accident in shivamogga 07-06-2025 : ಆಟೋ ಹಾಗೂ ಬೈಕ್ ನಡುವೆ ಭೀಕರ ಅಪಘಾತ | ಆಟೋ ಚಾಲಕ ಸ್ಥಳದಲ್ಲೇ ಸಾವು

prathapa thirthahalli
Prathapa thirthahalli - content producer

ಬೈಕ್ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿದ್ದು ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿನೋಬಾ ನಗರದ ಪೋಲಿಸ್ ಚೌಕಿ ಬಳಿ ನಡೆದಿದೆ. ನ್ಯೂ ಮಂಡಳಿ ನಿವಾಸಿ ಜಫ್ರುಲ್ಲಾ ಯಾನೆ ಮೃತ ದುರ್ದೈವಿ.

accident in shivamogga : ಹೇಗಾಯ್ತು ಘಟನೆ

ವಿನೋಬಾ ನಗರದಿಂದ ಬರುತ್ತಿದ್ದ ಬೈಕ್ ಗೆ ಪೋಲಿಸ್ ಚೌಕಿ ಕಡೆಯಿಂದ ಬರುತ್ತಿದ್ದ ಆಟೋ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆಟೋ ಮಗುಚಿ ಬಿದ್ದಿದ್ದು, ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಸಾವನ್ನಪ್ಪಿದ್ದಾನೆ.
ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಟೋ ಹಾಗೂ ಬೈಕ್ ಎರಡನ್ನು ಪಶ್ಚಿಮ ಸಂಚಾರಿ ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಘಟನಾ ಸಂಬಂಧ ವಿನೊಬಾನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article