BREAKINGNEWS / ಶಿವಮೊಗ್ಗದಲ್ಲಿ ಜೆಸಿಬಿ ಬಳಸಿ ATM ದೋಚಲು ಯತ್ನ! ನಿನ್ನೆ ರಾತ್ರಿ ನಡೆದಿದ್ದೇನು?

KARNATAKA NEWS/ ONLINE / Malenadu today/ Jul 26, 2023 SHIVAMOGGA NEWS  

ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಜೆಸಿಬಿ ಬಳಸಿ , ಎಟಿಎಂ ವೊಂದನ್ನ ದೋಚಲು ಯತ್ನಿಸಲಾಗಿದೆ. 

ಇಲ್ಲಿನ ಆಕ್ಸಿಸ್​ ಬ್ಯಾಂಕ್ (Axis Bank) ಎಟಿಎಂವೊಂದರಲ್ಲಿ ನಿನ್ನೆ ರಾತ್ರಿ ದುಷ್ಚರ್ಮಿಯೊಬ್ಬ ಜೆಸಿಬಿಯನ್ನು ಬಳಸಿ ಎಟಿಎಂ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ.  ಕಳ್ಳತನ ಮಾಡಿದ್ದ ಜೆಸಿಬಿಯಲ್ಲಿ ಎಟಿಎಂನ್ನ ನಿನ್ನೆ ರಾತ್ರಿ ದರೋಡೆ ಮಾಡಲು ಆರೋಪಿ ಮುಂದಾಗಿದ್ಧಾಲೇ ಬೀಟ್ ಪೊಲೀಸರು ಸ್ಥಳಕ್ಕೆ ಬಂದಿದ್ದರಿಂದ ನಡೆಯಬೇಕಿದ್ದ ಕಳ್ಳತನ ತಪ್ಪಿದಂತಾಗಿದೆ. 

ದುಷ್ಕರ್ಮಿಯು ಜೆಸಿಬಿ ಬಳಸಿ ಎಟಿಎಂ ಓಪನ್ ಮಾಡುತ್ತಿರುವುದನ್ನ ಗಮನಿಸಿದ ಪೊಲೀಸರು ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಆರೋಪಿ ಎಸ್ಕೇಪ್ ಆಗಿದ್ಧಾನೆ. ವಿನೋಬನಗರದ ಶಿವಾಲಯದ ಬಳಿಯಲ್ಲಿ ಆಕ್ಸಿಸ್ ಬ್ಯಾಂಕ್​ಗೆ ಸೇರಿದ ಎಟಿಎಂ (ATM) ನಲ್ಲಿ ಈ ಘಟನೆ ನಡೆದಿದೆ. ಸಮೀಪದಲ್ಲಿಯೇ ಇರುವ ಪೆಟ್ರೋಲ್ ಬಂಕ್​ ಬಳಿಯಲ್ಲಿ ನಿಲ್ಲಿಸಲಾಗಿದ್ದ JCB ಯನ್ನ ಕದ್ದ ಕಳ್ಳನೊಬ್ಬ, ಅದನ್ನ ಚಲಾಯಿಸಿಕೊಂಡು ಬಂದು ಎಟಿಎಂ ದರೋಡೆಗೆ ಮುಂದಾಗಿದ್ದ. ಅಷ್ಟರಲ್ಲಿ ಪೊಲೀಸರು ಅಲ್ಲಿಗೆ ಬಂದಿದ್ದಾರೆ. ಸದ್ಯ ಘಟನೆ ಸಂಬಂಧ ವಿನೋಬನಗರ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದು, ಜೆಸಿಬಿಯನ್ನು ತಮ್ಮ ವಶಕ್ಕೆ ಪಡೆದು ಆರೋಪಿಗಾಗಿ ಹುಡುಕಾಟ ನಡೆಸ್ತಿದ್ಧಾರೆ. 

ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರ ದಿಢೀರ್​ ಕಾರ್ಯಾಚರಣೆ! ಅರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ಹಾಫ್​ ಹೆಲ್ಮೆಟ್​ ಜಪ್ತಿ! ಕಾರಣವೇನು?

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು? 

Shivamogga Malenadu Today

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​ 

 

 

Leave a Comment