ಶಿವಮೊಗ್ಗ: ಗೋಡೌನ್‌ನ ಬೀಗ ಒಡೆದು 8 ಲಕ್ಷ ಮೌಲ್ಯದ ಅಡಿಕೆ ಕಳ್ಳತನ

Areca Nut Theft ಶಿವಮೊಗ್ಗ :ಉದ್ಯಮಿಯೊಬ್ಬರಿಗೆ ಸೇರಿದ ಗೋದಾಮಿನ ಬೀಗವನ್ನು ಹೊಡೆದು ಕಳ್ಳರು ಸುಮಾರು  8, ಲಕ್ಷ ರೂಪಾಯಿ ಮೌಲ್ಯದ 20 ಚೀಲ ಅಡಿಕೆ ಕಳ್ಳತನ ಮಾಡಿರುವ ಘಟನೆ  ಶಿವಮೊಗ್ಗದ ಆಎಂಎಲ್​ ನಗರದಲ್ಲಿ ನಡೆದಿದೆ. 

ದೂರುದಾರರು ಅಡಿಕೆಯನ್ನು ಸಿಪ್ಪೆ ಸುಲಿದು, ಶಿವಮೊಗ್ಗದ ಬಾಬು ಆರ್.ಎಂ.ಎಲ್. ನಗರದಲ್ಲಿರುವ ತಮ್ಮ ಮಳಿಗೆಯಲ್ಲಿ ಇರಿಸಿದ್ದರು.ಸುಮಾರು 3 ತಿಂಗಳ ಹಿಂದೆ ಬೆಳೆದಿದ್ದ ಈ ಅಡಿಕೆಯನ್ನು ಒಣಗಿಸಿ ಮಾರಾಟಕ್ಕೆ ಸಿದ್ಧಪಡಿಸಲು ಸ್ಥಳಾವಕಾಶದ ಇಲ್ಲದೇ ಇದುದ್ದರಿಂದ. ಸೆಪ್ಟೆಂಬರ್ 21, 2025ರಂದು ಬೆಳಿಗ್ಗೆ ತಮ್ಮ ಮಳಿಗೆಯಿಂದ ಅನುಪಿನಕಟ್ಟೆಯಲ್ಲಿರುವ ಶೀಟಿನ ಗೋಡೌನ್‌ಗೆ ಹಾಕಿಸಿದ್ದರು. ಈ ಅಡಿಕೆಯನ್ನು ನೋಡಿಕೊಳ್ಳಲು ಪರಿಚಯಸ್ಥರೊಬ್ಬರಿಗೆ ಜವಬ್ದಾರಿಯನ್ನು ವಹಿಸಿದ್ದರು.ಆ ಪರಿಚಯಸ್ಥರು ಸೆಪ್ಟೆಂಬರ್ 22, ರಾತ್ರಿ ಸುಮಾರು 8:00 ಗಂಟೆಯವರೆಗೆ ಗೋಡೌನ್‌ನಲ್ಲಿ ಇದ್ದು, ನಂತರ ಬೀಗ ಹಾಕಿ ಹೋಗಿದ್ದರು. ಮರುದಿನ, ಸೆಪ್ಟೆಂಬರ್ 23, 2025ರ ಮಧ್ಯಾಹ್ನ ಸುಮಾರು 1:00 ಗಂಟೆಗೆ ಗೋಡೌನ್ ಬಳಿ ಹೋದಾಗ, ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಹೊಡೆದಿರುವುದು ಕಂಡುಬಂದಿದೆ.

ಬಾಗಿಲು ತೆಗೆದು ಒಳಗೆ ಹೋಗಿ ಪರಿಶೀಲಿಸಿದಾಗ, ದೂರುದಾರರರಿಗೆ ಶಾಕ್​ ಎದುರಾಗಿದ್ದು,  ಗೋಡೌನ್‌ನಲ್ಲಿದ್ದ ಅಡಿಕೆ ತುಂಬಿದ ಒಟ್ಟು 20 ಚೀಲಗಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.  ಈ ಸಂಬಂಧ  ತುಂಗಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಇದನ್ನು ಸಹ ಓದಿ :  ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್​ ಧರಿಸಿದ್ದ ಆಗಂತುಕ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Areca Nut Theft

Leave a Comment