Appaji gowda fan :ಭದ್ರಾವತಿಯಲ್ಲಿಯೊಬ್ಬ ಮಹಾ ಭಕ್ತ! ನಿತ್ಯವೂ ತಪ್ಪದು ಅಪ್ಪಾಜಿಯ ಆರಾಧನೆ! ಇದಕ್ಕೊಂದು ಸಲಾಂ ಹೇಳಲೇಬೇಕು!

Appaji gowda fan :ಭದ್ರಾವತಿಯಲ್ಲಿಯೊಬ್ಬ ಮಹಾ ಭಕ್ತ! ನಿತ್ಯವೂ ತಪ್ಪದು ಅಪ್ಪಾಜಿಯ ಆರಾಧನೆ! ಇದಕ್ಕೊಂದು ಸಲಾಂ ಹೇಳಲೇಬೇಕು!

ಸತ್ತವರನ್ನ ಎಷ್ಟು ದಿನ ತಾನೆ ನೆನೆಪಿಟ್ಟುಕೊಳ್ಳುತ್ತಾರೆ. ಅವರ ನೆನಪು ಮೆರೆಯದಿರಲಿ ಎಂದು ಫೋಟೋವೊಂದು ಗೋಡೆಯ ಮೊಳೆಗೆ ಹಾಕಿ, ಹಾರವೊಂದು ವಿಟ್ಟು, ಕರೆಂಟ್​ನ ಬಲ್ಪೊಂದನ್ನು ಹಚ್ಚಿ ಬಿಟ್ಟರೆ, ಅದೇ ಅಗಲಿದವರಿಗೆ ಸಲ್ಲಿಸುವ ಶಾಶ್ವತ ಗೌರವ ಎನ್ನುತ್ತದೆ ಈ ಹೈಟೆಕ್ ಕಲಿಯುಗ.

ಇಂತಹ ಕಾಲದಲ್ಲೂ ಭದ್ರಾವತಿಯಲ್ಲಿ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಾಯಕನಿಗೆ ಹೂವು,ಹಾರ, ಬತ್ತಿ ಬೆಳೆಗಿ ಪೂಜಿಸುತ್ತಿದ್ದಾನೆ. ಭದ್ರಾವತಿ ಬಸ್​ ನಿಲ್ದಾಣದ ಎದುರಲ್ಲಿರುವ ಆಟೋ ಸ್ಟಾಂಡ್​ನಲ್ಲಿ ಅಪ್ಪಾಜಿ ಗೌಡರ ಫೋಟೋವೊಂದನ್ನ ಹಾಕಲಾಗಿದೆ. ಕಳೆದ ಸೆಪ್ಟಂಬರ್​ ತಿಂಗಳಿನಲ್ಲಿ ಅಪ್ಪಾಜಿಗೌಡರು ಇಹಲೋಕ ತ್ಯಜಿಸಿದ್ದರು. ಅಂದಿನಿಂದ ಮಾಜಿ ಎಂಎಲ್​ಎಯವರ ಫೋಟೋಗೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದಾನೆ.

Malenadu today story / SHIVAMOGGA

ವೃತ್ತಿಯಲ್ಲಿ ಕಾರ್ಪೆಂಟರ್​ ಆಗಿರುವ ರಮೇಶ್​ರಿಗೆ ಅಪ್ಪಾಜಿ ಗೌಡರು ಎಂದು ತುಂಬಾನೆ ಇಷ್ಟವಂತೆ. ಮೇಲಾಗಿ ರಮೇಶ್​ರ ಕಷ್ಟಕ್ಕೆ ಅಪ್ಪಾಜಿಗೌಡರ ನೆರವು ಆಸರೆ ಸಹ ಸಿಕ್ಕಿತ್ತು. ಈ ಕಾರಣಕ್ಕೆ ನೆಚ್ಚಿನ ನಾಯಕನಿಗೆ, ಅವರು ಅಗಲಿದ ಮೇಲೂ, ಪೂಜ್ಯನೀಯ ಗೌರವವನ್ನು ಸಲ್ಲಿಸುತ್ತಿದ್ದಾರೆ.

ವಿಶೇಷ ಅಂದರೆ, ಇವತ್ತು ಅಪ್ಪಾಜಿ ಗೌಡರ ಜನ್ಮದಿನ, ಇವತ್ತು ವಿಶೇಷವಾಗಿ ರಮೇಶ್​ ಮಾಜಿ ಶಾಸಕರ ಪೋಟೋಗೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಇನ್ನೂ ಭದ್ರಾವತಿಯಲ್ಲಿ 25 ಲಕ್ಷಕ್ಕೂ ಅಧಿಕ ಹಣದಲ್ಲಿ, ಅಪ್ಪಾಜಿ ಗೌಡರ ಪ್ರತಿಮೆಯೊಂದು ತಯಾರಾಗುತ್ತಿದೆ. ಅದನ್ನು ಅಪ್ಪಾಜಿಯವರ ಪುಣ್ಯ ತಿಥಿಯಂದು ಸ್ಥಾಪಿಸಲಾಗುತ್ತದೆ.

Leave a Comment