ಕೈಗೆ ಸಿಕ್ಕ 30 ಸಾವಿರ ರೂಪಾಯಿ ಮೌಲ್ಯದ ಮೊಬೈಲ್​ ನ್ನ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಡ್ರೈವರ್ ರವಿ!

Auto driver Ravi handed over a mobile phone worth Rs 30,000 to the police.

ಕೈಗೆ ಸಿಕ್ಕ 30 ಸಾವಿರ ರೂಪಾಯಿ ಮೌಲ್ಯದ ಮೊಬೈಲ್​ ನ್ನ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಡ್ರೈವರ್ ರವಿ!

KARNATAKA NEWS/ ONLINE / Malenadu today/ May 4, 2023 GOOGLE NEWS

ಶಿವಮೊಗ್ಗ/ ಇತ್ತಿಚೆಗೆ ಶಿವಮೊಗ್ಗ ಪೊಲೀಸ್ ಇಲಾಖೆ ನಗದು ಹಾಗೂ ಬೆಲೆಬಾಳುವ ವಸ್ತು ಇದ್ದ ಬ್ಯಾಗ್​ನ್ನ ಅದರ ಮಾಲೀಕರಿಗೆ ಹಿಂದುರಿಗಿಸಿದ್ದ ಆಟೋಚಾಲಕನನ್ನ ಸನ್ಮಾನಿಸಿತ್ತು. ಈ ಘಟನೆ ಬೆನ್ನಲ್ಲೆ ಮತ್ತೊಬ್ಬ ಆಟೋಚಾಲಕ ರವಿ ಎಂಬಾತ ತನಗೆ ಸಿಕ್ಕ ಮೊಬೈಲ್​ ಫೋನ್​ನ್ನ ಪೊಲೀಸರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. 

ಸಾಮಾನ್ಯವಾಗಿ ಮೊಬೈಲ್ ಕಳುವಾದರೆ ಮತ್ತೆ ಸಿಗೋದು ಡೌಟೇ. ಅಂತದ್ರಲ್ಲಿ ಮರೆವಿನಲ್ಲಿ ಬಿಟ್ಟುಹೋದ ಮೊಬೈಲ್​ನ್ನ ರವಿ, ಪೊಲೀಸ್ ಸ್ಟೇಷನ್​ಗೆ ಹೋಗಿ ನೀಡಿದ್ಧಾರೆ. 

30 ಸಾವಿರ ಮೌಲ್ಯದ ಮೊಬೈಲ್

ಕಳೆದ ಮೇ  2 ರಂದು ರಾತ್ರಿ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆಯ ಧ್ವಜದ ಕಟ್ಟೆಯ ಬಳಿ ರವಿಗೆ  ಮೊಬೈಲ್​ವೊಂದನ್ನ ಯಾರೋ ಬಿಟ್ಟುಹೋಗಿರುವುದು ಕಾಣಿಸಿದೆ. ತಕ್ಷಣ ಅದನ್ನ ಹೋಗಿ ತೆಗೆದಿಟ್ಟುಕೊಂಡಿದ್ಧಾರೆ. ಬಳಿಕ ಅದನ್ನ ತೆಗೆದುಕೊಂಡು ಹೋಗಿ ವಿನೋಬನಗರ ಪೊಲೀಸ್ ಸ್ಟೆಷನ್ ಪೊಲೀಸರಿಗೆ ಕೊಟ್ಟಿದ್ದಾರೆ. 

ಸುಮಾರು 30 ಸಾವಿರ ಮೌಲ್ಯದ ಮೊಬೈಲ್​   ಸೋಮಿನಕೊಪ್ಪದ ನಿವಾಸಿ ಇಂಜಿನಿಯರ್​ ಒಬ್ಬರಿಗೆ ಸೇರಿದ್ದು ಎನ್ನಲಾಗಿದ್ದು, ರವಿಯ ಪ್ರಾಮಾಣಿಕತೆಗೆ ಪೊಲೀಸ್ ಸಿಬ್ಬಂದಿ ಶ್ಲಾಘಿಸಿದ್ದಾರೆ. 

ಪ್ರಚಾರಕ್ಕೆ ಮಕ್ಕಳ ಬಳಕೆ! ಶಿವಮೊಗ್ಗ ಗ್ರಾಮಾಂತರ ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳ ವಿರುದ್ಧ ಎಫ್​ಐಆರ್

 ಶಿವಮೊಗ್ಗ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡಿರುವ ಸಂಬಂಧ ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಹಾಗೂ ಕುಂಸಿ ಪೊಲೀಸ್ ಸ್ಟೇಷನ್​  ನಲ್ಲಿ ಎಫ್​ಐಆರ್​ ದಾಖಲಾಗಿದೆ. 

ಪ್ರಕರಣ ಒಂದು 

ವಿಧಾನಸಭಾ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯವರು ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಂಡಿರುವ ಬಗ್ಗೆ  ಪ್ಲೈಯಿಂಗ್​ ಸ್ಕ್ವ್ಯಾಡ್​ ತಂಡದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1986 ಅಡಿ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಎರಡು

ಇದೇ ರೀತಿ ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಕ್ಕಳೊಂದಿಗೆ ಚುನಾವಣಾ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ಲೈಯಿಂಗ್​ ಸ್ಕ್ವ್ಯಾಡ್​  ತಂಡದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕಲಂ 14 ಅನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Malenadutoday.com Social media