Assault ಬೆಜ್ಜವಳ್ಳಿ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿಯ ಬೇಕರಿಯೊಂದರಲ್ಲಿ ಜ್ಯೂಸ್ ಖರೀದಿಸಿದ ಅದರ ಹಣ ನೀಡುವಂತೆ ಕೇಳಿದಾತನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಂಡಗದ್ದೆ ಮೂಲದ ವ್ಯಕ್ತಿಯೊಬ್ಬ ಬೆಜ್ಜವಳ್ಳಿಯಲ್ಲಿರುವ ಬೇಕರಿಯೊಂದಕ್ಕೆ ಬಂದು ಜ್ಯೂಸ್ ಖರೀದಿಸಿದ್ದಾನೆ. ಈ ವೇಳೆ ಬೇಕರಿ ಮಾಲೀಕ ಜ್ಯೂಸ್‌ನ ಹಣವನ್ನು ಕೇಳಿದಾಗ, ಆ ವ್ಯಕ್ತಿ ತಗಾದೆ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ನಿಮಗೆ ಏಕೆ ಹಣ ಕೊಡಬೇಕು ಎಂದು ಗಲಾಟೆಯನ್ನು ಪ್ರಾರಂಭಿಸಿದ್ದಾನೆ.
ಈ ಸಂದರ್ಭದಲ್ಲಿ ಹತ್ತಿರದ ಹೋಟೆಲ್‌ನಲ್ಲಿದ್ದ. ವ್ಯಕ್ತಿಯೊಬ್ಬರು ಜಗಳ ಬಿಡಿಸಲು ಬಂದಿದ್ದಾರೆ. ಆಗ, ಆ ಅಸಾಮಿ ಕೋಪದಿಂದ ಕೈಯಲ್ಲಿ ಹಿಡಿದಿದ್ದ ಕಾವು ಇಲ್ಲದ ಕೊಡಲಿಯಿಂದ ಜಗಳ ಬಿಡಿಸಲು ಬಂದ ವ್ಯಕ್ತಿಯ ಕಣ್ಣಿನ ಉಬ್ಬಿನ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಇತರರ ಮೇಲೂ ಹಲ್ಲೆಗೆ ಯತ್ನಿಸಿ, ಒಬ್ಬ ವ್ಯಕ್ತಿಯ ಕೈಗೆ ಕಚ್ಚಿ ಗಾಯಗೊಳಿಸಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ಜನರಿಗೆ ತೊಂದರೆ ನೀಡಿ, ಭಯಭೀತಿ ಹುಟ್ಟಿಸಿದ ಈ ಘಟನೆ ನಂತರ, ಈ ಅಸಾಮಿಯನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡುವಂತೆ ಒತ್ತಾಯಿಸಿ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Assault Man Attacks Baker Over Juice Payment Dispute

