ಮಲೆನಾಡು ಟುಡೆ ಸುದ್ದಿ, 10 ಸೆಪ್ಟೆಂಬರ್ 2025 : ಕಳ್ಳತನ ಪ್ರಕರಣವೊಂದು ಎರಡೇ ಗಂಟೆಯಲ್ಲಿ ಕ್ಲೀಯರ್ ಆಗಿ ಆರೋಪಿಯೊಬ್ಬ ಸಿಕ್ಕಿಬಿದ್ದ ಘಟನೆ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣವೊಂದರಲ್ಲಿ ಆರೋಪಿ ಇಷ್ಟು ಬೇಗ ಸಿಕ್ಕಿಬಿದ್ದಿದ್ದು ಇದೆ ಮೊದಲು ಎಂಬಂತಹ ಮಾತುಗಳು ಇದೀಗ ಕೇಳಿಬರುತ್ತಿದೆ. ನಡೆದ ಘಟನೆಯ ವಿವರವನ್ನು ಗಮನಿಸುವುದಾದರೆ, ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿರುವ ರಾಮ ಮಂದಿರದಲ್ಲಿ ಕಳೆದ ಸೋಮವಾರ ತಡರಾತ್ರಿ ಕಳ್ಳತನ ನಡೆದಿತ್ತು. ದೇವಾಲಯದಲ್ಲಿದ್ದ ದೇವರ ಮೂರ್ತಿಯ ಕೈಯಲ್ಲಿದ್ದ ಬಿಲ್ಲು ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯು ತಾಲೂಕಿನ ಸಂಕದಹೊಳೆ ಗ್ರಾಮದ ಮನೋಜ್ ಅಲಿಯಾಸ್ ಗುಂಡ ಎಂದು ತಿಳಿದುಬಂದಿದೆ. ಆತನಿಂದ ಕಳುವಾಗಿದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Agumbe Police Arrest Temple Thief in Two Hours
Agumbe police arrest, Ram Mandir theft, Thirthahalli crime news, temple theft Karnataka, Report a theft, find Agumbe police station, contact Thirthahalli police, Agumbe police news, ಆಗುಂಬೆ ಕಳ್ಳತನ, ರಾಮ ಮಂದಿರ, ಪೊಲೀಸ್ ಕಾರ್ಯಾಚರಣೆ, ತೀರ್ಥಹಳ್ಳಿ ಕಳ್ಳ, ಮನೋಜ್, ದೇವಾಲಯ ಕಳ್ಳತನ