ಆಂಜನೇಯ ಸ್ವಾಮಿಗೆ ಕೈ ಮುಗಿದು, ಅಲ್ಲಮ ಪ್ರಭು ಜನ್ಮಸ್ಥಳದಲ್ಲಿ ₹1 ಕೋಟಿ ಕಾಮಗಾರಿ ಆರಂಭಿಸಿದ ಬಿವೈ ಬ್ರದರ್ಸ್​!

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025:  ಶಿರಾಳಕೊಪ್ಪ ಅನುಭವ ಮಂಟಪದ ಅಲ್ಲಮಪ್ರಭು ದೇವರ ಜನ್ಮಸ್ಥಳ ಮತ್ತು ಅವರ ಗದ್ದುಗೆಯ ಕ್ಷೇತ್ರದ ಅಭಿವೃದ್ಧಿ  ಸುಮಾರು ₹1 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಬಿವೈ ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿದ್ದಅಋಎ. 

 ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿರುವ ಸ್ಥಳೀಯ ಶಾಸಕ ಬಿ.ವೈ. ವಿಜಯೇಂದ್ರ ಅವರೊಂದಿಗೆ ಸಂಸದ ರಾಘವೇಂದ್ರ ಅವರು ಕಾಮಗಾರಿಗೆ ಚಾಲನೆ ನೀಡಿದ ಅವರು ಬಳ್ಳಿಗಾವಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ತಾವು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.  ಶಾಸಕ ಬಿ.ವೈ. ವಿಜಯೇಂದ್ರ ಅವರು ತಮ್ಮ ಅನುದಾನದಲ್ಲಿ ₹1 ಕೋಟಿ ಒದಗಿಸುವುದಾಗಿ ಘೋಷಿಸಿರುವುದು ಶ್ಲಾಘನೀಯ ಎಂದರು. ಹಿಂದಿನ ತಮ್ಮ ಸರ್ಕಾರದ ಅವಧಿಯಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ₹2 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಕೇಂದ್ರ ಪುರಾತತ್ವ ಇಲಾಖೆಯ ನಿಯಮಗಳು ಮತ್ತು ಸ್ಥಳೀಯವಾಗಿ ಉಂಟಾದ ಕೆಲವು ಗೊಂದಲಗಳಿಂದ ಆ ಅನುದಾನವು ವಾಪಸ್ ಹೋಗಿ, ಕೆಲಸವು ತಡವಾಗಿತ್ತು. ಆದರೆ, ಈ ಬಾರಿ ಯಾವುದೇ ಅಡೆತಡೆಗಳು ಎದುರಾದರೂ, ಈಗ ಆರಂಭವಾಗಿರುವ ಕೆಲಸ ಮತ್ತು ಸುತ್ತಮುತ್ತಲಿನ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವುದಾಗಿ ಸಂಸದರು ಭರವಸೆ ನೀಡಿದರು.

- Advertisement -

ಶಿವಮೊಗ್ಗ : ವೀರಭದ್ರ ಟಾಕೀಸ್​ ಬಳಿ ಕುಸಿದು ಬಿದ್ದಿದ್ದ ವ್ಯಕ್ತಿ ಸಾವು! ಕೈ ಮೇಲಿತ್ತು ಸೂರ್ಯನ ಟ್ಯಾಟು!

ಕ್ಷೇತ್ರದಲ್ಲಿ ಪುರಾತನ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಕೇಂದ್ರ ಪುರಾತತ್ವ ಇಲಾಖೆಯೇ ವಹಿಸಿಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಂಸದ ರಾಘವೇಂದ್ರ ಮಾಹಿತಿ ನೀಡಿದರು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ಕ್ಷೇತ್ರವನ್ನು ಸೇರಿದಂತೆ ಎಲ್ಲ ಪ್ರದೇಶಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿ ಸಹಕಾರ ನೀಡಿದ್ದಾರೆ ಎಂದು ಅವರು ಸ್ಮರಿಸಿದರು.

ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು, ಇ-ಪೇಪರ್​ ಓದಿ

ಶಾಸಕ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ಇಂತಹ ಪವಿತ್ರ ಐತಿಹಾಸಿಕ ತಾಣದ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳುವುದು ತಮ್ಮ ಪೂರ್ವಜನ್ಮದ ಸೌಭಾಗ್ಯ ಎಂದು ಭಾವಿಸುವುದಾಗಿ ತಿಳಿಸಿದರು. ಇಂದು ಬೆಳಿಗ್ಗೆ ಸಂಸದ ರಾಘವೇಂದ್ರ ಅವರು ಈ ಕ್ಷೇತ್ರದ ಅನುದಾನದ ಬಗ್ಗೆ ಪ್ರಸ್ತಾಪ ಮಾಡಿದ ಕೂಡಲೇ, ಇತರ ಎಲ್ಲ ಕೆಲಸಗಳನ್ನು ಬದಿಗಿಟ್ಟು ತಕ್ಷಣವೇ ₹1 ಕೋಟಿ ಅನುದಾನ ನೀಡುವುದಾಗಿ ಒಪ್ಪಿಕೊಂಡೆ ಎಂದರು. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಅದರಂತೆಯೇ, ನಮ್ಮ ಶಿಕಾರಿಪುರ ತಾಲೂಕು ಸಹ ವಿಜಯನಗರ ಸಾಮ್ರಾಜ್ಯದ ಕಾಲದಷ್ಟೇ ಅಭಿವೃದ್ಧಿಯನ್ನು ಕಂಡಿದೆ ಎಂದರು. 

Allama Prabhu Janmasthala B.Y. Raghavendra Launches Allama Prabhu Janmasthala Shiralakoppa Development ProjectMLA Vijayendra Pledges ₹1 Cr; Shivamogga News Today
Allama Prabhu Janmasthala B.Y. Raghavendra Launches Allama Prabhu Janmasthala Shiralakoppa Development ProjectMLA Vijayendra Pledges ₹1 Cr; Shivamogga News Today

ದೀಪಾವಳಿ ವಿಶೇಷ: ಶಿವಮೊಗ್ಗದ 300ಕ್ಕೂ ಹೆಚ್ಚು ಮಹಿಳಾ ಪೌರಕಾರ್ಮಿಕರಿಗೆ ಎಂ. ಶ್ರೀಕಾಂತ್ ಸೀರೆ ವಿತರಣೆ, ಗೌರವ ಸಮರ್ಪಣೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Allama Prabhu Janmasthala B.Y. Raghavendra Launches Allama Prabhu Janmasthala Shiralakoppa Development ProjectMLA Vijayendra Pledges ₹1 Cr; Shivamogga News Today

Share This Article
Leave a Comment

Leave a Reply

Your email address will not be published. Required fields are marked *