ಮನೆಯೊಳಗೆ ಬಂದು ಹುಲಿ ದಾಳಿ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್! ಏನದು ಗೊತ್ತಾ?

Malenadu Today

KARNATAKA NEWS/ ONLINE / Malenadu today/ Jul 4, 2023 SHIVAMOGGA NEWS 

ಸಾಗರ ತಾಲ್ಲೂಕಿನ ಎಸ್.ಎಸ್. ಬೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹುಲಿಯೊಂದು ದಾಳಿ ನಡೆಸಿದ ಬಗ್ಗೆ ವರದಿಯಾಗಿತ್ತು.ಸದ್ಯ ಈ ದಾಳಿ ಮಾಡಿರುವುದು ಹುಲಿಯೋ ಅಥವಾ ಚಿರತೆಯೋ ಎಂಬುದು ಇದೀಗ ಭಾರೀ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಮರಾಠಿ ಗ್ರಾಮದ ಕಂಚಿಕೇರಿ ನಿವಾಸಿ ಗಣೇಶ್ ಎಂಬವರ ಮೇಲೆ ವನ್ಯಮೃಗ ದಾಳಿ ನಡೆಸಿತ್ತು. ಮನೆಯಲ್ಲಿ ಮಲಗಿದ್ದವರ ಮೇಲೆ ದಾಳಿ ನಡೆಸಿದ್ದ ಮೃಗ ಆನಂತರ  ಅಲ್ಲಿಂದ ಕಾಡಿನೊಳಗೆ ಓಡಿ ಹೋಗಿತ್ತು. 

ಮನೆಯೊಳಗೆ ನುಗ್ಗಿ ಟೈಗರ್ ಅಟ್ಯಾಕ್! ಸ್ವಲ್ಪದರಲ್ಲಿಯೇ ಉಳಿಯಿತು ಜೀವ! ಶಿವಮೊಗ್ಗ ಜಿಲ್ಲೆಯ ಗಡಿ ಭಾಗದ ಆ ಗ್ರಾಮದಲ್ಲಿ ನಡೆದಿದ್ದೇನು?

 ಜೂನ್ 28 ರಂದು ನಡೆದ ಈ ಘಟನೆಯಲ್ಲಿ ದಾಳಿ ಮಾಡಿದ್ದು ಹುಲಿ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ. ಅಲ್ಲದೆ ಅದು ಅವರ ಬಲವಾದ ನಂಬಿಕೆಯು ಆಗಿದೆ.  ಈ ಪ್ರದೇಶದಲ್ಲಿ ಏಕೈಕ ಹುಲಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅಲ್ಲಿ ಇಲ್ಲಿ ಕಂಡಿರೋ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಹುಲಿಯಿಲ್ಲ ಎಂಬುದು ಅರಣ್ಯ ಇಲಾಖೆಯ ವಾದ. ಸ್ಥಳೀಯ ಕಾಡುಗಳಲ್ಲಿ ಇದುವರೆಗೆ ಯಾವುದೇ ಹುಲಿ ಕಂಡಿದಿಲ್ಲ. ಹೀಗಾಗಿ ದಾಳಿ ಮಾಡಿದ್ದು ಚಿರತೆ ಎಂಬುದು ಅರಣ್ಯ ಇಲಾಖೆಯ ಅಭಿಪ್ರಾಯವಾಗಿದೆ. ಇನ್ನೂ ಈ ಸಂಬಂಧ ಕೆಲವು ತಜ್ಞರು ಕೂಡ ಹುಲಿ ಕಾಣಿಸಿಕೊಂಡಿರುವುದು ಶಂಕಾಸ್ಪದವಾಗಿದೆ. ಕಾಳಿ  ಹುಲಿ ಸಂರಕ್ಷಿತಾ ಅಭಯಾರಣ್ಯದಿಂದ ಹುಲಿ ಬಂದಿದ್ದರೂ ಬಂದಿರಬಹುದು ಎಂದು ಊಹೆ ಮಾಡುತ್ತಾರೆ.

ಇನ್ನೂ ಗಾಯಗೊಂಡಿರುವ ಗಣೇಶ್​ರವರು ಅವರ ಕುಟುಂಬಸ್ಥರಿಂದ ಈ ಬಗ್ಗೆ ಇನ್ನೂ ಸಮಗ್ರ ಮಾಹಿತಿ ಲಭ್ಯವಾಗಿಲ್ಲ. ಅರಣ್ಯ ಅಧಿಕಾರಿಗಳು ದಾಳಿ ಮಾಡಿದ್ದು ಚಿರತೆ ಎನ್ನುತ್ತಿದ್ದಾರೆ. ಇಲಾಖೆಯ ಮಾತು ನಂಬಲು ಸ್ಥಳೀಯರಿಗೆ ನಂಬಿಕೆ ಸಾಲುತ್ತಿಲ್ಲ. ಹೀಗಾಗಿ ಅಂದು ದಾಳಿ ನಡೆಸಿ ವನ್ಯಮೃಗ ಯಾವುದು ಎಂಬುದು ಗೊಂದಲಕಾರಿಯಾಗಿಯೆ ಮುಂದುವರಿದಿದೆ. 

 

Share This Article