ರೂಪವಾದ ವಚನಗಳು ಸದ್ಯದಲ್ಲಿಯೇ ಫ್ರೆಂಚ್​ ಭಾಷೆಯಲ್ಲಿ ಸಿಗಲಿದೆ. ಬೆಂಗಳೂರಿನಲ್ಲಿ ಪ್ರೆಂಚ್​ ಭಾಷೆಯಲ್ಲಿ ಅನುವಾದ ಗೊಂಡ ವಚನಗಳನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ ಮಾತನಾಡಿದ  ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜಟ್ಟಿ ಕರ್ನಾಟಕದ ವಚನ ಸಾಹಿತ್ಯವು ಪ್ರಪಂಚದಾದ್ಯಂತ ಹರಡಿದರೆ ಜಗತ್ತಿನಲ್ಲಿ ಇನ್ನು ಯುದ್ಧಗಳು ಇರುವುದಿಲ್ಲ ಎಂದರು.

basavanna vachana french/ ಫ್ರೆಂಚ್ ಭಾಷೆಯಲ್ಲಿ ಬಸವಣ್ಣರ ವಚನ

ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಮತ್ತು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಸಹಾಯ ಮಾಡಿದ ಕವಿತೆಗಳಿಗೆ ನಾವು ಜಗತ್ತಿನ ವ್ಯಾಪ್ತಿಯನ್ನು ತೆರೆಯುತ್ತಿದ್ದೇವೆ. ಜಗತ್ತಿನ ಎಲ್ಲಾ ಗ್ರಂಥಾಲಯಗಳು ವಚನ ಸಾಹಿತ್ಯದ ಪ್ರತಿಯನ್ನು ಹೊಂದಿದ್ದರೆ, ಜಗತ್ತು ಉತ್ತಮ ಸ್ಥಳವಾಗಲಿದೆ, ಯುದ್ಧಗಳಿಲ್ಲದ ಜಗತ್ತು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.  ಬಸವಣ್ಣನವರ ವಚನಗಳನ್ನು 27 ಭಾರತೀಯ ಭಾಷೆಗಳಲ್ಲಿ ಮತ್ತು ಫ್ರೆಂಚ್, ಸ್ಪ್ಯಾನಿಷ್, ಜರ್ಮನ್, ಚೈನೀಸ್, ನೇಪಾಳಿ, ಪರ್ಷಿಯನ್ ಮತ್ತು ಅರೇಬಿಕ್‌ನಂತಹ ವಿದೇಶಿ ಭಾಷೆಗಳಲ್ಲಿ ಭಾಷಾಂತರಿಸುವ ಯೋಜನೆಯನ್ನು ಬಸವ ಸಮಿತಿಯು ಕೈಗೆತ್ತಿಕೊಂಡಿದೆ ಎಂದ ಅವರು ಈ ಕೆಲಸವನ್ನು 2008 ರಲ್ಲಿ ಪ್ರಾರಂಭಿಸಲಾಗಿದ್ದು,  ಈಗಾಗಲೇ ಒಟ್ಟು 38 ಭಾಷೆಗಳಿಗೆ ವಚನಗಳನ್ನು ಅನುವಾದ ಮಾಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ  ಬೆಂಗಳೂರಿನಲ್ಲಿ ಫ್ರಾನ್ಸ್‌ನ ಕಾನ್ಸುಲ್ ಜನರಲ್ ಮಾರ್ಕ್ ಲ್ಯಾಮಿ, ಬಸವಣ್ಣರವರ 2,500 ವಚನಗಳ ಪುಸ್ತಕದ ಫ್ರೆಂಚ್ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಈ ಪುಸ್ತಕವು ಭಾರತ ಮತ್ತು ಫ್ರಾನ್ಸ್ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.  

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor