absconding Accused Arrested After 15 Years 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ: ಶಿರಸಿ ಪೊಲೀಸರ ಮಹತ್ವದ ಕಾರ್ಯಾಚರಣೆ ಯಶಸ್ವಿ
Uttara kannada / ಉತ್ತರ ಕನ್ನಡ : ಜಿಲ್ಲೆಯ ಶಿರಸಿ ನಗರ ಪೊಲೀಸ್ ಠಾಣೆಯ ಗುನ್ನ ನಂ: 39/2010 (ಸಿಸಿ ನಂ-255/2010, ಎಲ್.ಪಿ.ಸಿ ನಂ 02/2016) ಪ್ರಕರಣದಲ್ಲಿ ಕಳೆದ 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಮೋಹನ್ ಶಿಂದೆ (ಭದ್ರಾಪುರ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ನಿವಾಸಿ) ಎಂಬಾತನನ್ನು ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಚಂದಾವರದಲ್ಲಿ ಯಶಸ್ವಿಯಾಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೋಹನ್ ಶಿಂದೆ, ಶಿಕಾರಿಪುರ, ಶಿರಾಳಕೊಪ್ಪ, ಚೆನ್ನಗಿರಿ, ಹೊನ್ನಾಳಿ, ಮತ್ತು ಭಟ್ಕಳ ಸೇರಿದಂತೆ ಹಲವು ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ . ಈತನನ್ನು ಪಿಎಸ್‌ಐ ನಾಗಪ್ಪರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ವಿಶ್ವನಾಥ ಭಂಡಾರಿ (ಸಿ.ಎಚ್.ಸಿ-936), ಸದ್ದಾಂ ಹುಸೇನ್ (ಸಿ.ಪಿ.ಸಿ-1303), ಮತ್ತು ಚನ್ನಬಸಪ್ಪ ಕ್ಯಾರಕಟ್ಟಿ (ಸಿ.ಪಿ.ಸಿ-1638) ಕಾರ್ಯಾಚರಣೆ ನಡೆಸಿ ಹಿಡಿದಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಶಿರಸಿ ಪೊಲೀಸ್, ತಲೆಮರೆಸಿಕೊಂಡಿದ್ದ ಆರೋಪಿ ಬಂಧನ, ಮೋಹನ ಶಿಂದೆ, ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ, ಚಂದಾವರ, ಶಿಕಾರಿಪುರ, ಪೊಲೀಸ್ ಕಾರ್ಯಾಚರಣೆ, ಅಪರಾಧ ಸುದ್ದಿ, ಪೊಲೀಸ್ ಪ್ರಶಂಸೆ, ನಾಗಪ್ಪ ಪಿಎಸ್‌ಐ, ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಗೀತಾ ಪಾಟೀಲ್,

Shirasi Police, absconding accused arrest, Mohana Shinde, Uttara Kannada District, Honnavar, Chandavar, Shikaripura, police operation, crime news, police commendation, Nagappa PSI, SP M Narayan, Geetha Patil ,absconding Accused Arrested After 15 Years
ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನಾದ ಮೋಹನ್ ತಂದೆ ಮಾಧು ಶಿಂದೆ, ಸಾ : ಭದ್ರಾಪುರ, ಶಿಕಾರಿಪುರ,ಶಿವಮೊಗ್ಗ ನೇಯವನ ಬಂಧನ: #ಶಿರಸಿ ನಗರ ಪೋಲೀಸರ ಕಾರ್ಯಾಚರಣೆ. @DgpKarnataka @Rangepol_WR @KarnatakaCops #sirsi pic.twitter.com/RWUpcIEZFd
— SP Karwar (@spkarwar) June 7, 2025