agumbe accident : ಆಗುಂಬೆ ಸಮೀಪ ಕಾರುಗಳ ನಡುವೆ ಡಿಕ್ಕಿ | ಮೂವರಿಗೆ ಗಾಯ

prathapa thirthahalli
Prathapa thirthahalli - content producer

agumbe accident : ನವ ದಂಪತಿಗಳು ಕಾರಿನಲ್ಲಿ ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದ್ದು, ಮೂವರು ಗಾಯಗೊಂಡಿರುವ ಘಟನೆ ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಅರೇಕಲ್‌ ಕ್ರಾಸ್‌ ಬಳಿ ಘಟನೆ ಸಂಭವಿಸಿದೆ.

ಘಟನೆಯಲ್ಲಿ ನವವಧು ನಾಗರತ್ನ, ಅವರ ತಾಯಿ ಗೀತಾ, ಅಜ್ಜಿ ರಾಧಮ್ಮ ಗಾಯಗೊಂಡವರು

- Advertisement -

agumbe accident : ಹೇಗಾಯ್ತು ಅಪಘಾತ 

ನಾಗರತ್ನ ಮತ್ತು ಸುಬ್ರಹ್ಮಣ್ಯ ಅವರು ಇತ್ತೀಚೆಗೆ ವಿವಾಹವಾಗಿದ್ದರು. ಹಾಗಾಗಿ  ಕುಟುಂಬದವರ ಜೊತೆಗೆ ಮಂದಾರ್ತಿಗೆ ತೆರಳುತ್ತಿದ್ದರು. ಆ ವೇಳೆ ಸುಬ್ರಹ್ಮಣ್ಯ ಅವರು ಕಾರು ಚಲಾಯಿಸುತ್ತಿದ್ದು, ಮೇಘರವಳ್ಳಿ ಅರೇಕಲ್‌ ಕ್ರಾಸ್‌ ಸಮೀಪ ಎದುರಿನಿಂದ ಬಂದ ರಿಟ್ಜ್‌ ಕಾರು, ಸುಬ್ರಹ್ಮಣ್ಯರವರ ಕಾರ್​ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.ಈ ಘಟನೆ ಸಂಬಂಧ ಆಗುಂಬೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Comment

Leave a Reply

Your email address will not be published. Required fields are marked *