Agumbe : ತೀರ್ಥಹಳ್ಳಿ: ತಾಲೂಕಿನ ಆಗುಂಬೆಯ ಎವಿಎಂ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ದರ್ಶನ್ ಎಂಬ 14 ವರ್ಷದ ಬಾಲಕ ಶಾಲೆಯ ಹಾಸ್ಟೆಲ್‌ನಿಂದ ಆ.18 ರಿಂದ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಚಾಲಕನ ಚಹರೆ ನೋಡುವುದಾದರೆ ಈತ 4.6 ಅಡಿ ಎತ್ತರವಿದ್ದು., ಸಾಧಾರಣ ಮೈಕಟ್ಟು, ದುಂಡುಮುಖ, ಎಣ್ಣೆಕೆಂಪು ಮೈಬಣ್ಣ ಹೊಂದಿದ್ದಾನೆ. ಈತನ ಎಡ ಪಕ್ಕೆಯಲ್ಲಿ ಕಪ್ಪು ಮಚ್ಚೆಯಿರುತ್ತದೆ. ಈತ ಕನ್ನಡ ಮತ್ತು ತಮಿಳು ಮಾತಾನಾಡುತ್ತಿದ್ದು, ಹೊರಹೋಗುವಾಗ ಗ್ರೇ ಬಣ್ಣದ ಅರ್ಧ ತೋಳಿನ ಅಂಗಿ, ಜರ್ಕಿನ್, ಬ್ಲೂ ಬಣ್ಣದ ಪ್ಯಾಂಟ್, ಬಿಳಿ ಚಪ್ಪಲಿ, ಆಕಾಶ ನೀಲಿ ಬಣ್ಣದ ಬ್ಯಾಗ್ ಹಾಕಿಕೊಂಡಿರುತ್ತಾರೆ.
ಈ ಬಾಲಕನ ಸುಳಿವು ದೊರೆತಲ್ಲಿ ಶಿವಮೊಗ್ಗ ಎಸ್.ಪಿ ಕಚೇರಿ 08182-261400, ತೀರ್ಥಹಳ್ಳಿ ಡಿವೈಎಸ್‌ಪಿ 08181-220388, ಮಾಳೂರು ಸಿಪಿಐ 9480803333 ಹಾಗೂ ಆಗುಂಬೆ ಪಿಎಸ್‌ಐ 9480803314 ಇವರುಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.